ನೂತನ ಗವರ್ನರ್​ ರಾಜೀವ್​ ಕೋಟ್ಯಾನ್​ ಮಾತನಾಡಿದರು. 
ಉಡುಪಿ

ಆ.8ರಂದು ಲಯನ್ಸ್​ ಜಿಲ್ಲಾ ಪದಗ್ರಹಣ ಸಮಾರಂಭ

ಗೋಪಾಲಕೃಷ್ಣ ಪಾದೂರ್
ಉಡುಪಿ: ವಿಭಜಿತ ಲಯನ್ಸ್​ ಜಿಲ್ಲೆ 317ಸಿ ಜಿಲ್ಲಾ ಸಂಪುಟ ಪದಗ್ರಹಣ ಸಮಾರಂಭ ಆ. 8ರಂದು ಅಪರಾಹ್ನ 4.30ಕ್ಕೆ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಜರುಗಲಿದೆ ಎಂದು ಲಯನ್ಸ್​ ಜಿಲ್ಲಾ ಮಾಜಿ ಗವರ್ನರ್​ ಜಯಕರ್​ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಯಲ್ಸ್​ ಜಿಲ್ಲಾ ಗವರ್ನರ್​ ರಾಜೀವ್​ ಕೋಟ್ಯಾನ್​ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಥಮ ಮಹಿಳೆ ವೀಣಾ ಆರ್​. ಕೋಟ್ಯಾನ್​ ದೀಪ ಬೆಳಗಿ ಉದ್ಘಾಟಿಸಲಿದ್ದಾರೆ. ಲಯನ್ಸ್​ ಕ್ಲಬ್​ ಕುಂದಾಪುರ ಸಿಟಿ ಸೆಂಟರ್​ ಅಧ್ಯಕ್ಷ ಪ್ರಸಾದ್​ ಕುಮಾರ್​ ಕೋಡಿ ಆತಿಥ್ಯವನ್ನು ವಹಿಸಿದ್ದಾರೆ. ಲಯನ್ಸ್​ ಮಾಜಿ ಅಂತರಾಷ್ಟ್ರೀಯ ನಿರ್ದೇಶಕ ಪಂಕಜ್​ ಮೆಹ್ರಾ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಅಂತರಾಷ್ಟ್ರೀಯ ನಿರ್ದೇಶಕರಾದ ಲಯನ್​ ವಂಶಿಧರ್​ ಬಾಬು, ಕೃಷ್ಣ ರೆಡ್ಡಿ ಮತ್ತು ಮಲ್ಪಿಪಲ್​ ಅಧ್ಯಕ್ಷ ಅಶ್ವಥ್​ ನಾರಾಯಣ್​, ರಾಮಚಂದ್ರನ್​ ಭಾಗವಹಿಸಲಿದ್ದಾರೆ. ಪ್ರಥಮ ಉಪಜಿಲ್ಲಾ ಗವರ್ನರ್​ ಹರಿಪ್ರಸಾದ್​ ರೈ ಮತ್ತು ದ್ವೀತಿಯ ಉಪ ಜಿಲ್ಲಾ ಗವರ್ನರ್​ ರಮಾನಂದ ಕೆ., ಸಂಪುಟ ಕಾರ್ಯದರ್ಶಿ ಸದಾನಂದ ನಾವಡ, ಕೋಶಾಧಿಕಾರಿ ವಿನೋದ್​ ನಾರಾಯಣ ಮತ್ತು ಸಂಪುಟ ಸದಸ್ಯರ ಪದಗ್ರಹಣ ನಡೆಯಲಿದೆ. ಸುಮಾರು 1000 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ನೂತನ ಗವರ್ನರ್​ ರಾಜೀವ್​ ಕೋಟ್ಯಾನ್​ ಮಾತನಾಡಿ, 2026&27ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯಾದ್ಯಂತ ವಿವಿಧ ಜನೋಪಯೋಗಿ ಸೇವಾ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳುವ ಗುರಿಯನ್ನು ಲಯನ್ಸ್​ ಕ್ಲಬ್​ಗಳು ಹೊಂದಿದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 75 ಲಯನ್ಸ್​ ಕ್ಲಬ್​ಗಳಲ್ಲಿ 2,500ಕ್ಕೂ ಹೆಚ್ಚು ಸದಸ್ಯರು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿಯೊಂದು ಕ್ಲಬ್​ನಿಂದ ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ, ಕುಡಿಯುವ ನೀರಿನ ಯೋಜನೆ, ಆರ್ಥಿಕವಾಗಿ ಹಿಂದುಳಿದವರ ಹಸಿವು ನಿವಾರಣೆ, ಮಧುಮೇಹ ತಡೆಗಟ್ಟುವಿಕೆ, ಯುವಜನರಿಗೆ ಉದ್ಯೋಗ ಮಾಹಿತಿ, ಕ್ಯಾನ್ಸರ್​ ಪೀಡಿತ ಮಕ್ಕಳಿಗೆ ನೆರವು ಹಾಗೂ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಲಯನ್ಸ್​ ಇಂಟರ್ನ್ಯಾಶನಲ್​ ಡಿಸ್ಟ್ರಿಕ್ಟ್​ 317ಸಿ ಪ್ರಥಮ ಉಪ ಜಿಲ್ಲಾ ಗವರ್ನರ್​ ಹರಿಪ್ರಸಾದ್​ ರೈ, ಪದ್ರಗಹಣ ಸಮಿತಿ ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಪ್ರಕಾಶ್ಚಂದ್ರ, ಸಂಪುಟ ಕಾರ್ಯದರ್ಶಿ ಸದಾನಂದ ನಾವಡ ಮೊದಲಾದವರು ಉಪಸ್ಥಿತರಿದ್ದರು.