ಸುರಭಿ ಎಜುಕೇಶನಲ್ ಮತ್ತು ಚಾರಿಟೆಬಲ್ ಟ್ರಸ್ಟ್‌ಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ.ರೈ ಚಾಲನೆ ನೀಡಿದರು. ಟ್ರಸ್ಟ್ ಅಧ್ಯಕ್ಷ ಜಾನ್ ಕ್ವಾಡ್ರಸ್, ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಕನ್ನಂಗಾರು ಜುಮಾ ಮಸೀದಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಮಿಲ್ಾ ಮೊದಲಾದವರಿದ್ದರು. 
ಉಡುಪಿ

ಮಕ್ಕಳು ಭವಿಷ್ಯದ ಉತ್ತಮ ಪ್ರಜೆಗಳಾಗಲಿ

ವಿಜಯವಾಣಿ ಸುದ್ದಿಜಾಲ ಮೂಲ್ಕಿ
ದೊಡ್ಡವರ ಸ್ನೇಹ ಬೇಡ. ಆದರೆ ಸ್ನೇಹಿತರನ್ನು ದೊಡ್ಡವರಾಗಿ ಕಾಣುವ ಜಾನ್ ಕ್ವಾಡ್ರಸ್ ಅವರ ಚಿಂತನೆಯನ್ನು ವಿದ್ಯಾರ್ಥಿಗಳು ಸಾಕಾರಗೊಳಿಸಬೇಕು. ಮಕ್ಕಳು ಭವಿಷ್ಯದ ಉತ್ತಮ ಪ್ರಜೆಗಳಾಗಿ ಮೂಡಿಬರಲು ಯಾವುದೇ ಸಹಕಾರ ನೀಡಲು ಸಿದ್ಧ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ.ರೈ ಹೇಳಿದರು.
ಮೂಲ್ಕಿ ಸುರಭಿ ಇಲೆಕ್ಟ್ರಾನಿಕ್ಸ್ ಆವರಣದಲ್ಲಿ ಬುಧವಾರ ಸುರಭಿ ಎಜುಕೇಶನಲ್ ಮತ್ತು ಚಾರಿಟೆಬಲ್ ಟ್ರಸ್ಟ್‌ಗೆ ಚಾಲನೆ ನೀಡಿ ಮಾತನಾಡಿದರು.
ಟ್ರಸ್ಟ್ ಅಧ್ಯಕ್ಷ ಜಾನ್ ಕ್ವಾಡ್ರಸ್ ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ, ಕಾಪು ತಾಲೂಕಿನ 2026-27ನೇ ಸಾಲಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿರುವ ಆರ್ಥಿಕ ಹಿಂದುಳಿದ 230 ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ, ಸಮವಸ್ತ್ರ ಹೊಲಿಸಲು ಆರ್ಥಿಕ ನೆರವು ವಿತರಿಸಲಾಯಿತು.
ಮೂಲ್ಕಿ ಕೋಸೆಸಾಂವ್ ಅಮ್ಮನವರ ಚರ್ಚ್ ಧರ್ಮಗುರು ಆಂತೋನಿ ಸೆರಾ, ಶಕ್ತಿನಗರ ಸಿಎಸ್‌ಐ ಜೋಶಿಯಾ ಸ್ಮಾರಕ ಚರ್ಚ್ ಧರ್ಮಗುರು ಶಶಿಕಲಾ ಅಂಚನ್ ಆಶೀರ್ವಚಿಸಿದರು. ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಕನ್ನಂಗಾರು ಜುಮಾ ಮಸೀದಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಮಿಲ್ಾ, ಸಾಹಿತಿ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್, ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಪ್ರಧಾನ ಸಂಚಾಲಕಿ ಭಾನುಮತಿ ಶೆಟ್ಟಿ ಕಕ್ವಗುತ್ತು, ವಕೀಲ ರವೀಶ್ ಕಾಮತ್ ಮುಖ್ಯ ಅತಿಥಿಗಳಾಗಿದ್ದರು. ದಿನೇಶ್ ಶೆಟ್ಟಿ, ಪ್ರಾಪ್ತಿ ಆರ್.ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ವಾಸು ಪೂಜಾರಿ ಸ್ವಾಗತಿಸಿದರು. ಸುಧಾಕರ ಕರ್ಕೇರ ವಂದಿಸಿದರು.