ಉಡುಪಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಭರಣ ಜುವೆಲರ್ಸ್ ವತಿಯಿಂದ ಆಯೋಜಿಸಿದ್ದ ಆಭ'ರನ್' ಓಟಕ್ಕೆ ಯಶ್ಪಾಲ್ ಸುವರ್ಣ ಚಾಲನೆ ನೀಡಿದರು. ಸುಭಾಶ್ ಎಂ. ಕಾಮತ್, ಮಹೇಶ್ ಎಂ. ಕಾಮತ್, ಸಂಧ್ಯಾ ಕಾಮತ್, ವೀಣಾ ಕಾಮತ್ ಇದ್ದರು.
* ಶಾಸಕ ಯಶ್ಪಾಲ್ ಸುವರ್ಣ ಆಶಯ
* ಆಭರಣ ಜುವೆಲರ್ಸ್ನ ಮ್ಯಾರಥಾನ್ಗೆ ಚಾಲನೆ
ಉಡುಪಿ: ಚಿನ್ನಾಭರಣ ಹಾಗೂ ಕರಕೌಶಲಗಳ ಮೂಲಕವೇ ಜನರ ಮನಗೆದ್ದ ಆಭರಣ ಜುವೆಲರ್ಸ್ ಸಂಸ್ಥೆಯು ಮಹಿಳಾ ಸಬಲೀಕರಣಕ್ಕೆ ಮುಂದಾಗಿರುವುದು ಶ್ಲಾಘನೀಯ. ಸಂಸ್ಥೆಯು ಸಾಮಾಜಿಕ ಕಳಕಳಿಗೂ ಹೆಸರುವಾಸಿಯಾಗಿದ್ದು, ಇದು ದೇಶಕ್ಕೆ ಮಾದರಿಯಾದ ಕಾರ್ಯವಾಗಿದೆ. ಮಹಿಳಾ ಸಮುದಾಯದ ಅಭಿವೃದ್ಧಿಗೆ, ಸಮಾಜಮುಖಿ ಕಾರ್ಯಕ್ಕೆ ಆಭ'ರನ್' ಕೈಜೋಡಿಸುವಂತಾಗಲಿ ಎಂದು ಶಾಸಕ ಯಶ್ಪಾಲ್ ಸುವರ್ಣ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಅಜ್ಜರಕಾಡುನಲ್ಲಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ವಿಶ್ವ ಮಹಿಳಾ ದಿನಾರಣೆ ನಿಮಿತ್ತ ದಿ ಒರಿಜನಲ್ ಆಭರಣ ಜುವೆಲರ್ಸ್ ವತಿಯಿಂದ ಭಾನುವಾರ (ಮಾ.8) ನಸುಕಿನಲ್ಲಿ 'ಮಹಿಳೆಯರಿಗಾಗಿ-ಮಹಿಳೆಯರೊಂದಿಗೆ' ಎಂಬ ಘೋಷಣೆಯೊಂದಿಗೆ ಆಯೋಜಿಸಿದ್ದ ಆಭ'ರನ್'-2026ಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಹುಮುಖ ದೃಷ್ಟಿಕೋನ
ಆಭರಣ ಜುವೆಲರ್ಸ್ ಪೆ.ಲಿ.ನ ವ್ಯವಸ್ಥಾಪಕ ನಿರ್ದೇಶಕ ಸುಭಾಶ್ ಮಧುಕರ್ ಕಾಮತ್ ಮಾತನಾಡಿ, ದೈಹಿಕ ಸದೃಢತೆಯನ್ನು ಸಾಧನೆಯೊಂದಿಗೆ ಜೋಡಿಸುವ ಈ ಓಟವು ಅನುಭವಿ ಕ್ರೀಡಾಪಟು ಹಾಗೂ ಪ್ರಥಮ ಬಾರಿಯ ಓಟಗಾರರನ್ನೂ ಆಭ'ರನ್' ಒಗ್ಗೂಡಿಸುತ್ತದೆ. ಈ ವರ್ಷದ ಆಭ'ರನ್' ಓಟವು ನಮ್ಮ ಬಹುಮುಖ ದೃಷ್ಟಿಕೋನಕ್ಕೆ ನಿದರ್ಶನವಾಗಿದೆ. ಉದ್ಯಮದ ಹೊಣೆ ಮೀರಿ ಸಾಮಾಜಿಕ ಜವಾಬ್ದಾರಿಯ ಬದ್ಧತೆಗಾಗಿ ಮಹಿಳೆಯರ ಹೆಗಲಿಗೆ ಹೆಗಲುಕೊಟ್ಟು ಅವರನ್ನು ಮುನ್ನಡೆಸುವ ಪ್ರಯತ್ನ ಇದಾಗಿದೆ ಎಂದರು.
