ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಆಟಿಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿದರು.
ಉಡುಪಿ: ಭಾರತ ಕೃಷಿ ಪ್ರಾಧಾನ್ಯ ದೇಶವಾಗಿದ್ದು, ಶೇ. 80ರಷ್ಟು ಮಂದಿ ಕೃಷಿಯನ್ನು ಅವಲಂಬಿಸಿದ್ದರು. ಹಿಂದಿನ ಕಾಲದಲ್ಲಿ ಜೂನ್ ಮತ್ತು ಜುಲೈ ತಿಂಗಳು ಕಷ್ಟದ ದಿನವಾಗಿದ್ದು, ಪ್ರಕೃತಿಯನ್ನು ದೊರೆಯುವ ಆಹಾರ ಸೇವಿಸುವ ಸಂಪ್ರದಾಯವಿತ್ತು. ಆಟಿ ಆಹಾರಗಳಲ್ಲಿ ಔಷಧೀಯ ಗುಣವಿದ್ದು, ಈ ಉತ್ಕ್ರಷ್ಟ ಆಹಾರ ಪದ್ಧತಿಯನ್ನು ಪಂಚತಾರಾ ಹೋಟೆಲ್ಗಳು ಕೂಡ ಗುರುತಿಸಿವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿದರು,
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಹಿಳಾ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತುಳುನಾಡಿನ ಆಚಾರ&ವಿಚಾರಗಳ ಬಗ್ಗೆ ಯುವಪೀಳಿಗೆಗೆ ಅರಿವು ಮೂಡಿಸಬೇಕು. ಆಟಿ ತಿಂಗಳಲ್ಲಿ ಕೃಷಿಗೆ ಸಂಬಂಧಪಟ್ಟ ಅನೇಕ ಚಟುವಟಿಕೆಗಳು ನಡೆಯುತ್ತವೆ. ಕೆಸರಿನಲ್ಲಿ ಒಂದು ದಿನ, ಆಟಿ ಕೂಟ ಮುಂತಾದ ಆಚರಣೆಗಳನ್ನು ಎಳೆ ಮಕ್ಕಳಿಗೆ ತಿಳಿಸಬೇಕು ಎಂದು ಹೇಳಿದರು.
ಮಹಿಳಾ ಕಾಂಗ್ರೆಸ್ ಸದಸ್ಯೆಯರು ಪ್ರತಿ ಬೂತ್ ಮಟ್ಟದಲ್ಲಿ ಕನಿಷ್ಠ 15 ಮಂದಿ ಸದಸ್ಯರನ್ನು ಒಳಗೊಂಡ ಗೃಹಲಕ್ಷ್ಮೀ ಸ್ವ-ಸಹಾಯ ಸಂಗಳನ್ನು ರಚಿಸಬೇಕು. ಪ್ರತಿ ಸಂಕ್ಕೆ ಸರ್ಕಾರ 1.5 ಲಕ್ಷ ರೂ. ಅನುದಾನ ನೀಡಲಿದೆ. ಪ್ರತಿ ಗ್ರಾಪಂ ಮಟ್ಟದಲ್ಲಿ ಕನಿಷ್ಠ 100 ಯುವಕರನ್ನು ಒಳಗೊಂಡ ಭಾರತ್ ಜೋಡೋ ಸಂ ಸ್ಥಾಪಿಸಲಾಗುತ್ತಿದ್ದು, ಸರ್ಕಾರ 10 ಲಕ್ಷ ರೂ. ಅನುದಾನ ನೀಡಲಿದೆ. ಇದರಿಂದ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ.
— ವಿನಯಕುಮಾರ್ ಸೊರಕೆ, ಅಧ್ಯಕ್ಷರು, ಕೆಪಿಸಿಸಿ ಪ್ರಚಾರ ಸಮಿತಿ