ಬೈಂದೂರು ವಲಯ ಕೃಷಿ ಅಧಿಕಾರಿಗಳ ಕಚೇರಿಯಲ್ಲಿ ಶನಿವಾರ ಶಾಸಕ ಗುರುರಾಜ ಶಾಸಕ ಗಂಟಿಹೊಳೆ ಕೃಷಿಕರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು.
ಬೈಂದೂರು: ಸರ್ಕಾರದ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕಾರ್ಯ ಅಧಿಕಾರಿಗಳಿಂದ ಆಗಬೇಕಾಗಿದೆ. ಕೃಷಿಕರಿಗೆ ಇಸ್ರೇಲ್ ಮಾದರಿಯಲ್ಲಿ ವಿವಿಧ ಸವಲತ್ತುಗಳನ್ನು ವಿತರಿಸಬೇಕೆಂಬ ಕೂಗು ಕೇಳಿ ಬರುತ್ತಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ರೂಪಿಸುತ್ತಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಇಲ್ಲಿನ ವಲಯ ಕೃಷಿ ಅಧಿಕಾರಿಗಳ ಕಚೇರಿಯಲ್ಲಿ ಶನಿವಾರ, ಕೇಂದ್ರ ಸರ್ಕಾರ ಕೃಷಿಕರಿಗೆ ಸಬ್ಸಿಡಿ ದರದಲ್ಲಿ ಕೊಡಮಾಡಿದ ಕೃಷಿಯಂತ್ರ ಹಾಗೂ ನೀರಾವರಿ ಘಟಕಗಳಿಗೆ ವಿವಿಧ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಸಮಾಜದ ಎಲ್ಲ ವರ್ಗದ ಏಳಿಗೆಗಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಆದರೆ ಮಾಹಿತಿಯ ಕೊರತೆಯಿಂದ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗಿದ್ದು, ಈ ಬಗ್ಗೆ ಕೇಂದ್ರದ ಎಲ್ಲ ಯೋಜನೆಗಳ ಮಾಹಿತಿಯನ್ನೊಳಗೊಂಡ ಕೈಪಿಡಿ ಹೊರತರುವ ಚಿಂತನೆಯಿದೆ ಎಂದರು.
ದಿಶಾ ಸಮಿತಿ ಸದಸ್ಯರಾದ ಪ್ರಿಯದರ್ಶಿನಿ ಬೆಸ್ಕೂರ್, ರಮೇಶ ಪೂಜಾರಿ, ರವಿ ಶೆಟ್ಟಿ ಶಿರೂರು ಉಪಸ್ಥಿತರಿದ್ದರು. ತಾಲೂಕಿನ 24 ಮಂದಿ ತುಂತುರು ನೀರಾವರಿ ಘಟಕ ಫಲಾನುಭವಿಗಳಿಗೆ 5.65 ಲಕ್ಷ ರೂ. ಮೌಲ್ಯದ ಪೈಪ್, ಜೆಟ್ ಪಂಪ್‌ಸೆಟ್‌ಗಳನ್ನು ಹಾಗೂ 13 ಮಂದಿ ಫಲಾನುಭವಿಗಳಿಗೆ 2.87ಲಕ್ಷ ರೂ. ಮೌಲ್ಯದ ಸ್ಪ್ರೇಯರ್, ಪವರ್ ವಿಡರ್, ಮೋಟೋಕಾರ್ಟ್ ಮೊದಲಾದ ಯತ್ರೋಪಕರಣಗಳನ್ನು ವಿತರಿಸಲಾಯಿತು. ಬೈಂದೂರು ವಲಯ ಸಹಾಯಕ ಕೃಷಿ ಅಧಿಕಾರಿ ಗಾಯತ್ರಿದೇವಿ ಸ್ವಾಗತಿಸಿದರು. ಶಾಂತಾರಾಮ ನಿರೂಪಿಸಿದರು.
2024-25ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಹವಾಮಾನ ಆಧಾರಿತ ಬೆಳೆ ವಿಮೆ ಹಣವು ರೈತರ ಖಾತೆಗಳಿಗೆ ಕಡಿಮೆ ಜಮಾ ಆಗಿದ್ದು, ಕೆಲವು ರೈತರಿಗೆ ಪ್ರೀಮಿಯಂ ಮೊತ್ತ ಕೂಡ ಬಂದಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗಿದೆ. ಹವಾಮಾನ, ತೋಟಗಾರಿಕೆ, ಕಂದಾಯ ಇಲಾಖೆ ಹಾಗೂ ಬೆಳೆ ವಿಮೆ ಕಂಪನಿಯ ಅಧಿಕಾರಿಗಳೊಂದಿಗೆ ಚರ್ಸಿಸಿದ್ದು, ತಪ್ಪಾಗಿರುವುದನ್ನು ಸರಿಪಡಿಸಿ ಒಂದು ವಾರದೊಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿ ಬೆಳೆ ವಿಮೆಯನ್ನು ಮರು ಜಮೆ ಮಾಡಲು ಮನವಿ ಮಾಡಲಾಗುವುದು.