ಆಗುಂಬೆ ಘಾಟಿಯಲ್ಲಿ ಕಂದಕಕ್ಕೆ ಬಿದ್ದ ಲಾರಿ 
ಉಡುಪಿ

ಆಗುಂಬೆ ಘಾಟಿಯಲ್ಲಿ ಕಂದಕಕ್ಕೆ ಉರುಳಿದ ಲಾರಿ

ತಡೆಗೋಡೆ ನಿರ್ಮಿಸಲು ಆಗ್ರಹ

ಹೆಬ್ರಿ: ಉಡುಪಿ- ಹೆಬ್ರಿ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಆಗುಂಬೆ ಘಾಟಿಯ 2ನೇ ಸುತ್ತಿನಲ್ಲಿ ಗುರುವಾರ ರಾತ್ರಿ 12.30ರ ಹೊತ್ತಿಗೆ ಲಾರಿ ಕಂದಕಕ್ಕೆ ಉರುಳಿದೆ.

ಚಾಲಕ ಲಾರಿಯಲ್ಲೇ ಸಿಲುಕ್ಕಿದ್ದು, ಹೆಬ್ರಿಯ ಕುಚ್ಚೂರು ಪ್ರಭಾಕರ ಪೂಜಾರಿ ನೇತೃತ್ವದಲ್ಲಿ ಕ್ರೇನ್ ಮೂಲಕ ಲಾರಿಯನ್ನು ಮುಂಜಾನೆ 3.30ಕ್ಕೆ ಮೇಲೆತ್ತಲಾಯಿತು. ಲಾರಿ ಘಾಟಿಯಿಂದ ಕಂದಕಕ್ಕೆ ಬೀಳುತ್ತಿದ್ದಂತೆ ಕ್ಲೀನರ್ ಜಿಗಿದು ಪಾರಾಗಿದ್ದಾರೆ. ಲಾರಿಯನ್ನು ಮೇಲೆತ್ತಿದ ಬಳಿಕ ಚಾಲಕನನ್ನು ಹೊರ ತೆಗೆಯಲಾಯಿತು. ಚಾಲಕನ ಬಲಕಾಲಿನ 3 ಬೆರಳುಗಳು ತುಂಡಾಗಿದೆ.

ಹೆಬ್ರಿ ಸಬ್ ಇನ್‌ಸ್ಪೆಕ್ಟರ್ ಲೋಹಿತ್ ಕುಮಾರ್ ಮತ್ತು ತಂಡ ಸ್ಥಳದಲ್ಲಿದ್ದು ಸಹಕಾರ ನೀಡಿದರು. ಘಾಟಿಯ ಹಲವೆಡೆ ತಡೆಗೋಡೆ ಇಲ್ಲದೆ ವಾಹನಗಳು ಕಂದಕಕ್ಕೆ ಉರುಳುತ್ತಿವೆ. ಇತ್ತೀಚೆಗೆ ಪಿಕ್‌ಅಪ್ ವಾಹನ ಇದೇ ಜಾಗದಲ್ಲೇ ಉರುಳಿತ್ತು. ಸೂಕ್ತ ತಡೆಗೋಡೆ ನಿರ್ಮಿಸುವಂತೆ ಸಮಾಜ ಸೇವಕ ಕುಚ್ಚೂರು ಪ್ರಭಾಕರ ಪೂಜಾರಿ ಒತ್ತಾಯಿಸಿದ್ದಾರೆ.