ಮಣೂರು ಪಡುಕರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೇರಣಾ ಶಿಬಿರವನ್ನು ಗೀತಾನಂದ ಟ್ರಸ್ಟ್ ಪ್ರವರ್ತಕ ಆನಂದ ಸಿ.ಕುಂದರ್ ಉದ್ಘಾಟಿಸಿ ಮಾತಾನಾಡಿದರು. ರಮೇಶ್ ಕುಂದರ್, ಉದಯ ಗಾಂವ್ಕರ್, ಮಂಜುನಾಥ ಹೊಳ್ಳ ಉಪಸ್ಥಿತರಿದ್ದರು.  
ಉಡುಪಿ

ವಿದ್ಯಾರ್ಥಿಗಳಲ್ಲಿ ನಿರಂತರ ಶ್ರಮವಿರಲಿ

ಇಂದಿರಾ ಎನ್ ಕೆ
ಕೋಟ: ವಾರ್ಷಿಕ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯದ ಅತ್ಯಮೂಲ್ಯ ಭಾಗ. ಪರೀಕ್ಷೆ ಪೂರ್ವ ತಯಾರಿಗೆ ವಿದ್ಯಾರ್ಥಿಗಳು ನಿರಂತರವಾಗಿ ಶ್ರಮಿಸಬೇಕು ಎಂದು ಗೀತಾನಂದ ಟ್ರಸ್ಟ್ ಪ್ರವರ್ತಕ ಆನಂದ ಸಿ.ಕುಂದರ್ ಹೇಳಿದರು.
ಮಣೂರು ಪಡುಕರೆ ಗೀತಾನಂದ ಫೌಂಡೇಶನ್, ಕೋಟ ಮೊಗವೀರ ಯುವ ಸಂಘಟನೆ, ಮನಸ್ಮಿತಾ ಫೌಂಡೇಶನ್ ಆಶ್ರಯದಲ್ಲಿ ಮಣೂರು ಪಡುಕರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಹತ್ತನೇ ತರಗತಿ ವಿದ್ಯಾರ್ಥಿಗಳಿಗೆ 3 ದಿನದ ಪ್ರೇರಣಾ ಶಿಬಿರ ಉದ್ಘಾಟಿಸಿ ಮಾತಾನಾಡಿದರು.
ಪ್ರಾಂಶುಪಾಲ ಡೆನ್ನಿಸ್ ಚಾಂಜಿ ಕೆ., ಮೊಗವೀರ ಯುವ ಸಂಘಟನೆ ಅಧ್ಯಕ್ಷ ರಂಜಿತ್ ಕುಮಾರ್ ಮಾತನಾಡಿದರು. ವಾಹಿನಿ ಯುವಕ ಮಂಡಲದ ರಮೇಶ್ ಕುಂದರ್, ಉದಯ ಗಾಂವ್ಕರ್, ಮಂಜುನಾಥ ಹೊಳ್ಳ, ಗಣೇಶ್ ಶೆಟ್ಟಿಗಾರ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಶಿಕ್ಷಕ ರಾಮ್‌ದಾಸ್ ನಾಯಕ್ ಸ್ವಾಗತಿಸಿದರು. ಗೀತಾನಂದ ಪೌಂಢೇಶನ್‌ನ ರವಿಕಿರಣ ವಂದಿಸಿದರು. ವಿದ್ಯಾರ್ಥಿಗಳಾದ ಮೈತ್ರಿ, ಪೂರ್ವಿ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕ ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಸಿದರು.