ಬೆಳ್ತಂಗಡಿ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿನ ಆಚರಿಸಲಾಯಿತು. ಎಂ.ವಿ.ಭಟ್, ಪ್ರಮೀಳಾ ಪೂಜಾರಿ, ಹೇಮಲತಾ ಎಂ.ಆರ್., ನೀತಾ ಕೆ.ಎಸ್., ಜಯಲಕ್ಷ್ಮೀ ಉಪಸ್ಥಿತರಿದ್ದರು.  
ಉಡುಪಿ

ವಿದ್ಯಾರ್ಥಿಗಳಲ್ಲಿರಲಿ ಸೇವಾ ಮನೋಭಾವ

ಬೆಳ್ತಂಗಡಿ: ವಿದ್ಯಾರ್ಥಿಗಳು ದೇಶಭಕ್ತಿ, ಶಿಸ್ತು ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಯುವಕರು ಭಾರತೀಯ ಸೇನೆಗೆ ಸೇರಿ ರಾಷ್ಟ್ರಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಭಾರತೀಯ ಸೇನೆಯ ನಿವೃತ್ತ ಮೇಜರ್ ಜನರಲ್ ಎಂ.ವಿ.ಭಟ್ ಹೇಳಿದರು.
ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಶ್ರೀ ಮಂಜುನಾಥ ದಳದ ವತಿಯಿಂದ ಕಾರ್ಗಿಲ್ ವಿಜಯ ದಿನ ಆಚರಣೆ ಉದ್ಘಾಟಿಸಿ ಮಾತನಾಡಿದರು.
ಮುಖ್ಯಶಿಕ್ಷಕಿ ಹೇಮಲತಾ ಎಂ.ಆರ್. ಅಧ್ಯಕ್ಷತೆ ವಹಿಸಿದ್ದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಳಗಳಿಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಸ್ಕಾರ್ಫ್ ಧರಿಸುವ ಮೂಲಕ ಸ್ವಾಗತಿಸಲಾಯಿತು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಯೋಜಕ ಶಿಕ್ಷಕಿ ಪ್ರಮೀಳಾ ಪೂಜಾರಿ, ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರಾದ ನೀತಾ ಕೆ.ಎಸ್., ಜಯಲಕ್ಷ್ಮೀ, ಪ್ರಮೀಳಾ ಎನ್., ಗೀತಾ ಪಿ., ರಮ್ಯಾ ಬಿ.ಎಸ್., ಸೌಮ್ಯಾ, ಅಮಿತ್, ಕಾರುಣ್ಯಾ, ಸಮತಾ, ಪುಷ್ಪಲತಾ, ಮೋಹಿನಿ, ಜಯರಾಮ್, ಮಂಜುನಾಥ್ ಉಪಸ್ಥಿತರಿದ್ದರು.
ಗೈಡ್ಸ್ ವಿದ್ಯಾರ್ಥಿಗಳಾದ ದಿಶಾ ಡಿ.ಎ. ಅತಿಥಿಗಳನ್ನು ಪರಿಚಯಿಸಿದರು. ಧಾತ್ರಿ ವಂದಿಸಿದರು. ಅನಘಾ ಸ್ವಾಗತಿಸಿದರು. ಆದ್ಯಾ ಶಣೈ ನಿರೂಪಿಸಿದರು.