ಶಕ್ತಿನಗರ ನಾಲ್ಯಪದವು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೌಶಲ ಕ್ಲಬ್ ಉದ್ಘಾಟನೆ ನೆರವೇರಿತು. ಮೂಡುಬಿದಿರೆ ಎಸ್‌ಎನ್‌ಎಸ್ ಪಾಲಿಟೆಕ್ನಿಕ್ ಉಪನ್ಯಾಸಕ ವಿಶ್ವನಾಥ ಕುಕ್ಯಾನ್, ಪ್ರಾಂಶುಪಾಲ ಜಯಾನಂದ ಎನ್.ಸುವರ್ಣ, ಉಪನ್ಯಾಸಕ ಕೇಶವ ಪೂಜಾರಿ, ಉಪನ್ಯಾಸಕಿ ಸರಳಾದೇವಿ ಪಿ. ಮತ್ತಿತರರು ಇದ್ದರು.
ಗುರುಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯಜ್ಞಾನ ಮಾತ್ರ ಸಾಕಾಗುವುದಿಲ್ಲ. ಉತ್ತಮ ಸಂವಹನ ಕೌಶಲ, ನಾಯಕತ್ವ ಗುಣ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ, ತಂಡದೊಂದಿಗೆ ಕಾರ್ಯನಿರ್ವಹಿಸುವ ಮನೋಭಾವ, ಆತ್ಮವಿಶ್ವಾಸದಂತಹ ಜೀವನ ಕೌಶಲ ಪ್ರತಿಯೊಬ್ಬ ವಿದ್ಯಾರ್ಥಿಯ ಯಶಸ್ಸಿಗೆ ಅತ್ಯಗತ್ಯ ಎಂದು ಮೂಡುಬಿದಿರೆ ಎಸ್‌ಎನ್‌ಎಸ್ ಪಾಲಿಟೆಕ್ನಿಕ್ ಉಪನ್ಯಾಸಕ ವಿಶ್ವನಾಥ ಕುಕ್ಯಾನ್ ಹೇಳಿದರು.
ಶಕ್ತಿನಗರ ನಾಲ್ಯಪದವು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳೂರಿನ ಸ್ವಸ್ತಿಕ್ ನ್ಯಾಷನಲ್ ಬಿಸಿನೆಸ್ ಸ್ಕೂಲ್ ವತಿಯಿಂದ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳಿಗೆ ಉತ್ತೇಜನ ನೀಡಿ ವ್ಯಕ್ತಿತ್ವ ರೂಪಿಸುವ ಕೌಶಲ ಕ್ಲಬ್ ಉದ್ಘಾಟನಾ ಸಮಾರಂಭ ನಡೆಯಿತು.
ಪ್ರಾಂಶುಪಾಲ ಜಯಾನಂದ ಎನ್.ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಸ್ವಸ್ತಿಕ್ ಬಿಸ್ನೆಸ್ ನ್ಯಾಶನಲ್ ಸ್ಕೂಲ್ ಅಧ್ಯಕ್ಷ ಡಾ.ರಾಘವೇಂದ್ರ ಹೊಳ್ಳ, ಸಂಗೀತಾ ಎಂ., ಕಾಲೇಜು ವಿದ್ಯಾರ್ಥಿ ನಾಯಕ ಶರತ್, ಉಪನಾಯಕ ಅಭಿಷೇಕ್ ಉಪಸ್ಥಿತರಿದ್ದರು. ಕ್ಲಬ್ ಸಂಯೋಜಕ ಉಪನ್ಯಾಸಕ ಕೇಶವ ಪೂಜಾರಿ ಸ್ವಾಗತಿಸಿದರು. ವಿದ್ಯಾರ್ಥಿನಿ ಸಿಂಚನಾ ನಿರೂಪಿಸಿದರು. ಉಪನ್ಯಾಸಕಿ ಸರಳಾದೇವಿ ಪಿ. ವಂದಿಸಿದರು.