ಮಣಿಪಾಲದಲ್ಲಿರುವ ಕಸ್ತೂರ್ಬಾ ಆಸ್ಪತ್ರೆ.
* ಪ್ರತಿ ತಿಂಗಳ ಮೊದಲ ಗುರುವಾರ ಸೇವೆ ಲಭ್ಯ
ಉಡುಪಿ: ಲಿವರ್ (ಯಕೃತ್ತು) ಆರೈಕೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಾ.5ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3ರ ವರೆಗೆ ಲಿವರ್- ಟ್ರಾನ್ಸ್ಪ್ಲಾಂಟ್ ಕ್ಲಿನಿಕ್ ತೆರೆದಿರಲಿದೆ. ಅಲ್ಲದೆ, ಈ ಕ್ಲಿನಿಕ್ ಪ್ರತಿ ತಿಂಗಳ ಮೊದಲ ಗುರುವಾರ ಸೇವೆಗೆ ಲಭ್ಯ ಇರಲಿದೆ. ಈ ಸೌಲಭ್ಯದಿಂದ ವಿಶೇಷವಾಗಿ ಲಿವರ್ ಮತ್ತು ಲಿವರ್ ಕಸಿ ಸೇವೆ ಒದಗಿಸಲು, ಆರಂಭಿಕ ರೋಗರ್ನಿಣಯ, ತಜ್ಞರ ಮೌಲ್ಯಮಾಪನ ಮತ್ತು ಆರೈಕೆಯ ನಿರಂತರತೆಗೆ ಸಹಾಯವಾಗಲಿದೆ.
ಮಣಿಪಾಲ್ ಆಸ್ಪತ್ರೆ ಬೆಂಗಳೂರಿನ ಎಚ್ಪಿಬಿ&ಲಿವರ್ ಮತ್ತು ಪ್ಯಾಂಕ್ರಿಯಾಟಿಕ್ ಕಸಿಯ ತಜ್ಞವೈದ್ಯ ಡಾ. ಜಯಂತ್ ರೆಡ್ಡಿ ಮತ್ತು ತಜ್ಞವೈದ್ಯೆ ಡಾ. ದೀಪ್ತಿ ರಾಮಚಂದ್ರ ನೇತೃತ್ವ ವಹಿಸಲಿದ್ದಾರೆ. ಗ್ಯಾಸ್ಟ್ರೊಎಂಟರಾಲಜಿ ವಿಭಾಗದ ಮುಖ್ಯಸ್ಥ ಡಾ. ಗಣೇಶ್ ಭಟ್ ಮತ್ತು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಗ್ಯಾಸ್ಟ್ರೊಎಂಟರಾಲಜಿ ವಿಭಾಗದ ಪ್ರಾಧ್ಯಾಪಕ ಮತ್ತು ಘಟಕದ ಮುಖ್ಯಸ್ಥ ಡಾ. ಶಿರನ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.
ತೀವ್ರ ಮತ್ತು ದೀರ್ಘಕಾಲದ ಲಿವರ್ ಕಾಯಿಲೆ, ಕೊಬ್ಬಿನ ಲಿವರ್ ಕಾಯಿಲೆ, ಲಿವರ್ ಸಿರೋಸಿಸ್ ಮತ್ತು ಅದರ ತೊಡಕು, ಲಿವರ್ ಗೆಡ್ಡೆ ಮತ್ತು ಕ್ಯಾನ್ಸರ್, ಹೆಪಟೊರಿನಲ್ ಸಿಂಡ್ರೋಮ್, ಮಕ್ಕಳಲ್ಲಿನ ಲಿವರ್ ಕಾಯಿಲೆ, ಕಸಿ ಮಾಡುವ ಮೊದಲು ಅಥವಾ ನಂತರದ ಮೌಲ್ಯಮಾಪನದ ಸಮಗ್ರ ಸೇವೆ ನೀಡಲಾಗುವುದು. ತಜ್ಞರ ಭೇಟಿಗೆ ನೋಂದಣಿ ಕಡ್ಡಾಯ. ಮಾಹಿತಿಗಾಗಿ ಮೊ.ಸಂ. 6364469750 ಕರೆ ಮಾಡಬಹುದು. ಅಥವಾ www.khmanipal.comಗೆ ಭೇಟಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.