ಕಾಸರಗೋಡಿನ ಕನ್ನಡ ಭವನದಲ್ಲಿ ಮಲಯಾಳ ಭಾಷಾ ಮಸೂದೆ ವಿರುದ್ಧ ನಡೆದ ಪ್ರತಿಭಟನಾ ಸಭೆಯನ್ನು ಡಾ.ವಾಮನರಾವ್ ಬೇಕಲ್ ಉದ್ಘಾಟಿಸಿದರು. ಡಾ.ಜಯಪ್ರಕಾಶ್ ನಾರಾಯಣ, ಎ.ಆರ್.ಸುಬ್ಬಯಕಟ್ಟೆ, ರವಿ ನಾಯ್ಕಪು ಇತರರಿದ್ದರು.  
ಉಡುಪಿ

ಮಲಯಾಳ ಭಾಷಾ ಮಸೂದೆ ಕನ್ನಡಿಗರಿಗೆ ಮಾರಕ

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಕೇರಳಮ್ ಸರ್ಕಾರದ ಮಲಯಾಳ ಭಾಷಾ ಮಸೂದೆಯು ಕಾಸರಗೋಡಿನ ಕನ್ನಡಿಗರ ಹಿತಕ್ಕೆ ವಾರಕವಾದದ್ದು. ಒಂದರಿಂದ ಹತ್ತನೇ ತರಗತಿ ತನಕ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಲಯಾಳ ಕಡ್ಡಾಯಗೊಳಿಸುವ ಪ್ರಸ್ತಾಪದಿಂದ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಪ್ರದೇಶ ಹೊರತುಪಡಿಸಬೇಕು ಎಂದು ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ಡಾ.ವಾಮನರಾವ್ ಬೇಕಲ್ ಒತ್ತಾಯಿಸಿದರು.
ಮಲಯಾಳ ಭಾಷಾ ಮಸೂದೆ ವಿರುದ್ಧ ಕಾಸರಗೋಡಿನ ಕನ್ನಡ ಭವನದಲ್ಲಿ ಆಯೋಜಿಸಿದ್ದ ಕನ್ನಡಿಗರ ಪ್ರತಿಭಟನಾ ಸಭೆಗೆ ಕನ್ನಡ ಧ್ವಜ ಹಾರಿಸಿ ಚಾಲನೆ ನೀಡಿ ಮಾತನಾಡಿದರು.
ಗುರುರಾಜ್, ಉಷಾ ಕಿರಣ್, ಮೋಕ್ಷ ಕನ್ನಡ ಗೀತೆಗಳ ಗಾಯನ ನಡೆಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಟಕದ ಸಂಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಕೇರಳ ಪ್ರಾಂತ್ಯ ಕನ್ನಡ ವಾಧ್ಯಮ ಅಧ್ಯಾಪಕರ ಸಂದ ಅಧ್ಯಕ್ಷ ಸುಕೇಶ ಎ, ವಕ್ತಾರ ಬಾಬು, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯಕಟ್ಟೆ, ಕನ್ನಡ ಪತ್ರಕರ್ತರ ಕ್ಷೇವಾಭ್ಯುದಯ ಸಂದ ಅಧ್ಯಕ್ಷ ರವಿ ನಾಯ್ಕಾಪು, ಪ್ರಮುಖರಾದ ಜಯನಾರಾಯಣ ತಾಯನ್ನೂರ್, ತೆಕ್ಕೇಕರೆ ಶಂಕರ ನಾರಾಯಣ ಭಟ್, ಡಾ.ಕೆ.ಎನ್.ವೆಂಕಟರಮಣ ಹೊಳ್ಳ, ಸತೀಶ್, ಶಶಿಕಾಂತ ಶೆಟ್ಟಿ, ಗೋಪಾಲ ಶೆಟ್ಟಿ, ಶಂಕರ ಜೆ.ಪಿ.ನಗರ, ಸುಧಾರಾಣಿ ಅಣಂಗೂರು, ಶೃತಿ ವಿಕಾಸ್, ದಿವ್ಯಾ ಸಂದೀಪ್, ಆಶಾ ರಾಧಾಕೃಷ್ಣ, ಪ್ರದೀಪ್ ಬೇಕಲ್, ರಾಜೇಶ್ ಕೋಟೆಕಣಿ, ಶಶಿಕಲಾ ಕುಂಬ್ಳೆ ಉಪಸ್ಥಿತರಿದ್ದರು. ಸಂಧ್ಯಾ ರಾಣಿ ಸ್ವಾಗತಿಸಿದರು. ವಸಂತ ಕೆರೆಮನೆ ವಂದಿಸಿದರು.