ಬೃಹತ್ ರಕ್ತದಾನ ಶಿಬಿರ, ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಕ್ಯಾಂಪ್ಕೋ ನಿರ್ದೇಶಕ ದಯಾನಂದ ಹೆಗ್ಡೆ ಉದ್ಘಾಟಿಸಿದರು. ಉದ್ಯಮಿ ಗೋಪಿನಾಥ್ ಭಟ್ ಮುನಿಯಾಲು, ವೈದ್ಯೆ ಡಾ.ಚಂದ್ರಿಕಾ ಕಿಣಿ ಮೊದಲಾದವರಿದ್ದರು. 
ಉಡುಪಿ

ಬೃಹತ್ ರಕ್ತದಾನ, ನೇತ್ರ ತಪಾಸಣೆ ಶಿಬಿರ

ಹೆಬ್ರಿ: ಲಯನ್ಸ್ ಕ್ಲಬ್ ಮುನಿಯಾಲು, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್, ಜಿಲ್ಲಾ ರಕ್ತ ನಿಧಿ, ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರ ಜ್ಯೋತಿ ಚಾರಿಟೆಬಲ್ ಟ್ರಸ್ಟ್, ಪ್ರಾಥಮಿಕ ಆರೋಗ್ಯ ಕೇಂದ್ರ ದೊಂಡೇರಂಗಡಿ, ಯತೀಶ್ ಶೆಟ್ಟಿ ಅಭಿಮಾನಿ ಬಳಗ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ, ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.
ಕ್ಯಾಂಪ್ಕೋ ನಿರ್ದೇಶಕ ದಯಾನಂದ ಹೆಗ್ಡೆ ಉದ್ಘಾಟಿಸಿದರು. ಉದ್ಯಮಿ ಗೋಪಿನಾಥ್ ಭಟ್ ಮುನಿಯಾಲು, ವೈದ್ಯೆ ಡಾ.ಚಂದ್ರಿಕಾ ಕಿಣಿ ಮಾತನಾಡಿದರು.
ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಸಂದೇಶ್ ಶೆಟ್ಟಿ, ವೈದ್ಯ ಡಾ.ಪ್ರಮೋದ್ ಕುಮಾರ್ ಹೆಗ್ಡೆ, ಜಿಲ್ಲಾ ರಕ್ತ ನಿಧಿಯ ಡಾ.ನವಮಿ, ಪ್ರಸಾದ್ ನೇತ್ರಾಲಯದ ಡಾ.ಟ್ರೀನಾ, ಲಯನ್ಸ್ ಕ್ಲಬ್ ಮುನಿಯಾಲು ಇದರ ಸಂಪತ್ ಪೂಜಾರಿ, ಶಂಕರ್ ಶೆಟ್ಟಿ, ಮಂಜುನಾಥ್ ಕೆ., ಕಡ್ತಲ ಗ್ರಾಪಂ ಅಧ್ಯಕ್ಷ ಸುಕೇಶ್ ಹೆಗ್ಡೆ, ಪ್ರಮುಖರಾದ ಜಗದೀಶ್ ಹೆಗ್ಡೆ, ಪ್ರಸನ್ನ ದೇವಾಡಿಗ, ದೀಕ್ಷಿತ್ ಶೆಟ್ಟಿ, ಯೋಗೀಶ್ ಮಲ್ಯ, ಯತೀಶ್ ಶೆಟ್ಟಿ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು. ಅಶೋಕ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಅಖಿಲೇಶ್ ಶೆಟ್ಟಿ ವಂದಿಸಿದರು.