(ಸಾಂದರ್ಭಿಕ ಚಿತ್ರ) 
ಉಡುಪಿ

ಜೂ.12ರಂದು ಪುರುಷೋತ್ತಮ ಯೋಗ ಪಾರಾಯಣ

* ಪುತ್ತಿಗೆ ಸುಗುಣೇಂದ್ರ ಶ್ರೀಗಳಿಂದ ಆಯೋಜನೆ

* ಗೀತಾ ಮಂದಿರದಲ್ಲಿ ಸಾಮೂಹಿಕ ಕಾರ್ಯಕ್ರಮ

ಉಡುಪಿ: ಪುತ್ತಿಗೆ ಮಠಾಧೀಶ, ವಿಶ್ವಮಾನ್ಯ ಯತಿಕುಲ ಚಕ್ರವರ್ತಿ ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಅವರ ಪಟ್ಟದ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರ ಸಂಕಲ್ಪದಂತೆ ಅಧಿಕ ಮಾಸದ ನಿಮಿತ್ತ ಮತ್ತು ಲೋಕಕಲ್ಯಾಣಕ್ಕಾಗಿ 'ಪುರುಷೋತ್ತಮ ಯೋಗ ಪಾರಾಯಣ' ಕಾರ್ಯಕ್ರಮ ಆಯೋಜಿಸಲಾಗಿದೆ.
ಉಡುಪಿ ಶ್ರೀಕೃಷ್ಣ ಮಠದ ಸನಿಹದಲ್ಲಿರುವ ಗೀತಾ ಮಂದಿರದ ಶ್ರೀ ಪುತ್ತಿಗೆ ನೃಸಿಂಹ ಆಡಿಟೋರಿಯಂನಲ್ಲಿ ಜೂ.12ರಂದು ಮಧ್ಯಾಹ್ನ 2ರಿಂದ ಸಾಮೂಹಿಕವಾಗಿ ಪಾರಾಯಣ ನಡೆಯಲಿದೆ. ಶ್ರೀಮದ್ಭಗವದ್ಗೀತೆಯ 15ನೇ ಅಧ್ಯಾಯವನ್ನು 33 ಬಾರಿ ಪಾರಾಯಣ ಮಾಡಲಾಗುವುದು.
ಸಾಮೂಹಿಕ ಪಾರಾಯಣವು ಶಾಸ್ತ್ರೀಯ ನೃತ್ಯಾಭಿವ್ಯಕ್ತಿ ಮತ್ತು ಕಿರು ನಿರೂಪಣಾ ವ್ಯಾಖ್ಯಾನದೊಂದಿಗೆ ನಡೆಯಲಿದೆ. ಜತೆಗೆ ಹಿತಮಿತವಾಗಿ ಹಿಮ್ಮೇಳ ವಾದ್ಯಗಳನ್ನೂ ಬಳಸಿಕೊಂಡು ವೈಶಿಷ್ಟ್ಯಪೂರ್ಣವಾಗಿ ಕಾರ್ಯಕ್ರಮ ಸಂಯೋಜಿಸಲಾಗಿದೆ. ಆಸಕ್ತ ಭಗವದ್ಭಕ್ತರು ಮುಕ್ತವಾಗಿ ಪಾಲ್ಗೊಳ್ಳಬಹುದು.
ಗೀತಾ ಮಂದಿರ.
ಆನ್​ಲೈನ್​ https://forms.gle/WHVDbW3YQ6crNU6W8 ಲಿಂಕ್​ ಮೂಲಕವೂ ಪುರುಷೋತ್ತಮ ಯೋಗ ಪಾರಾಯಣದಲ್ಲಿ ಪಾಳ್ಗೊಳ್ಳಲು ಅವಕಾಶವಿದೆ. ಹೆಸರು ನೋಂದಾಯಿಸಬಹುದು. ಅಧಿಕ ಮಾಸದ ನಿಮಿತ್ತ ವಿಶೇಷ ರಿಯಾಯಿತಿಯ ಗ್ರಂಥ ದಾನ ಸೇವೆಗೂ ಅವಕಾಶವಿದೆ. ಮಾಹಿತಿಗಾಗಿ ಮೊ.ಸಂ. 8792158946, 9880605691, 9663891702, 9886498069 ಸಂಪರ್ಕಿಸಬಹುದು ಎಂದು ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಮಠದ ದಿವಾನ ನಾಗರಾಜ್​ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುಗುಣೇಂದ್ರ ತೀರ್ಥ ಶ್ರೀಪಾದರು.
"

ಅಧಿಕ ಮಾಸದ ಸಂದರ್ಭದಲ್ಲಿ ಭಗವಂತನ ಆರಾಧನೆ ಮೂಲಕ ಅಧಿಕ ಫಲ ಸಂಪಾದಿಸಲು ಪುರುಷೋತ್ತಮ ಯೋಗ ಪಾರಾಯಣ ಹಮ್ಮಿಕೊಂಡಿದ್ದೇವೆ. ನಮ್ಮ ವಿಶ್ವಗೀತಾ ಚತುರ್ಥ ಪರ್ಯಾಯದ ಅವಧಿಯಲ್ಲಿ ಆಯೋಜಿಸಿದ್ದ ಲಕ್ಷ ಕಂಠ ಗೀತಾಪಾರಾಯಣದಲ್ಲಿ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡು ಗೀತೆಯ 15ನೇ ಅಧ್ಯಾಯ ಪುರುಷೋತ್ತಮ ಯೋಗದ 20 ಶ್ಲೋಕ ಪಠಣ ಮಾಡಿದ್ದರು. ಆಸ್ತಿಕರು ಜೂ.12ರಂದು ನಡೆಯುವ ಪಾರಾಯಣದಲ್ಲಿ ಭಾಗವಹಿಸಿ ಶ್ರೀಕೃಷ್ಣಾನುಗ್ರಹಕ್ಕೆ ಪಾತ್ರರಾಗಬಹುದು.

— ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ.