ಬಂಟ್ವಾಳದ ತಿರಂಗ ವಾಹನ ಜಾಥಾಕ್ಕೆ ಆರೆಸ್ಸೆಸ್ ಪ್ರಮುಖ್ ಡಾ.ಕಲ್ಲಡ್ಕ ಪ್ರಭಾಕರ ಭಟ್ ಚಾಲನೆ ನೀಡಿದರು. ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಆರ್.ಚೆನ್ನಪ್ಪ ಕೋಟ್ಯಾನ್, ರಾಕೇಶ್ ರೈ ಕಡೆಂಜಿ ಮೊದಲಾದವರು ಉಪಸ್ಥಿತರಿದ್ದರು. 
ಉಡುಪಿ

ಯುವಕರಲ್ಲಿರಲಿ ಸೇವಾ ಮನೋಭಾವ

ಬಂಟ್ವಾಳ: ಜೆನ್ ಜೀ ಪೀಳಿಗೆ ದೇಶದ ಭವಿಷ್ಯವಾಗಿದ್ದು, ಶಾರ್ಟ್‌ಕಟ್ ಯೋಚನೆ ಬಿಟ್ಟು ದೇಶಕ್ಕಾಗಿ ಬದುಕುವ ಮನೋಭಾವ ಬೆಳೆಸಿಕೊಳ್ಳಬೇಕು. ದೇಶದ ಹಿತಕ್ಕೆ ಹೋರಾಟ, ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು ಆದರೆ ಯಾವ ಕಾರಣಕ್ಕೂ ಅಡ್ಡದಾರಿ ಹಿಡಿಯಬಾರದು ಎಂದು ಆರೆಸ್ಸೆಸ್ ಪ್ರಮುಖ್ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ತಿರಂಗಾ ವಾಹನ ಜಾಥಾ ಸಮಿತಿ ಬಂಟ್ವಾಳ ವತಿಯಿಂದ ಗುರುವಾರ ಆಯೋಜಿಸಲಾದ ತಿರಂಗಾ ವಾಹನ ಜಾಥಾಕ್ಕೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮೈದಾನದಲ್ಲಿ ಚಾಲನೆ ನೀಡಿ ಮಾತನಾಡಿದರು.

ಕಲ್ಲಡ್ಕದಿಂದ ಬಿ.ಸಿ.ರೋಡ್ ಮೂಲಕ ಪೊಳಲಿ ದ್ವಾರದೆಡೆ ಸಾಗಿ ಸ್ಪರ್ಶ ಕಲಾ ಮಂದಿರವರೆಗೆ ಜಾಥಾ ನಡೆಯಿತು.