ಕಾಸರಗೋಡು: ಸ್ಕೂಟರ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಲಾಟರಿ ಮಾರಾಟಗಾರ, ಚೌಕಿ ಕಾವುಗೋಳಿ ನಿವಾಸಿ ಲೋಕೇಶ್(42) ಮೃತಪಟ್ಟಿದ್ದಾರೆ.
ವಿದ್ಯಾನಗರ ಜಿಲ್ಲಾ ಕೈಗಾರಿಕಾ ಕೇಂದ್ರ ಸಮೀಪ ಲಾಟರಿ ಸ್ಟಾಲ್ ನಡೆಸುತ್ತಿದ್ದರು.ತಿಂಗಳ ಹಿಂದೆ ಅವರು ಸಂಚರಿಸುತ್ತಿದ್ದ ಸ್ಕೂಟರ್ ಮಂಗಲ್ಪಾಡಿ ಶಾಲೆ ಸಮೀಪ ರಸ್ತೆಯಲ್ಲಿ ಮಗುಚಿ ಬಿದ್ದ ಪರಿಣಾಮ ಲೋಕೇಶ್ ಗಂಭೀರ ಗಾಯಗೊಂಡಿದ್ದರು.
ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿದ ನಂತರ ಬಿಡುಗಡೆಗೊಳಿಸಿ ಮನೆಗೆ ಕರೆತರಲಾಗಿತ್ತು.