ಕಲ್ಯಾ ಗ್ರಾಮದ ಅಶೋಕನಗರದಲ್ಲಿ ಚಂದ್ರಶೇಖರ್ ಆಚಾರ್ಯ ಅವರ ಮನೆಗೆ ಸಿಡಿಲು ಬಡಿದು ಹಾನಿಯಾಗಿರುವುದು. 
ಉಡುಪಿ

ಕಾರ್ಕಳ, ಹೆಬ್ರಿಯಲ್ಲಿ ಸಿಡಿಲಾಘಾತ!

ಇಂದಿರಾ ಎನ್ ಕೆ
ಹರಿಪ್ರಸಾದ್ ನಂದಳಿಕೆ ಕಾರ್ಕಳ
ಪ್ರತಿ ವರ್ಷ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಜನರಲ್ಲಿ ಮಿಂಚು ಮತ್ತು ಗುಡುಗು ಆತಂಕ ಸೃಷ್ಟಿಸುತ್ತಿದೆ. ಇತ್ತೀಚೆಗಿನ ವರ್ಷಗಳಲ್ಲಿ ಈ ಭಾಗದಲ್ಲಿ ಸಿಡಿಲಿನ ಆರ್ಭಟ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಕಾರ್ಕಳ ಮತ್ತು ಹೆಬ್ರಿ ತಾಲೂಕು ಪಶ್ಚಿಮಟ್ಟದ ತಪ್ಪಲು ಪ್ರದೇಶದಲ್ಲಿರುವುದರಿಂದ ಈ ಭಾಗದಲ್ಲಿ ನಿರಂತರವಾಗಿ ಸಿಡಿಲು ಮತ್ತು ಮಿಂಚು ಹೆಚ್ಚಿರುತ್ತದೆ. ವಿಶೇಷವಾಗಿ ಮೇ, ಜೂನ್‌ನಲ್ಲಿ ಸಂಜೆ ವೇಳೆ ಗಾಳಿ ಮಳೆಯೊಂದಿಗೆ ಸಿಡಿಲಿನ ಅಬ್ಬರ ಹೆಚ್ಚಾಗುತ್ತಿದೆ.
ಈ ಭಾಗವು ಪ್ರಮುಖ ಕೃಷಿ ಪ್ರದೇಶವಾಗಿರುವುದರಿಂದ ರೈತರು ಮತ್ತು ಕೂಲಿ ಕಾರ್ಮಿಕರು ಗದ್ದೆ, ತೋಟ, ಅಡಿಕೆ ತೋಟಗಳಲ್ಲಿ ಕೆಲಸ ವಾಡುತ್ತಿರುವ ಸಂದರ್ಭ ಸಿಡಿಲು ಬಡಿಯುವ ಟನೆಗಳು ಸಂಭವಿಸುತ್ತಿವೆ. ಮುಂಗಾರು ಪೂರ್ವದಲ್ಲೇ ತಾಲೂಕಿನಲ್ಲಿ ಸಿಡಿಲಿನ ಆಘಾತದ ಹಲವು ಪ್ರಕರಣಗಳು ದಾಖಲಾಗಿವೆ. ಕಳೆದ ಐದು ವರ್ಷಗಳಲ್ಲಿ 20ಕ್ಕೂ ಅಧಿಕ ಜಾನುವಾರುಗಳು ಸಿಡಿಲಿಗೆ ಬಲಿಯಾಗಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ, 200ಕ್ಕೂ ಅಧಿಕ ಮನೆಗಳು ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿಯಾಗಿದೆ.
ಮುನ್ಸೂಚನೆ ನೀಡುವ ದಾಮಿನಿ ಆ್ಯಪ್
ಕೇಂದ್ರ ಹವಾವಾನ ಇಲಾಖೆ ಹಾಗೂ ಪುಣೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರಾಲಜಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ‘ದಾಮಿನಿ’ ಮೊಬೈಲ್ ಆ್ಯಪ್ ಸಿಡಿಲಿನಿಂದ ಸಂಭವಿಸುವ ಅಪಾಯ ತಪ್ಪಿಸಲು ಸಹಕಾರಿಯಾಗಿದೆ. ಈ ಆ್ಯಪ್ ಮೊಬೈಲ್‌ನ ಜಿಪಿಎಸ್ ವ್ಯವಸ್ಥೆ ಬಳಸಿಕೊಳ್ಳುತ್ತದೆ. ನಾವು ಇರುವ ಸ್ಥಳದ ಸುತ್ತಮುತ್ತ 20ರಿಂದ 40 ಕಿ.ಮೀ ವ್ಯಾಪ್ತಿಯಲ್ಲಿ ಸಿಡಿಲು ಸಂಭವಿಸುವ ಸಾಧ್ಯತೆ ಇದ್ದರೆ ಇದು ಮುಂಚಿತವಾಗಿ ಎಚ್ಚರಿಕೆ ನೀಡುತ್ತದೆ.

