ಇರುವೈಲು ಜಾತ್ರೆ ಪ್ರಯುಕ್ತ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ ನಡೆಯಿತು. ಕ್ಷೇತ್ರದ ಪ್ರಧಾನ ಅರ್ಚಕ ಐ.ರಾಘವೇಂದ್ರ ಆಸ್ರಣ್ಣ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಸುಜಾತ ಜೆ.ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಧನಂಜಯ ಮೊದಲಾದವರಿದ್ದರು. 
ಉಡುಪಿ

ಧರ್ಮದ ಉಳಿವು, ಅಭಿವೃದ್ಧಿಗಾಗಿ ಇರಲಿ ಸಂಕಲ್ಪ

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ನಾವು ಧರ್ಮವನ್ನು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ ಎಂಬುದು ಸನಾತನ ಧರ್ಮದ ಮೂಲತತ್ವ. ನಮ್ಮ ಧರ್ಮದ ಉಳಿವು ಮತ್ತು ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಇರುವೈಲು ಕ್ಷೇತ್ರದ ಪ್ರಧಾನ ಅರ್ಚಕ ಐ.ರಾಘವೇಂದ್ರ ಆಸ್ರಣ್ಣ ಹೇಳಿದರು.
ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ಬುಧವಾರ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಸುಜಾತ ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಧನಂಜಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪೂವಪ್ಪ ಸಾಲ್ಯಾನ್, ಪದ್ಮನಾಭ ಪೂಜಾರಿ ಕನಡ್ರಕೋಡಿ, ಶುಭಕರ ಕಾಜವ, ಮೋಹನ್ ನಾಯಕ್ ಪಂಜ, ಶಿವಾನಂದ ನಾಯ್ಕ, ಪ್ರದೀಪ್ ಶೆಟ್ಟಿ, ದೀಪಾ ದಿನೇಶ್ ಬಟಾರ, ಪ್ರಮುಖರಾದ ರುಕ್ಕಯ್ಯ ಪೂಜಾರಿ ಅಳಿಯೂರು, ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ರಾಜೇಶ್ ಪೂಜಾರಿ ಕಾಳೂರು, ಪ್ರವೀಣ್ ಪೂಜಾರಿ, ದಿನೇಶ್ ಶೆಟ್ಟಿ, ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕುಮಾರ್ ಶೆಟ್ಟಿ, ಮುತ್ತಪ್ಪ ಎಂ.ಸಾಲ್ಯಾನ್, ಮಾರಪ್ಪ ಪೂಜಾರಿ, ರತ್ನಾಕರ ಶೆಟ್ಟಿ ಕಟ್ಟಣಿಗೆ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮೂಡುಬಿದಿರೆ ತಾಲೂಕು, ಪುತ್ತಿಗೆ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಇರುವೈಲು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು.