ಮನೋಹರ ಶೆಟ್ಟಿ ಅವರ ಗದ್ದೆಯಲ್ಲಿ ಬೆಳೆದ ಪಿಂಕ್ ಲೌಡ್ ಕಮಲ ಹೂ. 
ಉಡುಪಿ

ಪಡುಬಿದ್ರಿಯಲ್ಲಿ ಕಮಲ ಕಂಪು!

ಇಂದಿರಾ ಎನ್ ಕೆ
ಹೇಮನಾಥ್ ಪಡುಬಿದ್ರಿ
ಭತ್ತ ಬೇಸಾಯದಿಂದ ಹಿಮ್ಮುಖರಾಗುತ್ತಿರುವ ರೈತರಲ್ಲಿ ಉದ್ಯಮಿ ಮನೋಹರ ಶೆಟ್ಟಿ ಕಾಪು ಹೊಸ ಆಶಾಭಾವನೆ ಮೂಡಿಸಿದ್ದಾರೆ. ಕಾಪು ತಾಲೂಕಿನ ಪಾಂಗಾಳದಲ್ಲಿನ ಪಿನಾಕಿನಿ ನದಿ ಹಿನ್ನೀರಿನ ಪ್ರದೇಶದಲ್ಲಿ ಕಮಲ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಮೂರು ಎಕರೆ ಗದ್ದೆಯಲ್ಲಿ ತಾವರೆ ಕೃಷಿ ವಾಡಿ ಲಾಭ ಪಡೆಯುತ್ತಿದ್ದಾರೆ. ತಾವರೆಯಲ್ಲಿ 250ಕ್ಕೂ ಅಧಿಕ ತಳಿಗಳಿದ್ದು, ಅದರಲ್ಲಿ ಕರಾವಳಿ ಮಣ್ಣಿಗೆ ಹೊಂದಿಕೊಳ್ಳುವ ಬುಚಾ, ಪಿಂಕ್ ಲೌಡ್, ವೈಟ್ ಫಿಯೋನಿ ತಳಿಗಳನ್ನು ಬೆಳೆಸಿ, ಇಳುವರಿ ಪಡೆಯುತ್ತಿದ್ದಾರೆ.

ಮೌಲ್ಯವರ್ಧಿತ ಉತ್ಪನ್ನ ತಯಾರಿ

ತಾವರೆ ಹೂವಿನಿಂದ ಸುಗಂಧ ದ್ರವ್ಯ, ಸ್ಪ್ರೇ, ಒಣಗಿದ ಹೂಗಳಿಂದ ಅಲಂಕಾರಿಕ ವಸ್ತುಗಳು, ಕಾಸ್ಮೆಟಿಕ್ ಉತ್ಪನ್ನಗಳು, ಕಾಂಡದ ನಾರಿನಿಂದ ಬಟ್ಟೆ, ಎಲೆಗಳಿಂದ ಆಹಾರ, ಬೇರುಗಳಿಂದ ಉಪ್ಪಿನಕಾಯಿ ಹಾಗೂ ಬೀಜಗಳನ್ನು ಪೌಷ್ಟಿಕ ಆಹಾರವಾಗಿ ಬಳಸುವ ಮೂಲಕ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಅವಕಾಶ ಇದೆ.

ಅಂತರ್ಜಲ ವೃದ್ಧಿಗೆ ಪೂರಕ

ತಾವರೆ ಕೃಷಿಗೆ ಒಂದು ಅಡಿ ನೀರಿನ ಮಟ್ಟವನ್ನು ನಿರಂತರವಾಗಿ ಕಾಯ್ದುಕೊಳ್ಳಲಾಗುತ್ತಿದೆ. ಅದರ ಜತೆಗೆ ಉಪ್ಪು ನೀರಿನ ಹಾವಳಿ ಮತ್ತು ತಾವರೆ ಕೊಳಕ್ಕೆ ಹರಿದು ಬರುವ ಕಸ ಕಡ್ಡಿ ತ್ಯಾಜ್ಯಗಳನ್ನು ತಡೆಯಲು ಗದ್ದೆಯ ಸುತ್ತ ಬಂಡ್ ನಿರ್ಮಿಸಲಾಗಿದೆ. ತಾವರೆ ಬೆಳೆಯಲು ಮೊಣಕಾಲಿನವರೆಗೆ ನೀರು ಸಂಗ್ರಹಿಸುವುದರಿಂದ ಅಂತರ್ಜಲ ವೃದ್ಧಿಗೂ ಪೂರಕವಾಗಿದೆ.

ಕಡಿಮೆ ವೆಚ್ಚದಲ್ಲಿ ತಾವರೆ ಬೆಳೆ

ಗದ್ದೆಗಳನ್ನು ಉಳುಮೆ ಮಾಡಿ, ಹಟ್ಟಿ ಗೊಬ್ಬರ ಹಾಕಿದ ಬಳಿಕ ತಾವರೆ ಗಿಡಗಳನ್ನು ನಾಟಿ ವಾಡಲಾಗುತ್ತದೆ. ನಾಟಿಯಾದ 90 ದಿನಗಳಲ್ಲಿ ಮೊದಲ ಇಳುವರಿ ಆರಂಭವಾಗುತ್ತದೆ. ಮೂರರಿಂದ ನಾಲ್ಕು ತಿಂಗಳು ನಿರಂತರವಾಗಿ ಹೂಗಳನ್ನು ಕೊಯ್ಲು ವಾಡಬಹುದು. ಇಲ್ಲಿ ಪಿಂಕ್ ಹಾಗೂ ಬಿಳಿ ಬಣ್ಣದ ತಾವರೆ ಹೂಗಳು ಬೆಳೆಯಲಾಗುತ್ತಿದೆ. ಇಲ್ಲಿ ಬೆಳೆದ ತಾವರೆ ಹೂಗಳು ಆರರಿಂದ ಏಳು ದಿನಗಳವರೆಗೆ ತಾಜಾತನ ಕಾಪಾಡಿಕೊಳ್ಳುತ್ತವೆ.

ಕಳೆದ ನಾಲ್ಕೈದು ತಿಂಗಳಿನಿಂದ ದಿನವಹಿ ಸರಾಸರಿಯಾಗಿ 400ರಿಂದ 500 ತಾವರೆ ಹೂಗಳನ್ನು ವಾರುಕಟ್ಟೆಗೆ ಕಳುಹಿಸಲಾಗುತ್ತಿದೆ. ವಾರುಕಟ್ಟೆಯಲ್ಲಿ ಒಂದು ತಾವರೆ ಹೂವನ್ನು 15 ರೂ.ಗೆ ಖರೀದಿಸಲಾಗುತ್ತಿದ್ದು, 40ರಿಂದ 50 ರೂ.ಗೆ ವಾರಾಟವಾಗುತ್ತಿದೆ. ತಿಂಗಳಿಗೆ ಸರಾಸರಿಯಾಗಿ ಒಂದರಿಂದ ಎರಡು ಲಕ್ಷ ರೂ.ವರೆಗೆ ಆದಾಯ ಗಳಿಸುವ ನಿರೀಕ್ಷೆ ಹೊಂದಿದ್ದೇವೆ.

— ಮನೋಹರ ಶೆಟ್ಟಿ ಕಾಪು, ಉದ್ಯಮಿ