ಜಲಜೀವನ್ ಅವ್ಯವಸ್ಥೆ ಬಗ್ಗೆ ತಾಲೂಕು ರೈತ ಸಂದ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುವಾರ್ ಶೆಟ್ಟಿ ಮುಂದಾಳತ್ವದಲ್ಲಿ ಶಿರೂರಿನಲ್ಲಿ ಸಾರ್ವಜನಿಕ ಸಂವಾದ ನಡೆಯಿತು. ಪ್ರಮುಖರಾದ ಕಾಪ್ಸಿ ನೂರ್‌ಮಹ್ಮದ್, ನಾಗರತ್ನಾ ಆಚಾರ್ಯ, ರಾಜೇಶ ಶೆಟ್ಟಿ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಬೈಂದೂರು
ಬೈಂದೂರು ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ 800 ಕೋಟಿ ರೂ.ಗೂ ಅಧಿಕ ಅನುದಾನ ಬಂದಿದೆ. ಆದರೆ ಇದುವರೆಗೆ ಹನಿ ನೀರು ಕೊಟ್ಟಿಲ್ಲ. ಇದರ ಬಗ್ಗೆ ಜನಜಾಗೃತಿ ಮೂಡಿಸಿ ನೀರಿಗಾಗಿ ಹೋರಾಟ ವಾಡುವುದು ನಮ್ಮ ಉದ್ದೇಶವಾಗಿದೆ. ಸಮಗ್ರ ದಾಖಲೆ ಪಡೆದು ಲೋಕಾಯುಕ್ತ ತನಿಖೆಗೆ ಆಗ್ರಹಿಸಲಾಗುತ್ತದೆ ಎಂದು ರೈತ ಸಂದ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುವಾರ್ ಶೆಟ್ಟಿ ತಿಳಿಸಿದರು.
ಜಲಜೀವನ್ ಮಿಷನ್ ಯೋಜನೆಯಡಿ ಶಿರೂರು ಗ್ರಾಪಂ ವ್ಯಾಪ್ತಿಗೆ 7.35 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ಶೇ.80 ಹಣ ಗುತ್ತಿಗೆದಾರರಿಗೆ ಪಾವತಿಯಾಗಿದೆ. ಆದರೆ ಯಾವ ಮನೆಗೂ ನಲ್ಲಿ ನೀರು ಬಂದಿಲ್ಲ. ಈ ಕುರಿತು ತಾಲೂಕು ರೈತ ಸಂದ ಮುಂದಾಳತ್ವದಲ್ಲಿ ಶಿರೂರು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಸಾರ್ವಜನಿಕರೊಂದಿಗೆ ಸಮಗ್ರ ಚರ್ಚೆಯೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿರೂರು ಗ್ರಾ.ಪಂ. ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್ ವಾತನಾಡಿ, ಶಿರೂರಿನಲ್ಲಿ ಎರಡೆರಡು ಬಾರಿ ಈ ಬಗ್ಗೆ ಸಭೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಇದುವರೆಗೆ ಯಾವ ಅಧಿಕಾರಿಯೂ ಗ್ರಾಮ ಪಂಚಾಯಿತಿಗೆ ವಾಹಿತಿ ನೀಡಿಲ್ಲ. ಜತೆಗೆ ಕೆಲವೆಡೆ ನೂರರಿಂದ ಸಾವಿರ ರೂ.ವರೆಗೆ ಗುತ್ತಿಗೆದಾರರ ಕಡೆಯವರು ಲಂಚ ಪಡೆದಿದ್ದಾರೆ. ಶಿರೂರಿಗೆ ಯಾವಾಗ ನೀರು ಕೊಡುತ್ತಾರೆ ಎಂದು ಸರಿಯಾಗಿ ತಿಳಿಸಬೇಕು ಎಂದು ಒತ್ತಾಯಿಸಿದರು.
ಶಿರೂರು ಗ್ರಾ.ಪಂ. ನಿಕಟಪೂರ್ವಾಧ್ಯಕ್ಷೆ ನಾಗರತ್ನಾ ಆಚಾರ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ ಶೆಟ್ಟಿ, ವಾಜಿ ಅಧ್ಯಕ್ಷೆ ಜಿ.ಯು.ದಿಲ್‌ಶಾದ್ ಬೇಗಂ, ರುರಾಮ ಕೆ.ಪೂಜಾರಿ, ಪಾಲಾಕ್ಷ ಮೇಸ್ತ, ಮುಕ್ತಿ ಅಲ್ತಾಫ್, ಪತ್ರಕರ್ತ ಅರುಣ್ ಕುವಾರ್ ಶಿರೂರು, ಅಜ್ಮಲ್ ಸಾಹೇಬ್ ಶಿರೂರು, ಯೋಗೀಶ್ ಪೂಜಾರಿ ಶಿರೂರು, ಕೋಟಿ ಪೂಜಾರಿ, ಪದ್ಮಾಕ್ಷ ಗೋಳಿಬೇರು ಮೊದಲಾದವರಿದ್ದರು.
ಸಂವಾದ ನಡೆಸುವ ವೇಳೆ ಶಿರೂರು ಗ್ರಾಮದ ಬುಖಾರಿ ಕಾಲನಿ ಟ್ಯಾಂಕ್ ಬಳಿ ಜಲಜೀವನ್ ಯೋಜನೆ ಅಧಿಕಾರಿಗಳು ಬಂದಿರುವ ವಾಹಿತಿ ತಿಳಿದು ದೌಡಾಯಿಸಿದ ಸಾರ್ವಜನಿಕರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಯೋಜನೆ ಅವ್ಯವಸ್ಥೆ ಬಗ್ಗೆ ತಿಳಿಸಿದಾಗ ಪ್ರತಿಕ್ರಿಯಿಸಿದ ಸಹಾಯಕ ಇಂಜಿನಿಯರ್ ಗಿರೀಶ್, ನಮ್ಮ ಇಲಾಖೆಯಿಂದ ಈ ಬಗ್ಗೆ ಯಾವುದೇ ವಾಹಿತಿ ಬೇಕಿದ್ದರೂ ಮುಕ್ತವಾಗಿ ನೀಡುತ್ತೇವೆ. ಕಾಮಗಾರಿ ಪಾರದರ್ಶಕವಾಗಿ ನಡೆಯುತ್ತಿದೆ. ಗ್ರಾಮ ಪಂಚಾಯಿತಿ ಹಾಗೂ ಎಲ್ಲ ಮನೆಗಳಿಗೂ ವಾಹಿತಿ ನೀಡಿದ್ದೇವೆ ಎಂದು ತಿಳಿಸಿದರು.