ವಾರಾಹಿ ಉಳಿಸಿ ಅಭಿಯಾನದಡಿ ನಡೆದ ಪಾದಯಾತ್ರೆ ಸವಾರೋಪವನ್ನು ಕರ್ನಾಟಕ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುವಾರ್ ಸೊರಕೆ ಉದ್ಘಾಟಿಸಿದರು. ಪ್ರಮುಖರಾದ ಕೆ.ಗೋಪಾಲ ಪೂಜಾರಿ, ವಿಕಾಸ ಹೆಗ್ಡೆ, ಸಂಪಿಗೇಡಿ ಸಂಜೀವ ಶೆಟ್ಟಿ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಸಿದ್ದಾಪುರ
ವಾರಾಹಿ ಯೋಜನೆಗೆ 1980ರಲ್ಲಿ ಅರಣ್ಯ ಕ್ಲಿಯರೆನ್ಸ್ ತಂದು ಯೋಜನೆ ರೂಪಿಸಲು ಕಾರಣಕರ್ತರಾಗಿದ್ದು ನಾನು ಮತ್ತು ಗೋಪಾಲ ಪೂಜಾರಿ. ಜನರ ಹಾಗೂ ರೈತರ ಆಶಯದಂತೆ ವಾರಾಹಿ ಮೂಲ ನದಿಯಲ್ಲಿ ಸಿದ್ದಾಪುರ ಏತ ನೀರಾವರಿ ಯೋಜನೆ ಜಾರಿಯಾಗುವಂತೆ ಸರ್ಕಾರ ಮಾಡುತ್ತದೆ ಎಂದು ಕರ್ನಾಟಕ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಹೇಳಿದರು.
ವಂಡ್ಸೆ ಮತ್ತು ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ವಿವಿಧ ಸಂ ಸಂಸ್ಥೆಗಳ ಸಹಯೋಗದೊಂದಿಗೆ ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ನೇತೃತ್ವದಲ್ಲಿ ವಾರಾಹಿ ಉಳಿಸಿ ಅಭಿಯಾನ ಅಡಿಯಲ್ಲಿ ಸಿದ್ದಾಪುರ ಪೇಟೆಯ ಹತ್ತಿರ ವಾರಾಹಿ ನೀರಿಗಾಗಿ 2ನೇ ದಿನದ ಪಾದಯಾತ್ರೆ ಸಮಾರೋಪವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.
ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ ಹೆಗ್ಡೆ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಂಪಿಗೇಡಿ ಸಂಜೀವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪಶ್ಚಿಮವಾಹಿನಿ ಅಚ್ಚುಕಟ್ಟು ಪ್ರದೇಶದ ಅಧ್ಯಕ್ಷ ಚಿಟ್ಟೆ ರಾಜಗೋಪಾಲ ಹೆಗ್ಡೆ, ಮುಖಂಡರಾದ ಪ್ರಸನ್ನ ಕುಮಾರ ಶೆಟ್ಟಿ ಕೆರಾಡಿ, ರರಾಮ ಶೆಟ್ಟಿ ಬೀಜೂರು, ಅಶೋಕ ಪೂಜಾರಿ ಬೀಜಾಡಿ, ಅನಂತ ಮೋವಾಡಿ, ವಂಡಬಳ್ಳಿ ಜಯರಾಮ ಶೆಟ್ಟಿ, ಶೇಖರ ಪೂಜಾರಿ, ಜಯರಾಮ ನಾಯ್ಕ ಯಡಮೊಗೆ, ಸಂತೋಷ್ ಕುಮಾರ ಶೆಟ್ಟಿ ಹಕ್ಲಾಡಿ, ಭರತ್ ದೇವಾಡಿಗ, ಮೋಹನ ಪೂಜಾರಿ, ಸದಾನಂದ ಭಂಡಾರಿ ಸಿದ್ದಾಪುರ, ಅಕ್ಷಯ ಶೆಟ್ಟಿ, ಅನೀಫ್ ಪೂಜಾರಿ ಮೊದಲಾದವರಿದ್ದರು.
ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಸ್ವಾಗತಿಸಿದರು. ಬಲಾಡಿ ಸಂತೋಷ್ ಕುಮಾರ್ ಶೆಟ್ಟಿ ಪ್ರಸ್ತಾವಿಸಿದರು. ಎಚ್.ಮನೋಹರ ಶೆಟ್ಟಿ ಮೂಡುಬಗೆ ನಿರೂಪಿಸಿದರು. ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ವಂದಿಸಿದರು.
5 ಸಾವಿರಕ್ಕೂ ಅಧಿಕ ಮಂದಿ ಭಾಗಿ
ವಾರಾಹಿ ಉಳಿಸಿ ಅಭಿಯಾನದ ಸವಾವೇಶದಲ್ಲಿ 5 ಸಾವಿರಕ್ಕೂ ಹೆಚ್ಚು ರೈತರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು. ಉಡುಪಿ ಜಿಲ್ಲಾಧಿಕಾರಿ ಡಾ.ಸ್ವರೂಪಾ ರೈತರ ಮನವಿ ಸ್ವೀಕರಿಸಿದರು. ಶಂಕರನಾರಾಯಣ ಪೇಟೆಯಲ್ಲಿ ಎರಡನೇ ದಿನದ ಪಾದಯಾತ್ರೆಯನ್ನು ಬೈಂದೂರು ವಾಜಿ ಶಾಸಕ ಕೆ.ಗೋಪಾಲ ಪೂಜಾರಿ ಉದ್ಘಾಟಿಸಿದರು. ಶಂಕರನಾರಾಯಣದಿಂದ ಕಾರೇಬೈಲು ಮೂಲಕ ಸಿದ್ದಾಪುರಕ್ಕೆ ಮಧ್ಯಾಹ್ನ ಆಗಮಿಸಿ ಸಂಪನ್ನಗೊಂಡಿತು.
ಸಿದ್ದಾಪುರ ಮತ್ತು ಸೌಕೂರು ಏತ ನೀರಾವರಿ ಯೋಜನೆಗಳ ವ್ಯಾಪ್ತಿಯ ನೀರಾವರಿ ವಂಚಿತ ಪ್ರದೇಶಗಳಿಗೆ ನೀರಿನ ಸೌಲಭ್ಯ ಕಲ್ಪಿಸುವ ಹಾಗೂ ಸಿದ್ದಾಪುರ ಏತ ನೀರಾವರಿ ಯೋಜನೆ ಜಾಕ್‌ವೆಲ್ ಪಾಯಿಂಟ್ ಅವೈಜ್ಞಾನಿಕವಾಗಿದೆ. ತಾಂತ್ರಿಕ ಆಧಾರದ ಮೇಲೆ ಡ್ಯಾಮ್‌ನ ಕೆಳಭಾಗದಲ್ಲಿ ಸ್ಥಾಪಿಸಬೇಕು.