ಶಿರಸಿ ತಾಲೂಕಿನ ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಚಾತುರ್ಮಾಸ್ಯದ ಅಂಗವಾಗಿ ಭಂಡಾರಿ ಸಮಾಜದ ಭಕ್ತರನ್ನುದ್ದೇಶಿಸಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿದರು. 
ಉಡುಪಿ

Dharma ಆಧ್ಯಾತ್ಮಿಕ ಚಿಂತನೆ, ಧರ್ಮಾಚರಣೆಯಿಂದ ಜೀವನ ಸಾರ್ಥಕ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಆಶೀರ್ವಚನ
  • ಭಂಡಾರಿ ಸಮಾಜದಿಂದ ಸೇವೆ ಸ್ವೀಕಾರ

ಶಿರಸಿ:

ಮನುಷ್ಯನ ಜೀವನವು ಕೇವಲ ಲೌಕಿಕ ಸುಖ, ಭೋಗಗಳಿಗೆ ಸೀಮಿತವಾಗಿರದೆ, ಆಧ್ಯಾತ್ಮಿಕ ಚಿಂತನೆ, ಧರ್ಮ ಮತ್ತು ಸದಾಚಾರದ ಹಾದಿಯಲ್ಲಿ ಸಾಗಿದಾಗ ಮಾತ್ರ ಸಾರ್ಥಕ್ಯ ಪಡೆಯುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಚಾತುರ್ಮಾಸ್ಯ ಅಂಗವಾಗಿ ಮಂಗಳವಾರ ಭಂಡಾರಿ ಸಮಾಜದ ವತಿಯಿಂದ ಸೇವೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು. ಮಾನವನಿಗೆ ದೊರೆತಿರುವ ಆಯುಷ್ಯ ಸೀಮಿತವಾಗಿದ್ದು, ಹರಿದು ಹೋದ ನದಿಯ ನೀರು ಹಾಗೂ ಕಳೆದ ಸಮಯ ಎಂದಿಗೂ ಮರಳಿ ಬರುವುದಿಲ್ಲ. ಆದ್ದರಿಂದ ಅಮೂಲ್ಯವಾದ ಮಾನವ ಜನ್ಮವನ್ನು ವ್ಯರ್ಥ ಮಾಡದೆ ಸತ್ಕಾರ್ಯ, ಧರ್ಮಾಚರಣೆ ಹಾಗೂ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಜೀವನದಲ್ಲಿ ಎದುರಾಗುವ ಸುಖ&ದುಃಖ, ರೋಗ&ರುಜಿನ, ಜನನ&ಮರಣ ಸೇರಿದಂತೆ ಎಲ್ಲವೂ ಪ್ರಾರಬ್ಧ ಕರ್ಮದ ಫಲಗಳಾಗಿವೆ. ಸಂಕಷ್ಟಗಳು ಎದುರಾದಾಗ ದೇವರನ್ನು ದೂಷಿಸುವ ಬದಲು ತಾಳ್ಮೆಯಿಂದ ಸ್ವೀಕರಿಸಿ, ಭಕ್ತಿಯಿಂದ ಬದುಕಿದಾಗ ಮನಸಿಗೆ ಶಾಂತಿ ಹಾಗೂ ಬದುಕಿಗೆ ಧೈರ್ಯ ದೊರೆಯುತ್ತದೆ ಎಂದರು.
ಪ್ರತಿದಿನ ಬೆಳಗ್ಗೆ ಮತ್ತು ವಿಶೇಷವಾಗಿ ಸಂಜೆಯ ವೇಳೆಯಲ್ಲಿ ಮನೆಯಲ್ಲಿ ಭಕ್ತಿ, ದೇವರ ಧ್ಯಾನ, ಭಜನೆ ಹಾಗೂ ಶ್ಲೋಕ ಪಠಣದ ವಾತಾವರಣ ನಿಮಿರ್ಸಬೇಕು. ಇದರಿಂದ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಧಾಮಿರ್ಕ ಮೌಲ್ಯಗಳು ಹಾಗೂ ಭಾರತೀಯ ಸಂಸತಿಯ ಅರಿವು ಬೆಳೆಯುತ್ತದೆ ಎಂದು ಸಲಹೆ ನೀಡಿದರು.
ಸಂಗೀತಕ್ಕೆ ದಿವ್ಯ ಶಕ್ತಿಯಿದ್ದು, ಅದು ಮನುಷ್ಯರು ಮಾತ್ರವಲ್ಲದೆ, ಪ್ರಾಣಿಪಗಳನ್ನೂ ತನ್ನತ್ತ ಆಕಷಿರ್ಸುವ ಸಾಮರ್ಥ್ಯ ಹೊಂದಿದೆ. ದೇವಾಲಯ ಹಾಗೂ ಮಠಗಳಲ್ಲಿ ನಡೆಯುವ ಪಂಚವಾದ್ಯ ಸೇವೆ ದೇವರಿಗೆ ಸಲ್ಲಿಸುವ ಅತ್ಯುನ್ನತ ಸೇವೆಯಾಗಿದ್ದು, ಇಂತಹ ಪರಂಪರೆಯ ಸೇವೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.
ಮಠ&ಮಾನ್ಯಗಳು ಮತ್ತು ಧಾಮಿರ್ಕ ಕಾರ್ಯಕ್ರಮಗಳು ಸಮಾಜವನ್ನು ಸಂಟಿಸುವ ಕೇಂದ್ರಗಳಾಗಿದ್ದು, ಪರಸ್ಪರ ಪ್ರೀತಿ, ಸಹೋದರತೆ ಮತ್ತು ಸಹಕಾರದ ಮನೋಭಾವ ಬೆಳೆಸುತ್ತವೆ ಎಂದರು.
ಭಂಡಾರಿ ಸಮಾಜದ ವತಿಯಿಂದ ಉಭಯ ಶ್ರೀಗಳಾದ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತಿ ಮಹಾಸ್ವಾಮೀಜಿಗಳಿಗೆ ಚಾತುರ್ಮಾಸ್ಯ ಸೇವೆ ಸಲ್ಲಿಸಲಾಯಿತು.