ಕುಂದಾಪುರದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಮುಖರಾದ ಡಾ.ಸುಧಾಕರ ಶೆಟ್ಟಿ, ರಾಮಕೃಷ್ಣ ಕಾಮತ್, ಕೆ. ರಾಧಾಕೃಷ್ಣ ಶೆಣೈ ಇತರರಿದ್ದರು 
ಉಡುಪಿ

ಪಾಲಕರ ಕನಸು ನನಸಾಗಿಸಲು ಇರಲಿ ಗಮನ

ಇಂದಿರಾ ಎನ್ ಕೆ
ಕುಂದಾಪುರ: ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅವಧಿಯಲ್ಲಿ ವೈಯಕ್ತಿಕ ಆಸೆಗಳಿಗೆ ಕಡಿವಾಣ ಹಾಕಿ ಪಾಲಕರ ಕನಸು ನನಸಾಗಿಸುವತ್ತ ಗಮನ ಕೊಡಬೇಕು ಎಂದು ಅಜೆಕಾರ್ ಪದ್ಮಗೋಪಾಲ್ ಎಜುಕೇಶನಲ್ ಟ್ರಸ್ಟ್ ಹಾಗೂ ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಕಿವಿಮಾತು ಹೇಳಿದರು. 
 ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು. 
 ಶ್ರೀ ವೆಂಕಟರಮಣ ದೇವ್ ಎಜುಕೇಶನಲ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ಕೆ.ರಾಮಕೃಷ್ಣ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಕಾರ್ಯದರ್ಶಿ ಕೆ.ರಾಧಾಕೃಷ್ಣ ಶೆಣೈ ಮಾತನಾಡಿದರು. ಖಜಾಂಚಿ ಕೆ.ಲಕ್ಷ್ಮೀನಾರಾಯಣ ಶೆಣೈ, ಉಪ ಪ್ರಾಂಶುಪಾಲ ಸುಜೇಯ್ ಕೋಟೆಗಾರ್, ಪ್ರೌಢಶಾಲೆ ಮುಖ್ಯಶಿಕ್ಷಕ ಕೃಷ್ಣ ಅಡಿಗ, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ರೇಷ್ಮಾ ಡಿಸೋಜ, ನರ್ಸರಿ  ವಿಭಾಗದ ಮುಖ್ಯಸ್ಥೆ ಪ್ರಮೀಳಾ ಡಿಸೋಜ ಉಪಸ್ಥಿತರಿದ್ದರು. 
ವಿದ್ಯಾರ್ಥಿನಿ ಫಾತಿಮಾ ತೈಭಾ ಸ್ವಾಗತಿಸಿದರು. ಪ್ರಾಂಶುಪಾಲ ಸಂದೀಪ್ ಗಾಣಿಗ ವಾರ್ಷಿಕ ವರದಿ ವಾಚಿಸಿದರು. ಬ್ರೆಂಡನ್ ಅತಿಥಿಗಳನ್ನು ಪರಿಚಯಿಸಿದರು. ಅದಿತಿ ವಂದಿಸಿದರು. ಕೆ.ಶ್ರೀನಿತಾ ಎಸ್.ಕಾಮತ್ ಕಾರ್ಯಕ್ರಮ ನಿರೂಪಿಸಿದರು.