ಉಡುಪಿಯ ಟಿ.ಎ. ಪೈ ಮೋಡರ್ನ್ ಶಾಲೆಯ ಮಕ್ಕಳಿಗೆ ನೋಟ್ಬುಕ್, ರೇನ್ ಕೋಟ್ ವಿತರಿಸಲಾಯಿತು. ಎಚ್.ಆರ್. ಶೆಣೈ, ಡಾ. ಗಣೇಶ್ ಪೈ, ಡಾ. ನಿಶಾಂತ್ ಭಟ್, ಕೃಷ್ಣ ಮುಖ್ಯೋಪಾಧ್ಯಾಯ, ನಾರಾಯಣ ಭಂಡಾರಿ, ಮಟ್ಟಾರು ರಮೇಶ್ ಕಿಣಿ, ಸುಲೋಚನಾ ಇತರರಿದ್ದರು.
*ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಡಾ. ಗಣೇಶ್ ಪೈ ಅನಿಸಿಕೆ
* ಕಾಡಬೆಟ್ಟು ಶಾಲೆಯಲ್ಲಿ ನೋಟ್ಬುಕ್, ಕೊಡೆ ವಿತರಣೆ
ಉಡುಪಿ: ದಾನಿಗಳು, ಸಂ&ಸಂಸ್ಥೆಗಳ ಸಹಕಾರದಲ್ಲಿ ಸರ್ಕಾರಿ ಶಾಲೆಯ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲು ಅಗತ್ಯ ಕಲಿಕಾ ಸಾಮಗ್ರಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಂಡು ಚೆನ್ನಾಗಿ ಕಲಿಯಬೇಕು. ಕಲಿತು ಉದ್ಯೋಗಿಗಳಾಗಬೇಕು. ಬಳಿಕ ತಾವುಗಳೂ ಸಹ ಕಲಿತ ಮಾತೃ ಶಾಲೆಯ ಋಣ ತೀರಿಸಬಹುದು ಎಂದು ಲಯನ್ಸ್ ಕ್ಲಬ್ ಮಣಿಪಾಲದ ಮಾಜಿ ಅಧ್ಯಕ್ಷ ಡಾ. ಗಣೇಶ್ ಪೈ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿ ಕಾಡಬೆಟ್ಟಿನಲ್ಲಿರುವ ಟಿ.ಎ. ಪೈ ಮೋಡರ್ನ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ (ಜೂ.6) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಮಣಿಪಾಲದ ವತಿಯಿಂದ ಉಚಿತವಾಗಿ ನೀಡಿದ ನೋಟ್ಬುಕ್, ರೇನ್ ಕೋಟ್ ವಿತರಿಸಿ ಮಾತನಾಡಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಆರ್. ಶೆಣೈ ಮಾತನಾಡಿ, ಅನೇಕ ವರ್ಷಗಳಿಂದ ಶಾಲಾ ಮಕ್ಕಳಿಗೆ ಉಚಿತ ಕೊಡುಗೆ ನೀಡುತ್ತಿರುವ ಲಯನ್ಸ್ ಕ್ಲಬ್ ಮಣಿಪಾಲದ ಸರ್ವ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದೆಯೂ ನಿಮ್ಮ ಸಹಕಾರ ಇರಲಿ ಎಂದು ಆಶಿಸಿದರು.
ಮಟ್ಟಾರು ಕೃಷ್ಣಾನಂದ ಕಿಣಿ, ಕೃತಿಕಾ ಕಿಣಿ ಅವರು ಮಕ್ಕಳಿಗೆ ಉಚಿತವಾಗಿ ನೀಡಿದ ಕೊಡೆಯನ್ನೂ ಇದೇ ವೇಳೆ ವಿತರಿಸಲಾಯಿತು.
ಲಯನ್ಸ್ ಕ್ಲಬ್ ಮಣಿಪಾಲದ ಅಧ್ಯಕ್ಷ ಡಾ. ನಿಶಾಂತ್ ಭಟ್, ಕೃಷ್ಣ ಮುಖ್ಯೋಪಾಧ್ಯಾಯ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಾರಾಯಣ ಭಂಡಾರಿ, ಶಾಲಾ ಟ್ರಸ್ಟಿ ಮಟ್ಟಾರು ರಮೇಶ್ ಕಿಣಿ, ಮುಖ್ಯೋಧ್ಯಾಪಕಿ ಸುಲೋಚನಾ ಉಪಸ್ಥಿತರಿದ್ದರು. ಶಾಲಾ ಟ್ರಸ್ಟಿಗಳು, ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಕಿ ಶಾಲಿನಿ ಕಾರ್ಯಕ್ರಮ ನಿರೂಪಿಸಿದರು.
"
ಶತಮಾನೋತ್ಸವದ ಹೊಸ್ತಿಲಿನಲ್ಲಿ ಇರುವ ಶಾಲೆಯು ಈ ಮೊದಲಿಗಿಂತ ತುಂಬ ಉತ್ತಮವಾಗಿ ಬದಲಾಗಿದೆ. ವಿದ್ಯಾರ್ಥಿಗಳು ಚೆನ್ನಾಗಿ ಕಲಿತು ಹೆಚ್ಚು ಅಂಕಗಳಿಸಿ ಶಾಲೆಯ ಹಾಗೂ ಹೆತ್ತವರ ಕೀರ್ತಿ ಹೆಚ್ಚಿಸಬೇಕು. ರಾಷ್ಟ್ರದ ಅಭ್ಯುದಯಕ್ಕೆ ಕೈಜೋಡಿಸಬೇಕು.
— ಡಾ. ನಿಶಾಂತ್ ಭಟ್. ಲಯನ್ಸ್ ಕ್ಲಬ್ ಮಣಿಪಾಲದ ಅಧ್ಯಕ್ಷ.