ಮಹಿಳಾ ಆಯೋಗದ ಜಿಲ್ಲಾಮಟ್ಟದ ಸಭೆಯಲ್ಲಿ ಪಿ.ಕುಂಜೈಷಾ ವಾತನಾಡಿದರು. 
ಉಡುಪಿ

ಸಾಮಾಜಿಕ ವಿಪತ್ತಾಗುತ್ತಿರುವ ವೈವಾಹಿಕ ಸಮಸ್ಯೆ

ಇಂದಿರಾ ಎನ್ ಕೆ
ಕಾಸರಗೋಡು: ತಂದೆ-ತಾಯಿಯ ನಡುವಿನ ಸಮಸ್ಯೆಗಳು ಮಕ್ಕಳ ವಾನಸಿಕ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ವೈವಾಹಿಕ ಸಂಬಂಧಗಳಲ್ಲಿ ಉದ್ಭವಿಸುವ ಸಮಸ್ಯೆಗಳು ಕೇವಲ ವ್ಯಕ್ತಿಯ ಸಮಸ್ಯೆಯಾಗಿರದೆ ಸಾವಾಜಿಕ ವಿಪತ್ತಾಗುತ್ತಿದೆ. ಪರಸ್ಪರ ಅಸಹಿಷ್ಣುತೆ, ನಂಬಿಕೆಯ ಕೊರತೆ, ಆರ್ಥಿಕ ಒತ್ತಡ ಮತ್ತು ಮೂರನೇ ವ್ಯಕ್ತಿಯ ಹಸ್ತಕ್ಷೇಪ ವೈವಾಹಿಕ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಇದಕ್ಕೆ ಸಾವಾಜಿಕ ಜಾಗೃತಿ ಅಗತ್ಯ ಎಂದು ಮಹಿಳಾ ಆಯೋಗದ ಸದಸ್ಯೆ, ವಕೀಲೆ ಪಿ.ಕುಂಜೈಷಾ ಹೇಳಿದರು.
ಕಾಸರಗೋಡು ಕಲೆಕ್ಟರೇಟ್ ಮುಖ್ಯ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, 36 ದೂರುಗಳಲ್ಲಿ ಎಂಟು ದೂರುಗಳನ್ನು ಪರಿಹರಿಸಲಾಗಿದೆ, ನಾಲ್ಕನ್ನು ಪೊಲೀಸ್ ವರದಿಗಾಗಿ ವರ್ಗಾಯಿಸಲಾಗಿದೆ ಮತ್ತು 24 ದೂರುಗಳನ್ನು ಮುಂದಿನ ಸಭೆಯಲ್ಲಿ ಪರಿಗಣಿಸಲಾಗುವುದು ಎಂದರು. ಕೌಟುಂಬಿಕ ಸಮಸ್ಯೆಗಳು, ಆಸ್ತಿ ವಿವಾದ ಮತ್ತು ನೆರೆಹೊರೆಯವರಿಗೆ ಸಂಬಂಧಿಸಿದ ದೂರುಗಳು ಹೆಚ್ಚಾಗಿ ಬಂದಿದ್ದವು. ಆಯೋಗದ ಅಫ್ಜಲ್ ರಫಿ, ಸತೀಶ್ ಕುವಾರ್ ಇದ್ದರು.