ಮೂರು ವಿಭಾಗದಲ್ಲಿ ಸ್ಪರ್ಧೆ
3 ಕಿಮೀ ಫನ್-ರನ್, 5 ಕಿಮೀ ಟೈಮ್ಡ್ ರನ್ ಹಾಗೂ 10 ಕಿಮೀ ಟೈಮ್ಡ್ ರನ್ ಎಂದು ಮೂರು ವಿಭಾಗದಲ್ಲಿ ಪುರುಷ&ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆ ನಡೆದಿದ್ದು, 1450ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. 2ನೇ ವಿಭಾಗದ ಸ್ಪರ್ಧೆಗೆ ಸಂಸ್ಥೆಯ ನಿರ್ದೇಶಕ ಮಹೇಶ್ ಎಂ. ಕಾಮತ್, 3ನೇ ವಿಭಾಗದ ಸ್ಪರ್ಧೆಗೆ ಕೆಎಂಸಿ ಮಣಿಪಾಲದ ಡಾ. ಪ್ರತಾಪ್ ಚಾಲನೆ ನೀಡಿದರು.
ಸಂಸ್ಥೆಯ ಸಂಧ್ಯಾ ಕಾಮತ್, ವೀಣಾ ಕಾಮತ್, ರೇಸ್ ಡೈರೆಕ್ಟರ್ ಲಿಖಿತ್ ಶಿವಪ್ರಸಾದ್, ಸಾತ್ವಿಕ್ ಎಸ್. ಕಾಮತ್, ಆಕರ್ಷ್ ಎಂ. ಕಾಮತ್, ವಿ ಮೀಡಿಯಾ ಸ್ಥಾಪಕಿ ಪಂಚಮಿ ನಾಯಕ್ ಹಾಗೂ ವಿನಯ್ ನಾಯಕ್ ಉಪಸ್ಥಿತರಿದ್ದರು. ಸಂದೀಪ್ ಭಕ್ತ ಕಾರ್ಯಕ್ರಮ ನಿರ್ವಹಿಸಿದರು.
ಸಾಧಕ ಮಹಿಳೆಯರಿಗೆ ಸನ್ಮಾನ
ಮಹಿಳಾ ದಿನಾಚರಣೆ ನಿಮಿತ್ತ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಸೋನಿಯಾ ಕ್ಲಿನಿಕ್ನ ಡಾ. ಗಿರಿಜಾ ರಾವ್, ಡಾ. ಶುಭಗೀತಾ, ಡಾ. ಗೌರಿ, ರಾಷ್ಟ್ರಪತಿ ಪದಕ ಪುರಸ್ಕೃತ ಡಾ. ಶೋಭಾ ಇರುಪ ಹಾಗೂ ಉಡುಪಿಯ ಅಕ್ಕ ಪೊಲೀಸ್ ಪಡೆಯ ನಾಲ್ವರು ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಆಭ'ರನ್' ಮ್ಯಾರಥಾನ್ನ ಫಲಿತಾಂಶ
5ಕೆ ವಿಭಾಗ
* 18ರಿಂದ 40 ವರ್ಷ ಪುರುಷ: ನಾಗರಾಜ್ ದಿವಟೆ, ರಂಗಣ್ಣ, ಸಚಿನ್ ಪೂಜಾರಿ. ಮಹಿಳಾ: ಸಾ ಕುಲಾಲ್, ಲಕ್ಷ್ಮೀ ಗೌಡ, ಸುಹಾನಿ ಥಾಲಿ.
