ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ ಮಾಡಿದ ಕೋಟ ವಿವೇಕ ಆಂಗ್ಲವಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪ್ರಮುಖರಾದ ಪಿ.ಭಾಸ್ಕರ ಹಂದೆ, ಎಂ.ರಾಮದೇವ ಐತಾಳ್, ಪಿ.ಮಂಜುನಾಥ ಉಪಾಧ್ಯ, ವಸಂತ ಶೆಟ್ಟಿ, ಜಗದೀಶ ನಾವಡ ಇದ್ದರು. 
ಉಡುಪಿ

ಮಾದರಿಯಾಗಲಿ ಸಾಧಕರ ಬದುಕು

ಕೋಟ: ಪ್ರತಿಯೊಬ್ಬ ವಿದ್ಯಾರ್ಥಿ ಅವಿರತ ಪ್ರಯತ್ನ, ಪರಿಶ್ರಮ, ಅಧ್ಯಯನಶೀಲತೆ ಮೈಗೂಡಿಸಿಕೊಂಡರೆ ಸಾಧಕನಾಗಬಹುದು. ಶೈಕ್ಷಣಿಕ ಸಂತ ಕೆ.ಎಲ್.ಕಾರಂತರ ಬದುಕು ನಮಗೆ ಆದರ್ಶವಾಗಲಿ ಎಂದು ಪೂರ್ಣಪ್ರಜ್ಞ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ.ಅನಂತ ಪದ್ಮನಾಭ ಭಟ್ ಹೇಳಿದರು.
ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಉತ್ಕೃಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಇತ್ತೀಚೆಗೆ ಸನ್ಮಾನಿಸಿ ಮಾತನಾಡಿದರು.
ಕೋಟ ವಿದ್ಯಾಸಂ ಅಧ್ಯಕ್ಷ ಪಿ.ಭಾಸ್ಕರ ಹಂದೆ ಅಧ್ಯಕ್ಷತೆ ವಹಿಸಿದ್ದರು. ಕೋಟ ವಿದ್ಯಾಸಂ ಕಾರ್ಯದರ್ಶಿ ಎಂ.ರಾಮದೇವ ಐತಾಳ್ ಶುಭಾಶಂಸನೆಗೈದರು. ಆಡಳಿತ ಮಂಡಳಿ ಸದಸ್ಯ ಶ್ರೀಪತಿ ಹೇರ್ಳೆ, ವಿವೇಕ ಹಳೇ ವಿದ್ಯಾರ್ಥಿ ಸಂ ಅಧ್ಯಕ್ಷ ಚೇಂಪಿ ರವಾನಂದ ಭಟ್ ಮಾತನಾಡಿದರು.

ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಚೈತನ್ಯಾಶ್ರೀ ಉಡುಪ, ನಾಲ್ಕನೇ ಸ್ಥಾನ ಪಡೆದ ಸಂಕಲ್ಪ ಕುವಾರ್ ಹಾಗೂ ಹತ್ತನೇ ಸ್ಥಾನ ಪಡೆದ ಅಭಯ ಸೋಮಯಾಜಿ, ಸಮೃದ್ಧಿ ಪೈ, ಸೃಜನಿ ಅವರನ್ನು ಪುರಸ್ಕರಿಸಲಾಯಿತು. ಜತೆ ಕಾರ್ಯದರ್ಶಿ ಪಿ.ಮಂಜುನಾಥ ಉಪಾಧ್ಯ, ಆಡಳಿತ ಮಂಡಳಿ ಸದಸ್ಯ ವಸಂತ ಶೆಟ್ಟಿ, ಪ್ರಾಂಶುಪಾಲ ಜಗದೀಶ ನಾವಡ, ಮುಖ್ಯಶಿಕ್ಷಕ ವೆಂಕಟೇಶ ಉಡುಪ, ಪ್ರೇವಾನಂದ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಪ್ರೀತಿರೇಖಾ ಸ್ವಾಗತಿಸಿದರು. ಶಿಕ್ಷಕಿ ಅನಿತಾ ಡಿಸೋಜ ವಂದಿಸಿದರು. ಶಿಕ್ಷಕಿ ಸುಜಾತಾ ನಿರೂಪಿಸಿದರು.