ಬಂಗಾಡಿ ಕೊಲ್ಲಿ ಕಂಬಳದ ಮಹಾಪೋಷಕ, ಶಾಸಕ ಹರೀಶ್ ಪೂಂಜ ಅವರನ್ನು ಗೌರವಿಸಲಾಯಿತು. ಸಂಸದ ಕ್ಯಾ.ಬ್ರಿಜೇಶ್ ಚೌಟ, ವಾಜಿ ಸಚಿವ ಕೆ.ಗಂಗಾಧರ ಗೌಡ, ರಂಜನ್ ಜಿ.ಗೌಡ, ಅಳದಂಗಡಿ ಶಿವಪ್ರಸಾದ್ ಅಜಿಲ, ಡಾ.ಪ್ರದೀಪ್ ನಾವೂರು ಇತರರು ಇದ್ದರು.
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಕಂಬಳ ನಮ್ಮ ಸಂಸ್ಕೃತಿ ಹಾಗೂ ಜೀವನದ ಅವಿಭಾಜ್ಯ ಅಂಗವಾಗಿದ್ದು, ಕಂಬಳ ಸಮಿತಿಗಳು ರೂಪಿಸಿರುವ ಕಾನೂನುಗಳನ್ನು ಪಾಲಿಸಬೇಕು. ಇಂದಿನ ಕಾಲಟ್ಟಕ್ಕೆ ಅನುಗುಣವಾಗಿ ಯುವಜನತೆಗೆ ಕಂಬಳದತ್ತ ಆಸಕ್ತಿ ಮೂಡಿಸುವಂತೆ ವ್ಯವಸ್ಥಿತವಾಗಿ ಕಂಬಳ ಆಯೋಜಿಸಬೇಕು ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಬಂಗಾಡಿ ಕೊಲ್ಲಿಯ ನೇತ್ರಾವತಿ ನದಿ ಕಿನಾರೆಯಲ್ಲಿ ಸೂರ್ಯಚಂದ್ರ ಜೋಡು ಕೆರೆ ಕಂಬಳ ಸಮಿತಿ, ರಾಜ್ಯ ಕಂಬಳ ಅಸೋಸಿಯೇಶನ್, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಭಾಗಿತ್ವದಲ್ಲಿ ನಡೆದ 28ನೇ ವರ್ಷದ ಕೊಲ್ಲಿ ಕಂಬಳದ ಸವಾರೋಪದಲ್ಲಿ ಮಾನತಾಡಿದರು.
ಬಂಗಾಡಿ ಕೊಲ್ಲಿ ಕಂಬಳ ಸಮಿತಿ ಅಧ್ಯಕ್ಷ ರಂಜನ್ ಜಿ.ಗೌಡ, ಅಳದಂಗಡಿ ಶಿವಪ್ರಸಾದ್ ಅಜಿಲ, ಡಾ.ಪ್ರದೀಪ್ ನಾವೂರು, ಉದ್ಯಮಿಗಳಾದ ಎಸಿ ಕುರಿಯನ್, ಸತ್ತಾರ್ ಸಾಹೇಬ್, ಬೆಳ್ತಂಗಡಿ ಕೃಷಿ ಪತ್ತಿನ ಸಹಕಾರಿ ಸಂದ ಅಧ್ಯಕ್ಷ ಹರೀಶ್ ಸಾಲ್ಯಾನ್, ವೇಣೂರು ಕಂಬಳ ಸಮಿತಿ ಅಧ್ಯಕ್ಷ ನಿತೇಶ್ ಎಚ್.ಕುಕ್ಕೇಡಿ, ಪ್ರಮುಖರಾದ ಶೇಖರ್ ಕುಕ್ಕೇಡಿ, ಕಿರಣ್ ಕುರುಡ್ಯ, ಜೈಸನ್ ಜಾಯೆಲ್ ಡಿಸೋಜ, ಶ್ಯಾಮ್ ಕಾಮತ್, ಶೈನಿ ಕಾಮತ್, ಕುವಾರ್ ಹೆಗ್ಡೆ, ಕಿಶೋರ್ ವಳಂಬ್ರ, ಸ್ವಾಗತ ಸಮಿತಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪೂಜಾರಿ ಕೊಕ್ಕರ್ಣೆ, ಗಣ್ಯರು, ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವ್ಯವಸ್ಥಿತ ಕಂಬಳಕ್ಕೆ ಹೆಸರುವಾಸಿಯಾಗಿರುವುದು ರಂಜನ್ ಜಿ.ಗೌಡರ ಕೊಲ್ಲಿಯ ಕಂಬಳ. ಈ ವರ್ಷ ಉತ್ತಮ ವ್ಯವಸ್ಥೆ ವಾಡಲಾಗಿದೆ. ಕೊಲ್ಲಿ ಕಂಬಳದ ಮೂಲಕ ಈ ಭಾಗದ ಹೆಸರು ಮತ್ತಷ್ಟು ಪಸರಿಸಿದೆ. ಸಮಿತಿಯ ಬೇಡಿಕೆಯಾಗಿರುವ ಸಭಾಭವನ ಹಾಗೂ ತಡೆಗೋಡೆ ನಿರ್ವಾಣಕ್ಕೆ ಪ್ರಾವಾಣಿಕ ಪ್ರಯತ್ನ ವಾಡುತ್ತೇನೆ.
ಹಿಂದಿನ ಕಾಲದಲ್ಲಿ ಗ್ಯಾಸ್ ಲೈಟ್ ಬೆಳಕಿನಲ್ಲಿ ಕಂಬಳ ನಡೆಯುತ್ತಿತ್ತು, ಈಗ ಹೊನಲು ಬೆಳಕಿನ ಕಂಬಳಗಳು ನಡೆಯುತ್ತಿದೆ. ಒಗ್ಗಟ್ಟಾಗಿ ಸೇರಿದರೆ ವಾತ್ರ ಸುಸೂತ್ರವಾಗಿ ಕಂಬಳ ಆಯೋಜಿಸಬಹುದು. ನಾನು ಕ್ರೀಡಾ ಮಂತ್ರಿಯಾಗಿದ್ದಾಗ ಕಂಬಳ ಓಟಗಾರರಿಗೆ ಮಾಸಾಶನ, ಕಂಬಳಕ್ಕೆ ಕನಿಷ್ಠ 5 ಲಕ್ಷ ರೂ. ಅನುದಾನ ನೀಡಲಾಗಿತ್ತು.