* 41ರಿಂದ 54 ವರ್ಷ ಪುರುಷ: ಶ್ರೀನಿವಾಸ್ ಪಾಂಡೆ, ಗಣೇಶ್ ಟಿ.ಎಚ್., ನಾರಾಯಣ ಮೂಲ್ಯ. ಮಹಿಳಾ: ದಮಯಂತಿ ಎಂ., ಶ್ರೀದೇವಿ ಗಿರೀಶ್, ಚಂದ್ರಿಕಾ ಎಸ್. ಕುಂದರ್.
* 55 ವರ್ಷ ಮೇಲ್ಪಟ್ಟ ಪುರುಷ: ಸದಾನಂದ ಆಳ್ವ, ವಲೆರೇನ್ ಫ್ರ್ಯಾಂಕ್, ಎಚ್. ಉದಯಕುಮಾರ್ ಶೆಟ್ಟಿ. ಮಹಿಳಾ: ಪೂರ್ಣಿಮಾ ಕೆ., ಮಮತಾ ಎಂ., ಎ.ವಿ. ಪದ್ಮಾವತಿ.
10ಕೆ ವಿಭಾಗ
* 18ರಿಂದ 40 ವರ್ಷ ಪುರುಷ: ಶಿವಾನಂದ ಚಿಗರಿ, ನಾಗರಾಜ್ ದಿವಟೆ, ಶಾಶ್ವತ್ ರಾಜೇಶ್ ಪೂಜಾರಿ. ಮಹಿಳಾ: ಶ್ರೇಯಾ ಎಂ., ಶಾಹಿನ್ ಎಸ್.ಡಿ., ನಂದಿನಿ ಜಿ.
* 41ರಿಂದ 54 ವರ್ಷ ಪುರುಷ: ಪವನ್ ಅವದೇಶ್ ಪ್ರಜಾಪತಿ, ಲೋಕೇಶ್ ಕೆ.ಜಿ., ರಾಜಕುಮಾರ್ ಮೌರ್ಯ. ಮಹಿಳಾ: ಅರ್ಚನಾ ಕಲ್ಲೂರಾಯ, ಬೀನಾ ಫರ್ನಾಂಡೀಸ್, ನವಶ್ರೀ ಆರ್. ನಾಯ್ಕ್.
* 55 ವರ್ಷ ಮೇಲ್ಪಟ್ಟ ಪುರುಷ: ವಿಶ್ವನಾಥ್ ಕೋಟ್ಯಾನ್, ಮೇದಪ್ಪ ಎ., ಯಶವಂತ್ ಪರಬ್. ಮಹಿಳಾ: ಜ್ಯೋತಿ ಪ್ರವಾ ದತ್ತ ಖಾನಿಕರ್, ಪ್ರೇಯಸೀ ಛಾರಿ, ಅನಿತಾ ಲೋಬೊ.
ಸ್ತ್ರೀ ಶಕ್ತಿ, ಸಹೋದರಿತ್ವ ಮತ್ತು ಉತ್ಸಾಹಭರಿತ ಜೀವನದ, ಗೌರವದ ಸಂಕೇತವಾಗಿ ಆಭ'ರನ್'-2026ನ್ನು ಅಂತಾರಾಷ್ಟ್ರೀಯ ಮಹಿಳಾ ದಿನದ ನಿಮಿತ್ತ ಆಯೋಜಿಸಲಾಗಿದೆ. ಆಭ'ರನ್' ಕೇವಲ ಕ್ರೀಡಾಕೂಟವಲ್ಲ. ಮಹಿಳೆಯರ ಧೈರ್ಯ, ಸ್ಥೈರ್ಯ ಮತ್ತು ಸಾಮೂಹಿಕ ಒಗ್ಗಟ್ಟಿನ ಪ್ರತಿರೂಪ. ಇದು ಜೀವನದ ಎಲ್ಲ ಹಂತಗಳಲ್ಲೂ ಬದಲಾವಣೆಗೆ ಸ್ಫೂರ್ತಿ ನೀಡುವ ಮಹಿಳೆಯರಿಗೆ ತುಂಬುಹೃದಯದ ಗೌರವಾರ್ಪಣೆ.