ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ವಾಸುದೇವ ಯಡಿಯಾಳ್ ಉದ್ಘಾಟಿಸಿದರು. ಪ್ರಮುಖರಾದ ಕೆ.ಶಾಂತಾರಾಮ ಪ್ರಭು, ಯು.ಎಸ್.ಶೆಣೈ, ವೆಂಕಟೇಶ್ ಶೆಣೈ ಮೊದಲಾದವರಿದ್ದರು.
ಕುಂದಾಪುರ: ಕಾಲೇಜಿನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ತಮ ತರಬೇತಿ ಶಿಬಿರವಾಗಿರುತ್ತವೆ. ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭ್ರಮಿಸುವುದರೊಂದಿಗೆ ಜೀವನದ ಪಾಠ ಕಲಿಯುತ್ತೇವೆ ಎಂದು ಕುಂದಾಪುರ ಶ್ರೀ ಕುಂದೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವ ಯಡಿಯಾಳ್ ಹೇಳಿದರು.
ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವಾರ್ಷಿಕೋತ್ಸವ ಪ್ರಯುಕ್ತ ಶುಕ್ರವಾರ ಪ್ರತಿಭಾ ಪ್ರದರ್ಶನ ಉದ್ಘಾಟಿಸಿ ವಾತನಾಡಿದರು.
ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿ ಉಪಾಧ್ಯಕ್ಷ ಕೆ.ಶಾಂತಾರಾಮ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಕಾರ್ಯದರ್ಶಿ ಯು.ಎಸ್.ಶೆಣೈ, ಪ್ರಾಕ್ತನ ವಿದ್ಯಾರ್ಥಿ 1973ನೇ ಬ್ಯಾಚ್‌ನ ವೆಂಕಟೇಶ್ ಶೆಣೈ ಮತ್ತು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ ಉಪಸ್ಥಿತರಿದ್ದರು. ತೀರ್ಪುಗಾರರಾದ ಡಾ.ಗಣೇಶ್ ಗಂಗೊಳ್ಳಿ, ಅನುರಾಧಾ ಮಯ್ಯ ಮತ್ತು ರವ್ಯಾ ರಮಣಿ ರವಿ ಸಹಕರಿಸಿದರು.
ಆಂತರಿಕ ಗುಣಮಟ್ಟ ಮತ್ತು ಭರವಸೆ ಕೋಶದ ಸಂಯೋಜಕ ಪ್ರೊ.ಸತ್ಯನಾರಾಯಣ ಸ್ವಾಗತಿಸಿದರು. ಉಪನ್ಯಾಸಕರಾದ ಹರ್ಷಿತಾ ತೀರ್ಪುಗಾರರನ್ನು ಮತ್ತು ರಾಮಚಂದ್ರ ಆಚಾರಿ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಅಕ್ಷತಾ ನಿರೂಪಿಸಿದರು. ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥೆ ಪ್ರೊ.ನಿಶಾ ಎಂ. ವಂದಿಸಿದರು.
ಅಂತರ್ ತರಗತಿ ಪ್ರತಿಭಾ ಪ್ರದರ್ಶನದ ಪ್ರಥಮ ಸ್ಥಾನವನ್ನು ಕಲಾ ವಿಭಾಗ, ದ್ವಿತೀಯ ಸ್ಥಾನವನ್ನು ದ್ವಿತೀಯ ಮತ್ತು ತೃತೀಯ ಬಿಎಸ್‌ಸಿ, ತೃತೀಯ ಸ್ಥಾನವನ್ನು ತೃತೀಯ ಬಿ.ಕಾಂ. ವಿದ್ಯಾರ್ಥಿಗಳ ತಂಡ ಪಡೆಯಿತು.