ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಮಕರ ಸಂಕ್ರಾಂತಿಯ ಉತ್ಸವವನ್ನು ಕುಂಭಾಶಿ ಗ್ರಾಮದ ಶ್ವೇತಾ ಶ್ರೀನಿಧಿ ಉಪಾಧ್ಯಾಯರ ನಿವಾಸದಲ್ಲಿ ಆಚರಿಸಲಾಯಿತು.
ಕುಂದಾಪುರ: ಕುಂದಾಪುರ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಮಕರ ಸಂಕ್ರಾಂತಿ ಉತ್ಸವವನ್ನು ಕುಂಭಾಶಿ ಗ್ರಾಮದ ಶ್ವೇತಾ ಶ್ರೀನಿಧಿ ಉಪಾಧ್ಯಾಯರ ನಿವಾಸದಲ್ಲಿ ಆಚರಿಸಲಾಯಿತು.
ಕುಂದಾಪುರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸೌರಭಿ ಪೈ ಮಾತನಾಡಿ, ಈ ಹಬ್ಬವು ಕೇವಲ ಸಂಪ್ರದಾಯವಲ್ಲ, ಇದೊಂದು ವಿಜ್ಞಾನ ಮತ್ತು ಸಂಸ್ಕೃತಿಯ ಸಮ್ಮಿಲನ.ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಎಳ್ಳು ಬೆಲ್ಲವನ್ನು ವಿತರಿಸಿ ವಿಶಿಷ್ಟವಾಗಿ ಆಚರಿಸುತ್ತಿದ್ದೇವೆ ಎಂದರು.
ಕುಂದಾಪುರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ.ಎಸ್., ಕುಂಭಾಶಿ ಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ್ ಕಾಮತ್, ಜಿಲ್ಲಾ ಕಾರ್ಯದರ್ಶಿ ಅನಿತಾ ಶ್ರೀಧರ್, ಮಂಡಲ ಉಪಾಧ್ಯಕ್ಷೆ ರೂಪಾ ಬಾಬು ಪೈ, ಕಾರ್ಯದರ್ಶಿ ನೇತ್ರಾವತಿ ಮಡಿವಾಳ, ಯುವ ಮೋರ್ಚಾ ಅಧ್ಯಕ್ಷ ಕಿರಣ್ ಪೂಜಾರಿ ತೆಕ್ಕಟ್ಟೆ, ಒಬಿಸಿ ಮೋರ್ಚಾ ಅಧ್ಯಕ್ಷ ಸುರೇಂದ್ರ ಕಾಂಚನ್ ಸಂಗಮ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಲತಾ ಸುರೇಶ್ ಶೆಟ್ಟಿ, ಕುಂಭಾಶಿ ಭಾಗದ ಪ್ರಮುಖರಾದ ಮಹೇಶ ಶೆಣೈ ಹಾಗೂ ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಪಕ್ಷದ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ವೇತಾ ಶ್ರೀನಿಧಿ ಉಪಾಧ್ಯಾಯ ಸ್ವಾಗತಿಸಿದರು. ವಿದ್ಯಾ ಸಾಲಿಯನ್ ವಂದಿಸಿದರು.