ಉಡುಪಿಯ ಗೀತಾ ಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಪುರುಷೋತ್ತಮ ಯೋಗ ಪಾರಾಯಣ ಕಾರ್ಯಕ್ರಮವನ್ನು ವೇದವ್ಯಾಸ ಐತಾಳ್​ ಉದ್ಘಾಟಿಸಿದರು. ನಾಗರಾಜ್​ ಆಚಾರ್ಯ, ಉಷಾ ಹೆಬ್ಬಾರ್​, ನರಸಿಂಹ ನಾಯ್ಕ, ಆಯನಾ ವಿ. ರಮಣ್​, ಆಕಾಶ್​ ಉಪಾಧ್ಯಾಯ, ಕೆ.ವಿ. ರಮಣ ಆಚಾರ್ಯ ಇದ್ದರು. 
ಉಡುಪಿ

ಅಧಿಕ ಮಾಸ ಪಾರಾಯಣದಿಂದ ಅಧಿಕ ಫಲ

* ವಿದ್ವಾನ್​ ವೇದವ್ಯಾಸ ಐತಾಳ್​ ಅಭಿಮತ

* ಶ್ರೀ ಪುರುಷೋತ್ತಮ ಯೋಗ ಪಠಣ ಉದ್ಘಾಟನೆ

ಉಡುಪಿ: ಭಗವದ್ಗೀತೆಯೇ ಅತ್ಯಂತ ಶ್ರೇಷ್ಠ. ಅದರಲ್ಲಿನ 15ನೇ ಅಧ್ಯಾಯವಾದ 'ಪುರುಷೋತ್ತಮ ಭಕ್ತಿ ಯೋಗ'ವು ವಿಶೇಷವಾಗಿದೆ. ಅಧಿಕ ಮಾಸದ ಪರ್ವಕಾಲದಲ್ಲಿ ಈ ಅಧ್ಯಾಯದ 20 ಶ್ಲೋಕಗಳನ್ನು ಪಠಣ ಮಾಡುವುದು ಅತ್ಯಂತ ಶ್ರೇಯಸ್ಕರ. ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷ ಕಂಠ ಗೀತಾ ಪಾರಾಯಣದ ಸಂದರ್ಭದಲ್ಲಿ ಪಾಲ್ಗೊಂಡು ಇದೇ 20 ಶ್ಲೋಕ ಪಠಿಸಿದ್ದರು. ಅಧಿಕ ಮಾಸ ಪಾರಾಯಣದಿಂದ ಅಧಿಕ ಫಲ ಲಭಿಸುತ್ತದೆ ಎಂದು ವಿದ್ವಾನ್​ ವೇದವ್ಯಾಸ ಐತಾಳ್​ ಅಭಿಮತ ವ್ಯಕ್ತಪಡಿಸಿದರು.
ಉಡುಪಿ ಗೀತಾ ಮಂದಿರದದಶ್ರೀ ಪುತ್ತಿಗೆ ನೃಸಿಂಹ ಸಭಾಗೃಹದಲ್ಲಿ ಪುತ್ತಿಗೆ ಮಠದ ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಅವರ ಪಟ್ಟದ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರ ಅನುಗ್ರಹದೊಂದಿಗೆ ಅಧಿಕ ಮಾಸದ ನಿಮಿತ್ತ ಮತ್ತು ಲೋಕ ಕಲ್ಯಾಣಕ್ಕಾಗಿ ಶುಕ್ರವಾರ (ಜೂ.12) ಆಯೋಜಿಸಿದ್ದ ಶ್ರೀಮದ್ಭಗವದ್ಗೀತೆಯ 15ನೇ ಅಧ್ಯಾಯ 'ಪುರುಷೋತ್ತಮ ಭಕ್ತಿ ಯೋಗ'ದ ಶ್ಲೋಕ 33 ಬಾರಿ ಸಾಮೂಹಿಕ ಪಾರಾಯಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
ಪುತ್ತಿಗೆ ಮಠದ ದಿವಾನ ನಾಗರಾಜ್​ ಆಚಾರ್ಯ, ವಿದುಷಿ ಉಷಾ ಹೆಬ್ಬಾರ್​, ನಗರಸಭಾ ಮಣಿಪಾಲ ವಾರ್ಡ್​ನ ಮಾಜಿ ಸದಸ್ಯ ನರಸಿಂಹ ನಾಯ್ಕ ಉಪಸ್ಥಿತರಿದ್ದರು.
ದೂರದರ್ಶನ ಕಲಾವಿದೆ ಮೂಡಬಿದರೆಯ ಆಯನಾ ವಿ. ರಮಣ್​ ಅವರಿಂದ ಶಾಸ್ತ್ರೀಯ ನೃತ್ಯಾಭಿವ್ಯಕ್ತಿ ಮತ್ತು ಕಿರು ನಿರೂಪಣಾ ವ್ಯಾಖ್ಯಾನ ನೆರವೇರಿತು. ನೂರಾರು ಮಹಿಳೆಯರು ಸಾಮೂಹಿಕವಾಗಿ ಪಾರಾಯಣ ಮಾಡಿದರು. 
ವಿದ್ವಾನ್​ ಆಕಾಶ್​ ಉಪಾಧ್ಯಾಯ ಪಾರಾಯಣ ಸಂಕಲ್ಪದ ವಿಧಿವಿಧಾನ ನೆರವೇರಿಸಿದರು. ಪುತ್ತಿಗೆ ಮಠದ ವಿದ್ವಾನ್​ ಕೆ.ವಿ. ರಮಣ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.