ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನವನ್ನು ಎಡನೀರು ಶ್ರೀ ಉದ್ಘಾಟಿಸಿದರು. ಪ್ರಮುಖರಾದ ಡಾ.ಸಿ.ಸೋಮಶೇಖರ್, ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ಡಾ.ಬಾಲಕೃಷ್ಣ ಎಸ್.ಮದ್ದೋಡಿ ಮೊದಲಾದವರು ಉಪಸ್ಥಿತರಿದ್ದರು.  
ಉಡುಪಿ

ಮಕ್ಕಳಲ್ಲಿರಲಿ ಕನ್ನಡ ಭಾಷಾಭಿಮಾನ

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಮನೆಯಲ್ಲಿ ಕನ್ನಡದ ಬಗ್ಗೆ ಮಕ್ಕಳಲ್ಲಿ ಪ್ರೀತಿ ಹುಟ್ಟುವ ರೀತಿಯ ವಾತಾವರಣ ಪಾಲಕರು ನಿರ್ಮಿಸಬೇಕಾಗಿದ್ದು, ಇದರಿಂದ ಕನ್ನಡ ಭಾಷೆ, ಸಂಸ್ಕೃತಿ ಉಳಿಯಲು ಸಾಧ್ಯ ಎಂಬುದಾಗಿ ಎಡನೀರು ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ.
ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಸಂಯುಕ್ತ ಆಶ್ರಯದಲ್ಲಿ ಕನ್ನಡ ಭವನ ಸಭಾಂಗಣದ ದಿ.ಡಾ.ಲಲಿತಾ ಎಸ್.ನ್.ಭಟ್ ವೇದಿಕೆಯಲ್ಲಿ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿಕಟಪೂರ್ವ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿ ಕನ್ನಡ ಧ್ವಜ, ಡಾ.ಬಾಲಕೃಷ್ಣ ಎಸ್.ಮದ್ದೋಡಿ ಧ್ವಜಾರೋಹಣ ನೆರವೇರಿಸಿದರು.
ಪಮ್ಮಿ ಕೊಡಿಯಾಲಬೈಲ್, ಇರಾ ನೇಮು ಪೂಜಾರಿ, ಜಿ.ಕೆ.ಮಾಧವ ರಾವ್, ಕರವೇ ರಾಜ್ಯ ಸಂಚಲಕ ನಂ.ವೇ.ವಿಜಯಕುಮಾರ್, ಡಾ.ಸುರೇಶ್ ನೆಗಳಗುಳಿ, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಡಾ.ಶರಣಪ್ಪ ಗಬ್ಬೂರ್, ಡಾ.ಇಂಚರಾ ನಾರಾಯಣ ಸ್ವಾಮಿ, ಎ.ವಿ.ಪ್ರದೀಪ್ ಕುಮಾರ್, ವಿ.ಬಿ.ಕುಳಮರ್ವ, ಡಾ.ಕೊಳ್ಚಪ್ಪೆ ಗೋವಿಂದ ಭಟ್, ಜಯಾಂದ ಪೆರಾಜೆ, ಡಾ.ಶಾಂತಾ ಪುತ್ತೂರು, ಸುಧಾರಾಣಿ ಅಣಂಗೂರು ಉಪಸ್ಥಿತರಿದ್ದರು.

ನಾಡೋಜ ಡಾ.ಕಯ್ಯರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ, ರಾಜಶ್ರೀ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರಕವಿ ಗೋವಿಂದ ಪೈ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ, ಭರವಸೆಯ ಬೆಳಕು, ಭರವಸೆಯ ಶಿಕ್ಷಣ ರತ್ನ, ಕನ್ನಡ ಪಯಸ್ವಿನಿ ಅಚೀವ್‌ಮೆಂಟ್ ಅವಾರ್ಡ್, ಸಮಾಜ ಸೇವಾ ರತ್ನ ಮತ್ತು ಗಡಿನಾಡು ಕಾಸರಗೋಡು ಕನ್ನಡ ಭವನದ ಗೌರವಾರ್ಪಣೆ ಪ್ರದಾನ ಮಾಡಲಾಯಿತು.
ಕನ್ನಡ ಭವನ ಸ್ಥಾಪಕರಾದ ಡಾ.ವಾಮನ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಸ್ವಾಗತಿಸಿದರು. ದಿವ್ಯಶ್ರೀ ಕೆರೆಮನೆ ಪ್ರಾರ್ಥಿಸಿದರು. ವಿಶಾಲಾಕ್ಷ ಪುತ್ರಕಳ ನಿರೂಪಿಸಿದರು. ವಸಂತ ಕೆರೆಮನೆ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ

ಕಾರ್ಯಕ್ರಮದ ಅಂಗವಾಗಿ ಕನ್ನಡದ ಮೆರವಣಿಗೆಯನ್ನು ಕೋಲಾರ ಸವರ್ಣಭೂಮಿ ಫೌಂಡೇಶನಿನ ಬಿ.ಶಿವಕುಮಾರ್ ಕೋಲಾರ ಉದ್ಘಾಟಿಸಿದರು. ಕರ್ನಾಟಕ ಜಾನಪದ ಪರಿಷತ್ ಸಂಸ್ಥಾಪಕ ಡಾ.ಎಸ್.ಬಾಲಾಜಿ ಕಲಾಮೇಳ ಉದ್ಘಾಟಿಸಿದರು. ಸಮೂಹ ಶಾಸ್ತ್ರೀಯ ನೃತ್ಯ, ಸಮೂಹ ನೃತ್ಯ, ಸಮೂಹ ಜಾನಪದ ನೃತ್ಯ, ಸಮೂಹ ನೃತ್ಯ ರೂಪಕ, ಯಕ್ಷಗಾನ, ಕಥಕ್ಕಳಿ, ಡೊಳ್ಳು ಕುಣಿತ, ತಮಟೆ, ಪೂಜಾ ಕುಣಿತ, ಪಟ ಕುಣಿತ ಮತ್ತು ಕಲಾ ಪ್ರದರ್ಶನ ಪ್ರಸ್ತುತಗೊಂಡಿತು.