ಉಡುಪಿಯಲ್ಲಿ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿಯನ್ನು ಎಂ.ಎ. ಗಫೂರ್​ ಉದ್ಘಾಟಿಸಿದರು. ಅಬೀದ್​ ಗದ್ಯಾಳ, ಶೋಭಾ ಹರಿಪ್ರಸಾದ್​, ರವಿ ಶೆಟ್ಟಿಗಾರ್​, ಪೂರ್ಣಿಮಾ, ಗಿರೀಶ್​ ಶೆಟ್ಟಿಗಾರ್​ ವಿಟ್ಲ, ಡಾ.ವೆಂಕಟರಾಯ್​ ಶೆಟ್ಟಿಗಾರ್​, ಜಯರಾಮ ಶೆಟ್ಟಿಗಾರ್​ ಇದ್ದರು. 
ಉಡುಪಿ

ವಚನಗಳಿಂದ ಕನ್ನಡ ಸಾಹಿತ್ಯ ಶ್ರೀಮಂತ

* ಎಂ.ಎ. ಗಫೂರ್​ ಅಭಿಪ್ರಾಯ

* ದೇವರ ದಾಸಿಮಯ್ಯ ಜಯಂತಿ ಉದ್ಘಾಟನೆ

ಉಡುಪಿ: ಹನ್ನೆರಡನೇ ಶತಮಾನದಲ್ಲಿ ಆರಂಭಗೊಂಡಿದ್ದ ವಚನ ಚಳವಳಿಗಿಂತ ಮೊದಲೇ ಸರಳ ವಚನಗಳನ್ನು ರಚಿಸುವ ಮೂಲಕ 'ಆದ್ಯ ವಚನಕಾರ' ಎಂಬ ಹೆಗ್ಗಳಿಕೆಗೆ ನೇಕಾರ ಸಮುದಾಯದ ಆರಾಧ್ಯ ದೈವ ದೇವರ ದಾಸಿಮಯ್ಯ ಪಾತ್ರರಾಗಿದ್ದಾರೆ. ಆ ಕಾಲಟ್ಟದಲ್ಲಿಯೇ ವಚನಗಳ ಮೂಲಕ ಸಮಾಜದಲ್ಲಿದ್ದ ಅನಿಷ್ಟ ಪದ್ಧತಿ ಹೋಗಲಾಡಿಸಿ, ಸ್ವಸ್ಥ ಸಮಾಜ ನಿಮಾರ್ಣಕ್ಕೆ ಅವಿರತ ಶ್ರಮಿಸಿದ್ದರು. ಇಂತಹ ಅನೇಕ ಶರಣರ ವಚನಗಳಿಂದಲೇ ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್​ ಅಭಿಪ್ರಾಯಪಟ್ಟರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ.) ಉಡುಪಿ ಸಹಭಾಗಿತ್ವದಲ್ಲಿ ಸೋಮವಾರ (ಮಾ.23) ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ವಚನಗಳಿಂದ ನೈತಿಕತೆ ಬೆಳೆಯಲಿದೆ ಎಂದರು.

ಜಗದ ಹಳೆಯ ಸಾಹಿತ್ಯ

ಶೋಭಾ ಹರಿಪ್ರಸಾದ್​ ಉಡುಪಿ ಮಾತನಾಡಿ, ಭಾರತ ದೇಶದ ಸಾಹಿತ್ಯ ಜಗತ್ತಿನ ಹಳೆಯ ಸಾಹಿತ್ಯವಾಗಿದ್ದು, ವಚನ ಸಾಹಿತ್ಯ ಮಹತ್ತರ ಪಾತ್ರ ವಹಿಸುತ್ತದೆ. ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕವಷ್ಟೇ ಅಲ್ಲದೆ, ಅಂದಿನ ರಾಜಕೀಯ ಕ್ಷೇತ್ರದಲ್ಲೂ ಬದಲಾವಣೆ ತರುವ ನಿಟ್ಟಿನಲ್ಲಿ ವಚನ ರಚನೆಗೊಂಡಿದ್ದವು. 11ನೇ ಶತಮಾನದ ಉತ್ತರಾರ್ಧದಲ್ಲಿ ಹಲವು ವಚನಕಾರರಿದ್ದರು. ಅವರಲ್ಲಿ ದೇವರ ದಾಸಿಮಯ್ಯ ಪ್ರಮುಖರಾಗಿದ್ದು, ಬಸವಾದಿ ವಚನಕಾರರಿಗೂ ಸ್ಫೂರ್ತಿದಾಯಕ ಎಂದೇ ಪರಿಗಣಿಸಲಾಗಿದೆ. ಅವರ 200ಕ್ಕೂ ಹೆಚ್ಚು ವಚನ ಕಾಣಸಿಗುತ್ತಿಲ್ಲ. 176 ವಚನ ಮಾತ್ರ ಲಭ್ಯವಿದೆ ಎಂದರು.
ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ.) ಉಡುಪಿ ಅಧ್ಯಕ್ಷ ರವಿ ಶೆಟ್ಟಿಗಾರ್​ ಮಾತನಾಡಿದರು. ಸಮುದಾಯದ ಸಾಧಕ ಗಿರೀಶ್​ ಶೆಟ್ಟಿಗಾರ್​ ವಿಟ್ಲ ಅವರನ್ನು ಸನ್ಮಾನಿಸಲಾಯಿತು. ಸಂಘಟನೆಯ ಪದಾಧಿಕಾರಿಗಳು, ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಟನೆಯ ಕಾರ್ಯದರ್ಶಿ ಡಾ.ವೆಂಕಟರಾಯ್​ ಶೆಟ್ಟಿಗಾರ್​ ವಂದಿಸಿದರು. ಜಯರಾಮ ಶೆಟ್ಟಿಗಾರ್​ ಮಣಿಪಾಲ ಕಾರ್ಯಕ್ರಮ ನಿರೂಪಿಸಿದರು.
"

ನೇಕಾರ ಸಮುದಾಯದ ಮೂಲ ಪುರುಷರಾದ ದೇವರ ದಾಸಿಮಯ್ಯ ಅವರು ತ್ರಿಪದಿಯಲ್ಲಿ ಬಹಳ ವಚನ ರಚಿಸಿದ್ದಾರೆ. ಬಸವಣ್ಣನವರಿಗಿಂತ ಪೂರ್ವದಲ್ಲೇ ಶರಣ ಚಳವಳಿಗೆ ಭದ್ರ ಬುನಾದಿ ಹಾಕಿದವರಲ್ಲಿ ಪ್ರಮುಖರಾಗಿದ್ದಾರೆ. ಜನಸಾಮಾನ್ಯರ ಮನಸ್ಸು ಪರಿವರ್ತಿಸಲು ವಚನ ರಚಿಸಿ, ಸಮಸಮಾಜ ನಿರ್ಮಾಣದ ಸಂದೇಶ ನೀಡಿದ್ದಾರೆ.