ಮಾತ್ಕಲ್-ಹಾಲಿಕೋಡ್ಲು ಸಂಪರ್ಕಿಸುವ ರಸ್ತೆ ಅಭಿವೃದ್ಧಿಪಡಿಸಿರುವುದು.
ವಿಜಯವಾಣಿ ಸುದ್ದಿಜಾಲ ಹೆಬ್ರಿ
ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಮದ ಮಾತ್ಕಲ್- ಹಾಲಿಕೋಡ್ಲು ಸಂಪರ್ಕಿಸುವ ರಸ್ತೆ ಹದೆಗೆಟ್ಟು ಮಳೆಗಾಲದಲ್ಲಿ ಕೆಸರುಗದ್ದೆಯಂತಾಗುತ್ತಿತ್ತು. ಈ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಹಾಗೂ ಪಾದಚಾರಿಗಳು ನರಕಯಾತನೆ ಅನುಭವಿಸುತ್ತಿದ್ದರು. ರಸ್ತೆ ದುರಸ್ತಿ ಮಾಡಬೇಕೆಂಬ ಈ ಭಾಗದ ಜನರ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದೆ.
ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಕೇಂದ್ರ ಸರ್ಕಾರದ ಪಿಎಂ ಜನ್‌ಮನ್ ಯೋಜನೆಯಡಿ 2.5 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಡಾಂಬರು ರಸ್ತೆ ನಿರ್ವಾಣವಾಗಲಿದೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಜನ ಜಾತಿಯ ಮಹಾ ನ್ಯಾಯ ಅಭಿಯಾನದಡಿ ಮಾತ್ಕಲ್ ಕೊರಗ ಕಾಲನಿ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಅನುಷ್ಠಾನಗೊಳಿಸಿದೆ.
ವಿಜಯವಾಣಿ ಜನಪರ ಕಾಳಜಿ
ಮಾತ್ಕಲ್ ಹಾಲಿಕೋಡ್ಲು ಸಂಪರ್ಕಿಸುವ ಕೊರಗ ಕಾಲನಿ ರಸ್ತೆಯ ಸಮಸ್ಯೆ ಕುರಿತು ‘ವಿಜಯವಾಣಿ’ ಪತ್ರಿಕೆ ಜನಪರ ಕಾಳಜಿಯಿಂದ ನಿರಂತರ ವರದಿ ಪ್ರಕಟಿಸಿತ್ತು. ಇದರ ಪರಿಣಾಮವೆಂಬಂತೆ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿತ್ತು.
ಸಂಸದರೊಂದಿಗೆ ದಿನ ನಿಗದಿ ಮಾಡಿ ರಸ್ತೆ ಉದ್ಘಾಟಿಸಲಾಗುವುದು. ಬಹಳ ಸಮಯದಿಂದ ಈ ರಸ್ತೆ ಅಭಿವೃದ್ಧಿ ಬೇಡಿಕೆ ಇದ್ದು, ಇಂದು ಎಲ್ಲರ ಆಶಯದಂತೆ ಉತ್ತಮ ರಸ್ತೆ ನಿರ್ವಾಣವಾಗಿದೆ. ಸಮಾಜದ ಎಲ್ಲ ಸ್ತರದ ಜನರು ಮುಖ್ಯವಾಹಿನಿಗೆ ಬರಬೇಕೆಂಬ ಆಶಯ ಹೊಂದಿ, ಇದರ ಭಾಗವಾಗಿ ವಾತ್ಕಲ್ ಕೊರಗ ಕಾಲನಿ ರಸ್ತೆ ಅಭಿವೃದ್ಧಿ ವಾಡಲಾಗಿದೆ.
ಜನರ ಬೇಡಿಕೆಯಂತೆ ಉತ್ತಮ ಗುಣಮಟ್ಟದ ರಸ್ತೆಯನ್ನು ನಿರ್ಮಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಈಗ ಜನರಿಗೆ ಬಳಕೆಗೆ ಯೋಗ್ಯವಾಗಿದೆ.
ಮಾತ್ಕಲ್-ಹಾಲಿಕೋಡ್ಲು ಸಂಪರ್ಕಿಸುವ ರಸ್ತೆ ಅಭಿವೃದ್ಧಿಪಡಿಸಿರುವುದು.
*****************************