ಅದಮಾರು ಮಠ ಶಿಕ್ಷಣ ಮಂಡಳಿ ಅಧ್ಯಕ್ಷ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಬೆಸ್ಟ್​ ಫಿಸಿಕ್​ (ದೇಹದಾರ್ಢ್ಯ) ಸ್ಪರ್ಧೆ ಉದ್ಘಾಟಿಸಿದರು.  
ಉಡುಪಿ

ಪ್ರಾಮಾಣಿಕ ಸಾಧನೆಗಿಲ್ಲ ಅಡ್ಡದಾರಿ

ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಬೆಸ್ಟ್​ ಫಿಸಿಕ್​ (ದೇಹದಾರ್ಢ್ಯ) ಸ್ಪರ್ಧೆ ಉದ್ಘಾಟಿಸಿ ಅದಮಾರು ಮಠ ಶಿಕ್ಷಣ ಮಂಡಳಿ ಅಧ್ಯಕ್ಷ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಅಶೀರ್ವಚನ

ಉಡುಪಿ: ಮನಸ್ಸು, ದೇಹ ಸುಸ್ಥಿಯಲ್ಲಿಲ್ಲದಿದ್ದರೆ ಸಾಧನೆ ಸಾಧ್ಯವಿಲ್ಲ. ಜೀವನದಲ್ಲಿಣ ಶಿಸ್ತು ಅಳವಡಿಸಿಕೊಂಡರೆ ಗೆಲುವಿನ ಗುರಿ ತಲುಪಬಹುದು. ಪ್ರಾಮಾಣಿಕ ಪ್ರಯತ್ನದಿಂದ ಯಶಸ್ಸು ಪಡೆಯಬಹುದು. ಇದಕ್ಕೆ ಯಾವುದೇ ಅಡ್ಡದಾರಿಗಳಿಲ್ಲ ಎಂದು ಅದಮಾರು ಮಠ ಶಿಕ್ಷಣ ಮಂಡಳಿ ಅಧ್ಯಕ್ಷ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಪೂರ್ಣಪ್ರಜ್ಞ ಸ್ವಾಯತ್ತ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಜಂಟಿ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಬೆಸ್ಟ್​ ಫಿಸಿಕ್​ (ದೇಹದಾರ್ಢ್ಯ) ಸ್ಪರ್ಧೆ ಉದ್ಘಾಟಿಸಿ ಅಶೀರ್ವಚನ ನೀಡಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಸಂತೋಷ್​ ಬಿ. ಜಗಲಾಸರ್​ ಮುಖ್ಯ ಅತಿಥಿಯಾಗಿದ್ದರು. ಸಂಸ್ಥೆ ಗೌರವ ಕಾರ್ಯದರ್ಶಿ ಡಾ. ಎ.ಪಿ. ಭಟ್​, ಉದ್ಯಮಿ ಗ್ಲೆನ್​ ಡಯಾಸ್​, ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜೆರಾಲ್ಡ್​ ಸಂತೋಷ್​ ಡಿಸೋಜ, ಸಹ ಸಂಯೋಜಕ ಡಾ. ಹರಿದಾಸ್​, ಪಿಪಿಸಿ ಗೌರವ ಕಾರ್ಯದರ್ಶಿ ಡಾ. ಜಿ.ಎಸ್​. ಚಂದ್ರಶೇಖರ್​, ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ. ಪಿ.ಎಸ್​. ಐತಾಳ್​, ಕಾಲೇಜಿನ ಪ್ರಾಂಶುಪಾಲ ಡಾ. ರಾಮು ಎಲ್​. ಹಾಗೂ ಸಂಚಾಲಕ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್​ ಉಪಸ್ಥಿತರಿದ್ದರು.