ದೀಪ ಪ್ರದಾನ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ನಂದನ್ ಮಲ್ಯ ಮಾತನಾಡಿದರು. ರಶ್ಮಿ ಜಿ.ಎಸ್., ಸವಿತಾ ಶಿವಸುಬ್ರಮಣ್ಯ ಭಟ್, ಶೈಲಶ್ರೀ ರೈ.ಎಸ್.ಮತ್ತಿತರರಿದ್ದರು.
ಕಡಬ: ಸಣ್ಣ ವಯಸ್ಸಿನಲ್ಲಿ ದೊಡ್ಡ ಕನಸನ್ನು ಕಾಣಬೇಕು, ನಮ್ಮ ಸಾಮರ್ಥ್ಯ ಅರಿತುಕೊಂಡು ಜೀವಿಸಬೇಕು. ನಾವು ಯಾವಾಗ ಸಮಾಜಕ್ಕೆ, ದೇಶಕ್ಕೆ ನಿಸ್ವಾರ್ಥ ಸೇವೆ ನೀಡುತ್ತೇವೆಯೋ ಆಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಭಾರತೀಯ ಜನತಾ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ನಂದನ್ ಮಲ್ಯ ಹೇಳಿದರು.
ಕಡಬ ಹನುಮಾನ್ ನಗರದ ಸರಸ್ವತಿ ವಿದ್ಯಾಲಯ ಪ್ರೌಢಶಾಲೆಯ ಪ್ರಸಕ್ತ ಶೈಕ್ಷಣಿಕ ವಷರ್ದ ಹತ್ತನೇ ತರಗತಿ ವಿದ್ಯಾರ್ಥಿಗಳ ದೀಪ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆನರಾ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕಿ ರಶ್ಮಿ ಜಿ.ಎಸ್. ಉದ್ಘಾಟಿಸಿದರು. ಸಂಸ್ಥೆ ಸಂಚಾಲಕಿ ಸವಿತಾ ಶಿವಸುಬ್ರಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕಿ ಶೈಲಶ್ರೀ ರೈ.ಎಸ್., ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಮಾಧವ, ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ವಸಂತ ಕೆ., ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಸಹ ಕಾರ್ಯನಿರ್ವಹಣಾಧಿಕಾರಿ ವೆಂಕಟರಮಣ ರಾವ್ ಮಂಕುಡೆ ಉಪಸ್ಥಿತರಿದ್ದರು. ಶಿಕ್ಷಕಿ ಸೌಮ್ಯಾ ಕೆ.ಎ. ಅತಿಥಿಗಳನ್ನು ಪರಿಚಯಿಸಿದರು. ಸಾನ್ವಿ ಸ್ವಾಗತಿಸಿ. ದಿಗಂತ್ ವಂದಿಸಿದರು, ಚೇತನ್ ಗೌಡ ನಿರೂಪಿಸಿದರು.