ತಾಳಿಪಾಡಿ ಮಂಜಲ್ ಪಾದೆಯಲ್ಲಿ ಆಯೋಜಿಸಲಾದ ಕೆಸರುಗದ್ದೆ ಕ್ರೀಡೊತ್ಸವಕ್ಕೆ ಚಾಲನೆ ನೀಡಲಾಯಿತು. ಅರ್ಪಿತಾ ಪ್ರಶಾಂತ್ ಶೆಟ್ಟಿ, ತಾಳಿಪಾಡಿ ಜವನೆರೆ ಕಲದ ಅಧ್ಯಕ್ಷ ಉದಯ ಪೂಜಾರಿ, ಗ್ರಾಮಸ್ಥರಾದ ದೇಜಪ್ಪ ಶೆಟ್ಟಿ, ವಿಠಲ ಪೂಜಾರಿ ಬೆದ್ರಾಡಿ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಯುವಜನತೆಗೆ ಕೆಸರಿನ ಬಗ್ಗೆಗಿನ ಮಹತ್ವ ತಿಳಿಯಬೇಕಾದರೆ ಇಂತಹ ಕ್ರೀಡೆ ನಡೆಯಬೇಕು. ಈ ಮೂಲಕ ಅರಿವಾಗುತ್ತದೆ ಎಂದು ಅರ್ಪಿತಾ ಪ್ರಶಾಂತ್ ಶೆಟ್ಟಿ ಹೇಳಿದರು.
ತಾಳಿಪಾಡಿ ಜವನೆರ ಕಲ, ಪೊಂಜೋವುಲ್ನ ಕಲ ಮತ್ತು ಜೈ ತುಳುನಾಡ್ ಸಂಘಟನೆ ವತಿಯಿಂದ ತಾಳಿಪಾಡಿ ಮಂಜಲ್‌ಪಾದೆಯಲ್ಲಿ ಆಯೋಜಿಸಲಾದ ಕೆಸರು ಗದ್ದೆ ಕ್ರೀಡೊತ್ಸವದಲ್ಲಿ ಭಾಗವಹಿಸಿ ಮಾತನಾಡಿ, ತುಳು ಲಿಪಿಯನ್ನು ಕಲಿಯುವ ಉತ್ಸಾಹ ನಮಗಿಲ್ಲ. ಆದರೆ ಕೇರಳದವರು ತುಳು ಲಿಪಿ ಕಲಿಯುವ ಉತ್ಸಾಹದಲ್ಲಿದ್ದಾರೆ, ತುಳು ಭಾಷೆ, ತುಳುವಿನ ಕೆಲ ಶಬ್ದಗಳು ಅಳಿವಿನಂಚಿನಲ್ಲಿದ್ದು ಅದನ್ನು ಉಳಿಸುವ ಕೆಲಸ ಯುವಜನತೆ ಮಾಡಬೇಕು ಎಂದರು.
ಕೆಸರಿನಲ್ಲಿ ಪಥ ಸಂಚಲನ, ಕಂಬಳ ಕೋಣಗಳನ್ನು ಗದ್ದೆಗಿಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉದ್ಯಮಿ ರಾಮಚಂದ್ರ ಶೆಟ್ಟಿ ತಾಳಿಪಾಡಿಗುತ್ತು, ಸಂಸ್ಥೆ ಮಾರ್ಗದರ್ಶಕ ಕುಶಲ ಪೂಜಾರಿ ತಾಳಿಪಾಡಿ, ಸುನೀಲ್ ಭಟ್, ನಾರಾಯಣ ಅಂಚನ್ ತಾಳಿಪಾಡಿ, ಪೊಂಪೈ ಕಾಲೇಜು ಪ್ರಾಂಶುಪಾಲ ಪುರುಷೋತ್ತಮ ಕೆ.ವಿ., ಸುಕುಮಾರ ಶೆಟ್ಟಿ ತಾಳಿಪಾಡಿಗುತ್ತು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ದಿವಾಕರ ಕರ್ಕೇರ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರಣೀಕ್ ಕಿನ್ನಿಗೋಳಿ, ಪ್ರಕಾಶ್ ಆಚಾರ್ಯ, ಜೈ ತುಳುನಾಡು ಸಂಘಟನೆಯ ಅಧ್ಯಕ್ಷೆ ರಾಜಶ್ರೀ ಚಂದ್ರಶೇಖರ್, ಜೈ ತುಳುನಾಡು ಸಂಘಟನೆಯ ಕೇಂದ್ರ ಸಮಿತಿ ಅಧ್ಯಕ್ಷ ಅಶ್ವತ್ ತುಲುವೆ, ತಾಳಿಪಾಡಿ ಜವನೆರೆ ಕಲ ಅಧ್ಯಕ್ಷ ಉದಯ ಪೂಜಾರಿ, ಗ್ರಾಮಸ್ಥರಾದ ದೇಜಪ್ಪ ಶೆಟ್ಟಿ, ವಿಠಲ ಪೂಜಾರಿ ಬೆದ್ರಾಡಿ, ದಯಾನಂದ ಕೋಟ್ಯಾನ್ ಅಶೋಕ್ ಪೂಜಾರಿ ಕಲ್ಲರ ಬೆನ್ನಿ, ತಾರಿಪಾಡಿ ಪೊಂಜೋವುಲ್ನ ಕಲ ಅಧ್ಯಕ್ಷೆ ಮೀರಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಜೈತುಳುನಾಡು ಸಂಘಟನೆಯ ಮಾಜಿ ಅಧ್ಯಕ್ಷೆ ಉದಯ ಪೂಂಜ ತಾಳಿಪಾಡಿಗುತ್ತು ಸ್ವಾಗತಿಸಿದರು. ಮಹೇಶ್ ಕುಲಾಲ್ ಬೇಲಾಡಿ ನಿರೂಪಿಸಿದರು.