ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವದ ಚಪ್ಪರ ಮುಹೂರ್ತವನ್ನು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ನೆರವೇರಿಸಿದರು. ಶಿವರಾಮ ಭಟ್, ವೆಂಕಟ್ರಮಣ ಭಟ್, ಜಗನ್ನಾಥ ರೈ ಇತರರಿದ್ದರು.  
ಉಡುಪಿ

ಧರ್ಮ ವಿರೋಧಿ ಶಕ್ತಿಗಳ ಪರಾಭವವಾಗಲಿ

ವಿಜಯವಾಣಿ ಸುದ್ದಿಜಾಲ ಬದಿಯಡ್ಕ
ದೇವಾಲಯಗಳ ಕಾರ್ಯ ಪದ್ಧತಿ ಕಾಪಾಡಿಕೊಂಡು ಬರುವುದು ನಮ್ಮ ಆದ್ಯ ಕರ್ತವ್ಯ. ವ್ಯವಸ್ಥೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಉದನೇಶ್ವರನ ಇಚ್ಛೆ, ಅನುಗ್ರಹದಿಂದ ಪೆರಡಾಲ ಕ್ಷೇತ್ರವು ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗಿದೆ. ಚಪ್ಪರ ಮುಹೂರ್ತ ನಡೆದರೆ ಅಲ್ಲಿ ಉತ್ಸವದ ಕಳೆ ಆರಂಭವಾದಂತೆ. ಪರಾಭವ ಸಂವತ್ಸರ ಆರಂಭವಾಗಿದ್ದು, ಧರ್ಮಕ್ಕೆ ವಿರುದ್ಧ ವಿರುವ ಶಕ್ತಿಗಳಿಗೆ ಪರಾಭವ ಉಂಟಾಗಲಿ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಆಶೀರ್ವಚನ ನೀಡಿದರು.
ಏ.17ರಿಂದ 28ರವರಗೆ ನಡೆಯಲಿರುವ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾಪನೆ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಶುಕ್ರವಾರ ಚಪ್ಪರ ಮುಹೂರ್ತ ನೆರವೇರಿಸಿ ಮಾತನಾಡಿದರು.
ಪ್ರಧಾನ ಅರ್ಚಕ ಶಿವರಾಮ ಭಟ್ ಪೆರಡಾಲ ಪೂಜೆ ನೆರವೇರಿಸಿದರು. ಚಪ್ಪರ ನಿರ್ಮಾಣ ವಹಿಸಿಕೊಂಡ ಶಿವಪ್ರಸಾದ್ ಹೆಗ್ಡೆ ಅವರಿಗೆ ಶ್ರೀಗಳು ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ರೈ, ಕಾರ್ಯದರ್ಶಿ ನಿರಂಜನ ರೈ, ಸೇವಾ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ, ಪ್ರಮುಖರಾದ ಸೂರ್ಯನಾರಾಯಣ ಬಿ., ಸೀತಾರಾಮ ನವಕಾನ, ಪಿ.ಜಿ.ಚಂದ್ರಹಾಸ ರೈ, ತಿರುಪತಿ ಕುಮಾರ ಭಟ್, ಉದಯಶಂಕರ ಪಿ.ಎಸ್., ಗಣೇಶ್‌ಪ್ರಸಾದ ಕಡಪ್ಪು, ಸತೀಶ ಪುದ್ಯೋಡು, ಡಾ.ಶ್ರೀಶಕುಮಾರ ಇತರರು ಇದ್ದರು. ಬ್ರಹ್ಮಕಲಶೋತ್ಸವ ಚಪ್ಪರ ಸಮಿತಿ ಅಧ್ಯಕ್ಷ ಭಾಸ್ಕರ ಪಂಜಿತ್ತಡ್ಕ, ಸಂದೀಪ್ ಪೆರಡಾಲ, ವೆಂಕಟ್ರಮಣ ಭಟ್ ಪುದ್ಯೋಡು ಹಾಗೂ ಸದಸ್ಯರು ನೇತೃತ್ವ ವಹಿಸಿದ್ದರು.