ಕಬ್ಬಿನಾಲೆ ಕೆಳಮಠ ಶ್ರೀ ಗೋಪಾಲಕೃಷ್ಣ ದೇವಳದಲ್ಲಿ ಶ್ರೀ ಮನ್ಮಹಾರಥೋತ್ಸವ ನಡೆಯಿತು.
ಹೆಬ್ರಿ: ಕಬ್ಬಿನಾಲೆ ಕೆಳಮಠ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವದ ಪ್ರಯುಕ್ತ ಭಾನುವಾರ ಶ್ರೀ ಮನ್ಮಹಾರಥೋತ್ಸವ ವೈಭವದಿಂದ ಜರುಗಿತು. ಕೆ.ಎಸ್.ರಾಮಕೃಷ್ಣ ತಂತ್ರಿ ಮಾರ್ಗದರ್ಶನದಲ್ಲಿ ಅರ್ಚಕ ವಿನಾಯಕ ಹಾಡಿಗ ನೇತೃತ್ವದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ರಥಸಪ್ತಮಿ, ಬೆಳಗ್ಗೆ ಗಣಪತಿ ಯಾಗ, ನವಕಲಾಶಭಿಷೇಕ, ಅಲಂಕಾರ ಪೂಜೆ, ತುಲಭಾರ, ರಥಸಂಪ್ರೋಕ್ಷಣೆ, ಮಹಾಪೂಜೆ, ರಥಾರೋಹಣ, ಪಲ್ಲಪೂಜೆ, ಭಜನೆ, ದೀಪಾರಾಧನೆ, ರಥೋತ್ಸವ, ನರ್ತನ ಬಲಿ, ಕೆರೆ ದೀಪ, ಪಚ್ಚಡಸೇವೆ, ಕಟ್ಟೆ ಪೂಜೆ, ವಸಂತ ಮಂಟಪದಲ್ಲಿ ಪೂಜೆ, ವಸಂತೋತ್ಸವ, ರಂಗಪೂಜೆ, ಭೂತ ಬಲಿ, ಪ್ರಸಾದ ವಿತರಣೆ ನಡೆಯಿತು.
ರಾಣಿ ಸತ್ಯಮೂರ್ತಿ ನಿರ್ದೇಶನದಲ್ಲಿ ನಾಟ್ಯಶ್ರೀ ನೃತ್ಯಾಲಯದಿಂದ ಭರತನಾಟ್ಯ, ಜಾನಪದ ನೃತ್ಯ ವೈಭವ ಜರುಗಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್, ಸದಸ್ಯರಾದ ನಾರಾಯಣ ಭಟ್, ಚಂದ್ರಶೇಖರ ಬಾಯರಿ, ಯೋಗೇಂದ್ರ ಹೆಬ್ಬಾರ್, ಸದಾಶಿವ ಶೆಟ್ಟಿ, ಜಗದೀಶ್ ಪೂಜಾರಿ, ಶೇಖರ್ ಗೌಡ, ರೇಣುಕಾ ಶೆಟ್ಟಿಗಾರ್, ಗಾಯತ್ರಿ ಮಡಿವಾಳ ಮೊದಲಾದವರು ಉಪಸ್ಥಿತರಿದ್ದರು.