ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ವಿಜ್ಞಾನ ಪ್ರಯೋಗ ಉಪಕರಣಗಳನ್ನು ಎಂ.ಎ. ಗಫೂರ್​ ಉದ್ಘಾಟಿಸಿದರು. ಪೂರ್ಣಿಮಾ, ರೂಪಶ್ರೀ ರತ್ನಾಕರ್​, ಜಗದೀಶ್​ ಕುಮಾರ್​, ಡಾ.ಯಲ್ಲಮ್ಮ, ಯೋಗಾನರಸಿಂಹ ಸ್ವಾಮಿ, ಇಂದಿರಾ ಬಿ. ಇದ್ದರು. 
ಉಡುಪಿ

ಸರ್ಕಾರಿ ಶಾಲೆ ವಿದ್ಯಾರ್ಥಿಗಳೂ ಸಮರ್ಥರು

* ಎಂ.ಎ. ಗಫೂರ್​ ಅಭಿಪ್ರಾಯ

* ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ 

ಉಡುಪಿ: ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳೂ ಸಹ ಬೌದ್ಧಿಕ, ಮಾನಸಿಕವಾಗಿಯೂ ಸಮರ್ಥರಿದ್ದಾರೆ. ಅವರಿಗೆ ಸೂಕ್ತ ಅನುಕೂಲ ಮತ್ತು ಅವಕಾಶ ಒದಗಿಸಿಕೊಟ್ಟಲ್ಲಿ ಅವರೂ ಉನ್ನತ ಸಾಧನೆ ಮಾಡಬಲ್ಲರು ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್​ ಅಭಿಪ್ರಾಯಪಟ್ಟರು.
ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮಣಿಪಾಲ್​ ಪೇಮೆಂಟ್​ ಆ್ಯಂಡ್​ ಐಡೆಂಟಿಟಿ ಸೊಲ್ಯೂಷನ್ಸ್​ ಲಿಮಿಟೆಡ್​ ವತಿಯಿಂದ ಸುನಿಧಿ ಫೌಂಡೇಶನ್​ ಟ್ರಸ್ಟ್​ ಮೂಲಕ ಕೊಡುಗೆಯಾಗಿ ನೀಡಿದ 2 ಲಕ್ಷ ರೂ. ಮೌಲ್ಯದ ವಿವಿಧ ವಿಜ್ಞಾನ ಪ್ರಯೋಗ ಉಪಕರಣಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಸುನಿಧಿ ಫೌಂಡೇಷನ್​ನ ರೂಪಶ್ರೀ ರತ್ನಾಕರ್​, ಪ್ರಾಂಶುಪಾಲ ಜಗದೀಶ್​ ಕುಮಾರ್​, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಯಲ್ಲಮ್ಮ, ಡಯಟ್​ ಉಪನ್ಯಾಸಕ ಯೋಗಾನರಸಿಂಹ ಸ್ವಾಮಿ, ಮುಖ್ಯೋಪಾಧ್ಯಾಯಿನಿ ಇಂದಿರಾ ಬಿ. ಮತ್ತು ಸಂಸ್ಥೆಯ ಶಿಕ್ಷಕರು ಉಪಸ್ಥಿತರಿದ್ದರು.
"

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ, ಸೂಕ್ತ ಸೌಲಭ್ಯ ಇರಬೇಕು. ಆದರೆ, ಎಲ್ಲವನ್ನೂ ಸರ್ಕಾರದಿಂದಲೇ ನಿರೀಕ್ಷೆ ಮಾಡುವುದು ಕಷ್ಟ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ-ಸಂಸ್ಥೆಗಳೂ ಕೂಡ ಶಾಲೆಗಳಿಗೆ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ.