ಹೆಬ್ರಿ ತಾಲೂಕು ಕಚೇರಿಗೆ ಗುರುವಾರ ಲೋಕಾಯುಕ್ತ ಡಿವೈಎಸ್‌ಪಿ ಹಾಲಮೂರ್ತಿ ರಾವ್ ನೇತೃತ್ವದ ತಂಡ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿತು.  
ಉಡುಪಿ

ಹೆಬ್ರಿ ತಾಲೂಕು ಕಚೇರಿಗೆ ಲೋಕಾಯುಕ್ತ ಭೇಟಿ

ಹೆಬ್ರಿ: ಹೆಬ್ರಿ ತಾಲೂಕು ಕಚೇರಿಗೆ ಗುರುವಾರ ಲೋಕಾಯುಕ್ತ ಡಿವೈಎಸ್‌ಪಿ ಹಾಲಮೂರ್ತಿ ರಾವ್ ನೇತೃತ್ವದ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿವೃತ್ತ ಸೈನಿಕರಿಗೆ ಜಮೀನು ಮಂಜೂರಾತಿ ಬಗ್ಗೆ ದೂರುಗಳಿರುವುದರಿಂದ ಶೀಘ್ರದಲ್ಲಿ ಅವರಿಗೆ ಜಮೀನು ಮಂಜೂರಾತಿ ಬಗ್ಗೆ ವಾಹಿತಿ ನೀಡುವುದರೊಂದಿಗೆ, ಕೆಲಸ ವಾಡಲು ಸಿಬ್ಬಂದಿ ಮಹೇಶ್ ಅವರಿಗೆ ಡಿವೈಎಸ್‌ಪಿ ಹಾಲಮೂರ್ತಿ ಸೂಚನೆ ನೀಡಿದರು.
ವಿವಿಧ ಹಂತದಲ್ಲಿ ಆರ್‌ಆರ್‌ಟಿ ವಿಭಾಗದಲ್ಲಿ 40 ಫೈಲ್, 94ಸಿಯಲ್ಲಿ 531, 53 ಹಾಗೂ 57ರಲ್ಲಿ 2,700 ಕಡತ, ಜನನ ಮರಣದಲ್ಲಿ 27 ಕಡತಗಳು ಬಾಕಿ ಇರುವುದನ್ನು ತಂಡ ಪರಿಶೀಲಿಸಿದೆ. ಅನೇಕ ಕಡತಗಳಿಗೆ ಯಾವುದೇ ಕಾರಣಗಳು ಇಲ್ಲದಿರುವುದರಿಂದ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ವರದಿ ನೀಡುತ್ತೇವೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ಸತೀಶ್ ಹಂದಾಡಿ, ಪ್ರಸನ್ನ, ಅಬ್ದುಲ್ ಜಲಲ್, ಸುದೀಪ್ ಇದ್ದರು.