ಕನ್ನಾರು ಹಾಲು ಉತ್ಪಾದಕರ ಸಹಕಾರ ಸಂ ವಾರ್ಷಿಕ ಸಭೆ ನಡೆಯಿತು. ಪ್ರಮುಖರಾದ ರತ್ನಾಕರ ಶೆಟ್ಟಿ, ಸರಸ್ವತಿ, ಆನಂದ ನಾಯ್ಕ ಮೊದಲಾದವರಿದ್ದರು. 
ಉಡುಪಿ

ಒಕ್ಕೂಟದಿಂದ ದೊರಕುವ ಸವಲತ್ತು ಸದ್ಬಳಕೆ

ಕೊಕ್ಕರ್ಣೆ: ಒಕ್ಕೂಟದಿಂದ ದೊರಕುವ ಸವಲತ್ತುಗಳನ್ನು ಸರಿಯಾಗಿ ಬಳಸಿಕೊಂಡು ಹೈನುಗಾರಿಕೆಯನ್ನು ವೈಜ್ಞಾನಿಕವಾಗಿ ವಾಡಬೇಕು. ಲವಣ ಮಿಶ್ರಣ, ಗೋಬರ್ ಗ್ಯಾಸ್ ಮತ್ತಿತರ ಪ್ರಯೋಜನಗಳನ್ನು ಪಡೆಯಬಹುದು ಎಂದು ಒಕ್ಕೂಟ ವಿಸ್ತರಣಾಧಿಕಾರಿ ಸರಸ್ವತಿ ಹೇಳಿದರು.
ಕನ್ನಾರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ಸಂಘ ಅಧ್ಯಕ್ಷ ರತ್ನಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ನಾಲ್ಕು ವಿದ್ಯಾರ್ಥಿಗಳು, 7ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ನಾಲ್ವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಘಕ್ಕೆ ಕಳೆದ ಸಾಲಿನಲ್ಲಿ ಹೆಚ್ಚು ಹಾಲು ಸರಬರಾಜು ವಾಡಿದ ಸಂಧ್ಯಾ, ಜಯಪ್ರಕಾಶ್, ಶಾಂತಾ ಅವರಿಗೆ ಬಹುವಾನ ನೀಡಿ ಗೌರವಿಸಲಾಯಿತು. ಸದಸ್ಯರಿಗೆ ಪ್ರೋತ್ಸಾಹಕ ಬಹುವಾನ ನೀಡಲಾಯಿತು.
ಸಂಘದ ಉಪಾಧ್ಯಕ್ಷ ಆನಂದ ನಾಯ್ಕ, ನಿರ್ದೇಶಕರಾದ ಪೂರ್ಣಿವಾ ಭಟ್, ಕುವಾರ ಕುಲಾಲ, ನಾರಾಯಣ ಕುಲಾಲ, ಬಿ.ಸುರೇಶ್ ಶೆಟ್ಟಿ, ಭಾಸ್ಕರ ಶೆಟ್ಟಿ, ಕೃಷ್ಣಯ್ಯ ಆಚಾರಿ, ಜಯಪ್ರಕಾಶ್, ವಿಟ್ಠಲ ಮರಕಾಲ, ಚಿತ್ರಕಲಾ ಎಸ್.ಶೆಟ್ಟಿ, ಶ್ರೀಲತಾ ಮತ್ತಿತರರಿದ್ದರು. ಸಿಬ್ಬಂದಿ ರಂಜನಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕ್ಟರ್ ವರದಿ ವಾಚಿಸಿದರು. ರಾಜಶ್ರೀ ವಂದಿಸಿದರು.