ಹುಬ್ಬಳ್ಳಿ ಮೂಲದ ಆರೋಗ್ಯ ದಾಸ್​ ಅಲಿಯಾಸ್​ ಕಾಮಿ 
ಉಡುಪಿ

ಮಲ್ಪೆ ಕೊಲೆ ಪ್ರಕರಣ ಆರೋಪಿ ಬಂಧನ

ಮಲ್ಪೆಯ ಬಾಬುತೋಟ ಧಕ್ಕೆಯ ಬಳಿ ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಯನ್ನು ಮಲ್ಪೆ ಪೊಲೀಸರು ಹುಬ್ಬಳ್ಳಿಯ ಹೊರವಲಯದಲ್ಲಿ ಬಂಧಿಸಿದ್ದಾರೆ.

ಉಡುಪಿ: ಮಲ್ಪೆಯ ಬಾಬುತೋಟ ಧಕ್ಕೆಯ ಬಳಿ ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಯನ್ನು ಮಲ್ಪೆ ಪೊಲೀಸರು ಹುಬ್ಬಳ್ಳಿಯ ಹೊರವಲಯದಲ್ಲಿ ಬಂಧಿಸಿದ್ದಾರೆ.

ಹುಬ್ಬಳ್ಳಿ ಮೂಲದ ಆರೋಗ್ಯ ದಾಸ್​ ಅಲಿಯಾಸ್​ ಕಾಮಿ (55) ಬಂಧಿತ ಆರೋಪಿ.

ಘಟನೆಯ ವಿವರ: ಬಾಬುತೋಟ ಧಕ್ಕೆಯ ಬಳಿ ಆಂಧ್ರಪ್ರದೇಶ ಮೂಲದ ಗುಜರಿ ಹೆಕ್ಕುವ ಪರಮೇಶಿ ಅಲಿಯಾಸ್​ ಪರಮ್​ ವೇಲಿ (55) ಎಂಬಾತನನ್ನು ಸೆ. 28ರಂದು ರಾತ್ರಿ ಮಲಗಿದ್ದ ವೇಳೆ ಕುತ್ತಿಗೆಗೆ ಆಯುಧದಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಚಿಗ್ಗೆ ಮಲ್ಪೆ ಪೊಲೀಸ್​ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿತ್ತು. ವಿಶೇಷ ಪೊಲೀಸ್​ ತಂಡ ತನಿಖೆ ನಡೆಸಿ, ಆರೋಪಿ ಆರೋಗ್ಯ ದಾಸ್​ನನ್ನು ಹುಬ್ಬಳ್ಳಿಯ ಹೊರವಲಯದಲ್ಲಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಪರಮೇಶಿ ಹಾಗೂ ಆರೋಗ್ಯದಾಸ್​ ಜೊತೆಗಾರರಾಗಿದ್ದು, ಮದ್ಯಪಾನ ಪಾನಮಾಡಿ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದರು. ನಂತರ ಆರೋಗ್ಯ ದಾಸ್​ ಸಿಟ್ಟಿನಲ್ಲಿ ಪರಮೇಶಿ ಕತ್ತುಸಿಳಿ ಪರಾರಿಯಾಗಿದ್ದ.