ಮುನಿಯಾಲು ಕಾಡುಹೊಣೆಯ ಸುದಾಣ್ಣಸ್ ರೀವರ್ ವ್ಯೆ ಗಾರ್ಡನ್‌ನಲ್ಲಿ ‘ಸಂಬಂಧ’ ಲಯನ್ಸ್ ಪ್ರಾಂತೀಯ ಸಮ್ಮೇಳನ ನಡೆಯಿತು. ಪ್ರಮುಖರಾದ ಗುರುಪ್ರಸಾದ ಶೆಟ್ಟಿ, ಅಶ್ವತ್ ಎಸ್.ಎಲ್., ಜಾರ್ಕಳ ವಸಂತಿ ಶೆಟ್ಟಿ ಮತ್ತಿತರರಿದ್ದರು.
ವಿಜಯವಾಣಿ ಸುದ್ದಿಜಾಲ ಹೆಬ್ರಿ
ವಿಶ್ವದ ಅತ್ಯಂತ ಪ್ರತಿಷ್ಠಿತ ಸೇವಾಸಂಸ್ಥೆ ಲಯನ್ಸ್ ಕ್ಲಬ್ ಜನಸೇವೆಗೆ ಅತ್ಯುತ್ತಮ ಸಂಸ್ಥೆಯಾಗಿದ್ದು, ವ್ಯಕ್ತಿತ್ವ ರೂಪಿಸುತ್ತದೆ. ಸವಾಜವನ್ನು ಬೆಸೆಯುವ ಮೂಲಕ ನಮಗೆ ಸ್ಫೂರ್ತಿ, ಪ್ರೇರಣೆ ನೀಡಿದೆ ಎಂದು ಲಯನ್ಸ್ 317 ಸಿ ಪ್ರಾಂತ್ಯ 4ರ ಪ್ರಾಂತೀಯ ಅಧ್ಯಕ್ಷ ಗುರುಪ್ರಸಾದ ಶೆಟ್ಟಿ ಹೇಳಿದರು.
ಮುನಿಯಾಲು ಕಾಡುಹೊಣೆಯ ಸುದಾಣ್ಣಸ್ ರೀವರ್ ವ್ಯೆ ಗಾರ್ಡನ್‌ನಲ್ಲಿ ನಡೆದ ‘ಸಂಬಂಧ’ ಲಯನ್ಸ್ ಪ್ರಾಂತೀಯ ಸಮ್ಮೇಳನ ಅಧ್ಯಕ್ಷತೆ ವಹಿಸಿ ವಾತನಾಡಿದರು.
ಜಾರ್ಕಳ ವಸಂತಿ ಶೆಟ್ಟಿ ಉದ್ಘಾಟಿಸಿದರು. ಕಾರ್ಕಳ ಕ್ರಿಯೇಟಿವ್ ಎಜುಕೇಷನ್ ೌಂಡೇಷನ್ ಸಹಸಂಸ್ಥಾಪಕ ಅಶ್ವತ್ಥ್ ಎಸ್.ಎಲ್., ಲಯನ್ಸ್ 317 ಸಿ ಪ್ರಾಂತ್ಯ 4ರ ಪ್ರಾಂತೀಯ ಪ್ರಥಮ ಮಹಿಳೆ ಪ್ರಿಯಾ ಗುರುಪ್ರಸಾದ್ ಶೆಟ್ಟಿ ಮಾತನಾಡಿದರು.
ಆರೋಗ್ಯ ಮತ್ತು ಶಿಕ್ಷಣಕ್ಕೆ ನೆರವು ಹಸ್ತಾಂತರಿಸಲಾಯಿತು. ಸಮ್ಮೇಳನ ಯಶಸ್ಸಿಗೆ ಸಹಕರಿಸಿದ ಹಲವರನ್ನು ಗೌರವಿಸಲಾಯಿತು. ನೀರೆಬೈಲೂರು ಉದಯ ಕುವಾರ್ ಹೆಗ್ಡೆ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು.
