Arrest 
ಉಡುಪಿ

ಆಟೋಗಳಲ್ಲಿ ಹಣ ಕದ್ದವನ ಬಂಧನ

ಕಾಸರಗೋಡು: ಆಟೋರಿಕ್ಷಾ ನಿಲ್ದಾಣದಲ್ಲಿ ನಿಲ್ಲಿಸಿದ್ದ ಆಟೋಗಳಲ್ಲಿ ಕಳವು ನಡೆಸುತ್ತಿದ್ದಾತ ಚಿತ್ತಾರಿಕಲ್ ನಿವಾಸಿ ಶೈಜು ಜೋಸೆಫ್(34) ಎಂಬಾತನನ್ನು ತಲಶ್ಶೇರಿ ಪೊಲೀಸರು ಬಂಧಿಸಿದ್ದಾರೆ.
ಆಟೋಗಳನ್ನು ಸ್ಟಾೃಂಡ್‌ನಲ್ಲಿ ನಿಲ್ಲಿಸಿ ಚಾಲಕರು ಹೊರಗೆ ತೆರಳಿದ ಸಂದರ್ಭ ಶೈಜು ಜೋಸೆಫ್ ಕಳ್ಳತನ ಮಾಡುತ್ತಿದ್ದ ಬಗ್ಗೆ ಹಲವರಿಂದ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.
ಜು.8ರಂದು ತಲಶ್ಶೇರಿ ಹಳೇ ಬಸ್ ನಿಲ್ದಾಣ ಸಮೀಪ ನಿಲ್ಲಿಸಿದ್ದ ಆಟೋದಿಂದ 8 ಸಾವಿರ ರೂ. ನಗದು ಕಳವಾಗಿದ್ದು ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದಾಗ ಕಳ್ಳನ ಚಹರೆ ಪತ್ತೆಯಾಗಿತ್ತು. ತನಿಖೆ ನಡೆಸುತ್ತಿದ್ದ ವೇಳೆ ಕಳವು ಮಾಡಲು ಬ ಂದ ಶೈಜು ಜೋಸೆಫ್‌ನನ್ನು ಪೊಲೀಸರು ಸೆರೆ ಹಿಡಿದ್ದಿದ್ದಾರೆ.