ತಾರಾನಾಥ ರೈ ನಗ್ರಿ ದಂಪತಿಗೆ ಕಲ್ಲಂಗಳ ಗುತ್ತು ವಾಸಪ್ಪ ಪೆರ್ಗಡೆ ಕೃಷಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹೇಮನಾಥ ಶೆಟ್ಟಿ ಕಾವು, ದಯಾನಂದ ರೈ, ಎ.ನವೀನ್ ಭಂಡಾರಿ, ಮನೋಹರ್ ರೈ ಮನವಳಿಕೆ ಗುತ್ತು ಇತರರು ಇದ್ದರು.
ಕಡಬ: ಬಂಟ ಸವಾಜ ಸಾವಾಜಿಕ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಬಂಟ ಸವಾಜ ಬಲಿಷ್ಠ ಸವಾಜವಾಗಿ ಬೆಳೆಯಬೇಕು ಎಂದು ಪುತ್ತೂರು ತಾಲೂಕು ಬಂಟರ ಸಂ
ದ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಹೇಳಿದರು.
ಮಂಗಳೂರಿನ ಬಂಟರ ಯಾನೆ ನಾಡವರ ವಾತೃ ಸಂದ ಪುತ್ತೂರು ತಾಲೂಕು ಸಮಿತಿ ವಾಜಿ ಸಂಚಾಲಕ ದಯಾನಂದ ರೈ ಮನವಳಿಕೆ ಗುತ್ತು, ಭಾರತೀಯ ರಿಸರ್ವ್ ಬ್ಯಾಂಕ್ ವಾಜಿ ನಿರ್ದೇಶಕ ಎ.ನವೀನ್ ಭಂಡಾರಿ, ಮನೋಹರ ರೈ ಮನವಳಿಕೆ ಗುತ್ತು ಇದ್ದರು. ಆಟಿಕ ಕೂಟ ಕಾರ್ಯಕ್ರಮವನ್ನು ಶತಾಯುಷಿ ಅಂತಕ್ಕೆ ಎನ್.ಶೆಟ್ಟಿ ಕೇವಳ ಪಟ್ಟೆ ಉದ್ಘಾಟಿಸಿದರು.
ಅರ್ಹರಿಗೆ ವಿದ್ಯಾರ್ಥಿವೇತನ, ಸಾಧಕರಿಗೆ ಸನ್ಮಾನ, ಕಲ್ಲಂಗಳ ಗುತ್ತು ವಾಸಪ್ಪ ಪೆರ್ಗಡೆ ಕೃಷಿ ಪ್ರಶಸ್ತಿಯನ್ನು ತಾರಾನಾಥ ರೈ ನಗ್ರಿ ದಂಪತಿಗೆ ನೀಡಿ ಗೌರವಿಸಲಾಯಿತು. ಆಲಂಕಾರು ವಲಯ ಬಂಟರ ಸಂದ ಅಧ್ಯಕ್ಷ ಪ್ರಶಾಂತ ರೈ ಮನವಳಿಕೆ ಸಭಾಧ್ಯಕ್ಷತೆ ವಹಿಸಿದ್ದರು.
ಆಲಂಕಾರು ವಲಯ ಮಹಿಳಾ ಬಂಟರ ಸಂ ಅಧ್ಯಕ್ಷೆ ಧನ್ಯಶ್ರೀ ಪಿ.ರೈ, ಯುವ ಬಂಟರ ಸಂದ ಅಧ್ಯಕ್ಷ ಗುರುಕಿರಣ್ ಶೆಟ್ಟಿ ಉಪಸ್ಥಿತರಿದ್ದರು. ಆಲಂಕಾರು ವಲಯ ಬಂಟರ ಸಂದ ಕಾರ್ಯದರ್ಶಿ ಲೋಕನಾಥ ರೈ ಸ್ವಾಗತಿಸಿದರು. ರೂಪಾ ಜೆ.ರೈ, ವಿವೇಕ್ ರೈ ನಿರೂಪಿಸಿದರು. ಮಮತಾ ಶೆಟ್ಟಿ ಅಂಬರಾಜೆ ವಂದಿಸಿದರು. ನೃತ್ಯ, ಹಾಡು, ತುಳುನಾಡ ವೈಭವ ಸಾಂಸ್ಕೃಕ ಕಾರ್ಯಕ್ರಮ ನಡೆಯಿತು.