ಧೂಳು ಹಿಡಿದಿವೆ ಯೋಜನೆ ಕಡತಗಳು!

ಜಿಲ್ಲೆಯಲ್ಲಿ ಸಿಡಿಲಿನ ಅಪಾಯ ಹೆಚ್ಚುತ್ತಿರುವ ಹಿನ್ನೆಲೆ ಕೆಲ ವರ್ಷಗಳ ಹಿಂದೆ ಮಿಂಚು ಪ್ರತಿಬಂಧಕ ವ್ಯವಸ್ಥೆ ಅಳವಡಿಸಲು ಸರ್ಕಾರಮಟ್ಟದಲ್ಲಿ ಯೋಜನೆ ರೂಪಿಸಲಾಗಿತ್ತು. ಜಿಲ್ಲಾಧಿಕಾರಿಮಟ್ಟದಲ್ಲಿ ಕಾರ್ಕಳ ತಾಲೂಕಿನ ಬೈಲೂರು ಸೇರಿದಂತೆ ಇನ್ನೂ ಎರಡು ಪ್ರದೇಶಗಳಲ್ಲಿ ಮಿಂಚು ಪ್ರತಿಬಂಧಕ ವ್ಯವಸ್ಥೆ ಅಳವಡಿಸುವ ಕುರಿತು ಚರ್ಚೆಯೂ ನಡೆದಿತ್ತು. ಆದರೆ ಈ ಯೋಜನೆ ಮುಂದುವರಿಯದೆ, ಇದೀಗ ಕಡತಗಳಲ್ಲೇ ಧೂಳು ಹಿಡಿಯುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಹವಾವಾನ ಇಲಾಖೆ ನೀಡುವ ಮುನ್ಸೂಚನೆಗಳು ಗ್ರಾಮೀಣ ಭಾಗದ ಪ್ರತಿಯೊಬ್ಬ ರೈತನಿಗೂ ಸಕಾಲದಲ್ಲಿ ತಲುಪುವಂತಾಗಲು ದಾಮಿನಿ ಮೊಬೈಲ್ ಆ್ಯಪ್ ಬಗ್ಗೆ ಗ್ರಾಮೀಣ ಮಟ್ಟದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ.

— ಜಗದೀಶ್ ಶೆಟ್ಟಿ ಪ್ರಗತಿಪರ ಕೃಷಿಕ

ಸರ್ಕಾರದ ವಾರ್ಗಸೂಚಿಯಂತೆ ಸಿಡಿಲಿನಿಂದ ಹಾನಿಯಾದ ಮನೆಗಳಿಗೆ ಪರಿಹಾರ ಕಾರ್ಯವನ್ನು ವಿಳಂಬವಿಲ್ಲದೆ ನೀಡಲಾಗುತ್ತದೆ. ಪ್ರತಿ ವರ್ಷ ಕಾರ್ಕಳ ಭಾಗದಲ್ಲಿ ಸಿಡಿಲು, ಗುಡುಗು ಪ್ರವಾಣ ಹೆಚ್ಚಿರುತ್ತದೆ. ಈ ಬಗ್ಗೆ ಸ್ಥಳೀಯಾಡಳಿತ ಮಟ್ಟದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ.

— ಪ್ರದೀಪ್ ಆರ್. ಕಾರ್ಕಳ ತಹಸೀಲ್ದಾರ್