ಉಡುಪಿಯ ಮೂಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಿಸಲಾಯಿತು. ಶ್ರೀನಿವಾಸರಾವ್ ಕೆ., ಸುನೀತಾ, ಚೈತ್ರಾ ಹೆಬ್ಬಾರ್, ಜಯಶ್ರೀ ಇದ್ದರು.
* ಶ್ರೀನಿವಾಸ ರಾವ್ ಕೆ. ಆಶಯ
* ರಾಷ್ಟ್ರೀಯ ಯುವದಿನ ಆಚರಣೆ
ಉಡುಪಿ: ಪ್ರೀತಿ-ಪ್ರೇಮ ಹಾಗೂ ದುಶ್ಚಟಗಳಿಗೆ ಬಲಿಯಾಗಿ ಇಂದಿನ ಯುವ ಪೀಳಿಗೆ ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಸ್ವಾಮಿ ವಿವೇಕಾನಂದ ಅವರ ಸಂದೇಶಗಳು ದಾರಿದೀಪವಾಗಿದೆ. ದೇಶಕ್ಕಾಗಿ ಜೀವನ ಮುಡಿಪಾಗಿಟ್ಟ ಮಹಾಪುರುಷರು ನಮಗೆಲ್ಲರಿಗೂ ಆದರ್ಶವಾಗಬೇಕು. ದಾರಿ ತಪ್ಪಿ ನಡೆಯುತ್ತಿರುವ ಇಂದಿನ ಜನಾಂಗಕ್ಕೆ ವಿವೇಕರ ವಿಚಾರಧಾರೆ ಸ್ಫೂರ್ತಿಯಾಗಬೇಕು ಎಂದು ಸಮಾನ ಮನಸ್ಕ ಕನ್ನಡಿಗರ ವೇದಿಕೆಯ ಅಧ್ಯಕ್ಷ ಶ್ರೀನಿವಾಸ ರಾವ್ ಕೆ. ಆಶಯ ವ್ಯಕ್ತಪಡಿಸಿದರು.
ಉಡುಪಿಯ ಮೂಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯಿಂದ ಸೋಮವಾರ (ಜ.12) ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂದೇಶಗಳು ಬದುಕಿಗೆ ನೆಮ್ಮದಿ
ಶಾಲೆಯ ಮುಖ್ಯೋಧ್ಯಾಪಕಿ ಸುನೀತಾ ಮಾತನಾಡಿ, ವಿದೇಶಿಯರಿಗೆ ಭಾರತದ ಕುರಿತು ಇದ್ದ ಅಪನಂಬಿಕೆಯನ್ನು ವಿವೇಕಾನಂದರು ಹೋಗಲಾಡಿಸಿದರು. ವಿಶ್ವಕ್ಕೆ ಭಗವದ್ಗೀತೆಯ ಮಹತ್ವ ತಿಳಿಸುವಲ್ಲಿ ಯಶಸ್ವಿಯಾಗಿದ್ದರು. ದೇಶದ ಜನರು ಧರ್ಮಾಚರಣೆ ಬಿಡುತ್ತಿದ್ದು, ಅಶಾಂತಿಯ ಜೀವನ ನಡೆಸುತ್ತಿದ್ದಾರೆ. ಇಂಹ ಸ್ಥಿತಿಯಲ್ಲಿ ವಿವೇಕಾನಂದರ ಸಂದೇಶಗಳು ಬದುಕಿಗೆ ನೆಮ್ಮದಿ ತರಲಿದೆ ಎಂದರು.
ಶಿಕ್ಷಕಿ ಚೈತ್ರಾ ಹೆಬ್ಬಾರ್ ಮಾತನಾಡಿ, ಹಿಂದೂ ಧರ್ಮದ ಪ್ರಸಾರದೊಂದಿಗೆ ದೇಶದ ಸಾಂಸ್ಕೃತಿಕ ಮೂಲ ವಿವರಿಸುವಲ್ಲಿ ಸ್ವಾಮಿ ವಿವೇಕಾನಂದರು ಯಶಸ್ವಿಯಾಗಿದ್ದಾರೆ. ಅವರು ತೋರಿದ ಆದರ್ಶದ ದಾರಿಯಲ್ಲಿ ಮುನ್ನಡೆದರೆ ಭ್ರಷ್ಟಾಚಾರಮುಕ್ತ ಭಾರತ ನಿರ್ಮಾಣ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಜಯಶ್ರೀ, ವಿಜಯಶ್ರೀ, ಸವಿತಾ, ಉಷಾ, ಪ್ರೇಮಾ, ಮಾಲತಿ, ಭವ್ಯಾ, ಚಂದ್ರಿಕಾ, ಶೀಲಾ, ಸಂಗೀತಾ, ಸ್ವಾತಿ, ಸುರೇಶ್, ಅನುರಾಧಾ ಜಿ.ಎಸ್., ಲಕ್ಷ್ಮೀ, ರಾಘವೇಂದ್ರ, ಚಂದ್ರಶೇಖರ್, ಶ್ರೀನಿವಾಸ್ ಡಿ., ಸುದೇಶ್ ಪೂಜಾರಿ, ರವೀಂದ್ರ ನಾಯಕ್ ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿವೇಕಾನಂದರು ಚಿಕ್ಕಂದಿನಿಂದಲೇ ಧರ್ಮ ಸಂರಕ್ಷಿಸುವ ಕನಸು ಕಂಡಿದ್ದರು. ಯುವ ಶಕ್ತಿಯ ಮೇಲೆ ಅಪಾರ ನಂಬಿಕೆ ಹೊಂದಿದ್ದರು. ಎಂದು ಹೇಳಿದರು. ಜೀವನಕ್ಕಿಂತ ಸಂಬಂಧ ಮತ್ತು ಆ ಸಂಬಂಧಗಳು ಜೀವಂತಿಕೆ ಹೊಂದಿರುವುದು ಮುಖ್ಯ. ಯಾರನ್ನೇ ದ್ವೇಷಿಸಿ ಅಥವಾ ಪ್ರೀತಿಸಿ. ದ್ವೇಷಿಸಿದರೆ ಮನಸ್ಸಿನಲ್ಲಿರುತ್ತಾರೆ. ಪ್ರೀತಿಸಿದರೆ ಹೃದಯದಲ್ಲಿರುತ್ತಾರೆ. ಆಯ್ಕೆ ನಿಮ್ಮದು. ಪ್ರತಿಯೊಬ್ಬರಲ್ಲೂ ದೇವರನ್ನು ಕಾಣಿರಿ ಎಂಬ ವಿವೇಕಾನಂದರ ಯೋಚನೆ ಇಂದಿಗೂ ಪ್ರಸ್ತುತ.