ಲಯನ್ಸ್ ಪ್ರಥಮ ಉಪ ಜಿಲ್ಲಾ ಗವರ್ನರ್ ರಾಜೀವ ಕೋಟ್ಯಾನ್, ದ್ವಿತೀಯ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ, ಇಂಟರ್ ನ್ಯಾಷನಲ್ ತರಬೇತುದಾರ ಎನ್.ಎಂ.ಹೆಗ್ಡೆ, ಪೊಲೀಸ್ ಅಧಿಕಾರಿ ಶ್ರೀಕಾಂತ್ ಕೆ., ಉದ್ಯಮಿ ಸುಜಯ ಶೆಟ್ಟಿ ಮುನಿಯಾಲು, ಮುಂಬೈ ಉದ್ಯಮಿ ಪಡುಕುಡೂರು ಹರೀಶ ಶೆಟ್ಟಿ, ಲಯನ್ಸ್ ಪೂರ್ವ ಜಿಲ್ಲಾ ಗವರ್ನರ್‌ಗಳು, ವಿವಿಧ ಲಯನ್ಸ್ ಪ್ರಮುಖರು, ವಲಯಾಧ್ಯಕ್ಷರು, ಲಿಯೋ ಕ್ಲಬ್ ಪ್ರಮುಖರು, ಸಮ್ಮೇಳನ ಸಮಿತಿ ಅಧ್ಯಕ್ಷ ರಾಜೇಶ ಶೆಟ್ಟಿ, ಕಾರ್ಯದರ್ಶಿ ಸುರೇಶ ಶೆಟ್ಟಿ, ಕೋಶಾಧಿಕಾರಿ ದಿಲೀಪ್ ಶೆಟ್ಟಿ, ವಲಯಾಧ್ಯಕ್ಷರಾದ ಸತೀಶ ಶೆಟ್ಟಿ, ವಿಶ್ವನಾಥ ಪಾಟ್ಕರ್, ದಿನೇಶ ಕುವಾರ್, ಹೊಸ್ಟ್ ಕ್ಲಬ್ ನೀರೆಬೈಲೂರು ಅಧ್ಯಕ್ಷ ಪ್ರಶಾಂತ ಕುವಾರ್ ಶೆಟ್ಟಿ, ಕಾರ್ಯದರ್ಶಿ ಸದಾನಂದ ಸಾಲಿಯಾನ್, ಹೆಬ್ರಿ ಟಿ.ಜಿ.ಆಚಾರ್ಯ, ಅರುಣ್ ಕುವಾರ್ ಹೆಗ್ಡೆ, ಶಾಲಿನಿ ಬಂಗೇರ ಮುಂತಾದವರು ಉಪಸ್ಥಿತರಿದ್ದರು.
ಸದಾನಂದ ಸಾಲಿಯಾನ್ ವಂದಿಸಿದರು. ರಾಜೇಶ ಶೆಟ್ಟಿ ಸ್ವಾಗತಿಸಿದರು. ಅಶೀಶ್ ಶೆಟ್ಟಿ ಮತ್ತು ಸಂತೃಪ್ತಿ ಶೆಟ್ಟಿ ನಿರೂಪಿಸಿದರು.
ಹೆಬ್ರಿ ಸಿಟಿ ಪ್ರಥಮ
ಹನ್ನೊಂದು ಲಯನ್ಸ್ ಕ್ಲಬ್‌ಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದವು. ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಪ್ರಥಮ, ಬೆಳ್ಮಣ್ ಮತ್ತು ಬೆಳ್ಮಣ್ ಸೆಂಚುರಿ ದ್ವೀತಿಯ ಹಾಗೂ ಮುಂಡ್ಕೂರು ಕಡಂದಲೆ ತೃತೀಯ ಪ್ರಶಸ್ತಿ ಪಡೆಯಿತು.