ಕಡಬ ತಾಲೂಕು 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ನಡೆಯಿತು. ಡಾ.ಧನಂಜಯ ಕುಂಬ್ಳೆ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮೊದಲಾದವರಿದ್ದರು.  
ಉಡುಪಿ

ಪುಸ್ತಕ ಓದುವ ಸಂಸ್ಕೃತಿ ಬೆಳೆಯಲಿ

ಕಡಬ: ಕನ್ನಡ ಉಳಿಸಲು ಹಲವು ಸಂಘ-ಸಂಸ್ಥೆಗಳಿದ್ದರೂ ಕನ್ನಡದ ಸ್ಥಿತಿ ಶೋಚನೀಯವಾಗಿದೆ. ಸರ್ಕಾರಿ ಶಾಲಾ-ಕಾಲೇಜುಗಳ ಬಾಗಿಲು ಬಂದ್ ಆಗುತ್ತಿದೆ. ಇಂತಹ ಸ್ಥಿತಿಯ ನಡುವೆ ಪುಸ್ತಕ ಓದುವ ಸಂಸ್ಕೃತಿ ಮಕ್ಕಳಲ್ಲಿ ಬೆಳೆಸುವುದೊಂದೇ ದಾರಿ ಎಂದು ಮಂಗಳೂರು ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಧನಂಜಯ ಕುಂಬ್ಳೆ ಹೇಳಿದರು.

ರಾಮಕುಂಜ ವಿಶ್ವೇಶತೀರ್ಥ ಸೌಧದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕದ ತಾಲೂಕು 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಸಮ್ಮೇಳನಾಧ್ಯಕ್ಷೆ ಶಕುಂತಳಾ ಶೆಟ್ಟಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ ಅಧ್ಯಕ್ಷತೆ ವಹಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ನಾರಾಯಣ ಭಟ್ ಟಿ, ಅಧ್ಯಕ್ಷ ಕೇಶವ ಅಮೈ, ಸಂಚಾಲಕ ಬಾಲಕೃಷ್ಣ ಯಡಪಡಿತ್ತಾಯ ಕಿಜಾನ, ಪ್ರಧಾನ ಕಾರ್ಯದರ್ಶಿ ಗಾಯತ್ರಿ ಯು.ಎನ್., ಕಾರ್ಯದರ್ಶಿ ಪ್ರಕಾಶ್ ಗೌಡ, ಜತೆ ಕಾರ್ಯದರ್ಶಿಗಳಾದ ಚೆನ್ನಕೇಶವ ರೈ ಗುತ್ತುಪಾಲು, ಕರುಣಾಕರ ಉರ್ಕ, ಕಸಾಪ ಕಡಬ ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ, ಗೌರವ ಕೋಶಾಧ್ಯಕ್ಷ ಕೆ.ಬಾಲಚಂದ್ರ ಮುಚ್ಚಿಂತಾಯ, ಗೌರವ ಕಾರ್ಯದರ್ಶಿ ಪತ್ರಕರ್ತ ನಾಗರಾಜ್ ಎನ್.ಕೆ.ಕಡಬ, ಸಂಘಟನಾ ಕಾರ್ಯದರ್ಶಿ ಕಿಶೋರ್‌ಕುಮಾರ್ ಬಿ., ಸದಸ್ಯರಾದ ಗ್ರೇಸಿ ಪಿಂಟೋ, ಯಶವಂತ ರೈ ಸುಬ್ರಹ್ಮಣ್ಯ, ರಮೇಶ್ ಕೋಟೆ, ಪುಷ್ಪಾವತಿ ರಾಮಕುಂಜ, ಆರ್.ವೆಂಕಟ್ರಮಣ, ಸಿದ್ದೀಕ್ ನೀರಾಜೆ, ಎ.ಎನ್.ಕೊಳಂಬೆ, ಪ್ರೇಮ ಬಿ., ನಿಕಟಪೂರ್ವ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಗಣೇಶ್ ಕಟ್ಟಪುಣಿ, ಹರೀಶ್ ಆಚಾರ್ಯ, ಚೇತನ್ ಆನೆಗುಂಡಿ ಅವರನ್ನು ಗೌರವಿಸಲಾಯಿತು. ಸಮ್ಮೇಳನಾಧ್ಯಕ್ಷೆ ಶಕುಂತಳಾ ಟಿ.ಶೆಟ್ಟಿ, ಕಡಬ ತಾಲೂಕು ಅಧ್ಯಕ್ಷ ಕೆ.ಸೇಸಪ್ಪ ರೈ ಅವರನ್ನು ಸನ್ಮಾನಿಸಲಾಯಿತು.
ನಿವೃತ್ತ ಉಪನ್ಯಾಸಕ ಗಣರಾಜ್ ಕುಂಬ್ಳೆ, ಕಸಾಪ ಕಡಬ ತಾಲೂಕು ಘಟಕದ ನಿಕಟಪೂರ್ವಾಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಕೇಶವ ಅಮೈ ಕಲಾಯಿಗುತ್ತು, ಕಾರ್ಯಾಧ್ಯಕ್ಷ ಟಿ.ನಾರಾಯಣ ಭಟ್, ಕರುಣಾಕರ ಗೋಗಟೆ, ಶರತ್‌ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕ ಚಕ್ರಪಾಣಿ, ಕಡಬ ಪಟ್ಟಣ ಪಂಚಾಯಿತಿ ಸದಸ್ಯೆ ಅಕ್ಷತಾ, ಕೆ.ಮಾಧವ ಪೂಜಾರಿ ಕೈಯಪ್ಪೆ, ಶೇಷಪತಿ ರೈ ಗುತ್ತುಪಾಲು ಉಪಸ್ಥಿತರಿದ್ದರು.
ಗುರುರಾಜ್ ರೈ ಕೇವಳ ಸ್ವಾಗತಿಸಿ, ಕೆ.ಸೇಸಪ್ಪ ರೈ ವಂದಿಸಿದರು. ರಮೇಶ್ ರೈ ರಾಮಜಾಲು, ಚೇತನ್ ಆನೆಗುಂಡಿ ನಿರೂಪಿಸಿದರು. ಶಿಕ್ಷಕ ಸಂಜನ್ ನಿರ್ವಹಣೆ ಮಾಡಿದರು.