ಭಾರತ್ ಮಾತಾ ಪೂಜನಾ ಕಾರ್ಯಕ್ರಮದಲ್ಲಿ ಸಮಿತ್ ರಾಜ್ ಮಾತನಾಡಿದರು. ದಯಾನಂದ ಪೈ, ಸಂತೋಷ್ ಕುಮಾರ್ ಜೈನ್ ಬನ್ನಡ್ಕ ಮತ್ತಿತರರಿದ್ದರು.
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮನೆಯೇ ರಾಷ್ಟ್ರೀಯತೆಯ ಮೊದಲ ಪಾಠಶಾಲೆಯಾಗಬೇಕು. ಮಕ್ಕಳಿಗೆ ಸೂಕ್ತ ತಿಳಿವಳಿಕೆ ನೀಡುವಲ್ಲಿ ಪಾಲಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಸಮಿತ್ ರಾಜ್ ಹೇಳಿದರು.
ಅಚ್ಚರಕಟ್ಟೆಯ ಸುಮುಖ ಭಜನಾ ಮಂಡಳಿ, ಮೂಡುಬಿದಿರೆ ತಾಲೂಕು ಹಿಂದೂ ಜಾಗರಣ ವೇದಿಕೆಯ ಸಹಭಾಗಿತ್ವದಲ್ಲಿ ದಯಾನಂದ ಪೈ, ಉಷಾ ಡಿ.ಪೈ ಕಲಾ ವೇದಿಕೆಯಲ್ಲಿ ನಡೆದ ಭಾರತ್ ಮಾತಾ ಪೂಜನಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಸುಮುಖ ಭಜನಾ ಮಂಡಳಿ ಗೌರವಾಧ್ಯಕ್ಷ ದಯಾನಂದ ಪೈ ಅಧ್ಯಕ್ಷತೆ ವಹಿಸಿದ್ದರು. ದಯಾನಂದ ಪೈ, ಸಂತೋಷ್ ಕುಮಾರ್ ಜೈನ್ ಬನ್ನಡ್ಕ, ಉಮಾವತಿ ಬಿ.ಬಂಗೇರ, ಸುಂದರ ಪೂಜಾರಿ, ಸೌಮ್ಯಾ, ಸಂದೀಪ್ ಹೆಗ್ಡೆ, ಉದಯ, ಪ್ರವೀಣ್ ಸಾಲ್ಯಾನ್, ಲಕ್ಷ್ಮಣ ನಾಯ್ಕ ಉಪಸ್ಥಿತರಿದ್ದರು. ಭಜನಾ ಮಂಡಳಿ ವಿದ್ಯಾರ್ಥಿಗಳು, ಪಾಲಕರು, ಭಕ್ತರು ಭಾಗವಹಿಸಿದ್ದರು. ಹರಿಶ್ಚಂದ್ರ ಕೆ.ಪಿ ಸ್ವಾಗತಿಸಿದರು. ಸ್ಮಿತಾ ವಂದಿಸಿದರು.
ಜನ್ಮ ನೀಡಿದ ತಾಯಿ ಮತ್ತು ಜನ್ಮಭೂಮಿ ಎರಡೂ ಶ್ರೇಷ್ಠ ಎಂದು ಭಗವಾನ್ ಶ್ರೀರಾಮ ಹೇಳಿದ್ದಾರೆ. ವೀರ ಸಾವರ್ಕರ್, ಸುಭಾಶ್‌ಚಂದ್ರ ಬೋಸ್, ಬಾಲ ಗಂಗಾಧರ ತಿಲಕ್ ಮತ್ತಿತರರ ತ್ಯಾಗ, ಬಲಿದಾನದಿಂದ ಲಭಿಸಿದ ಸ್ವಾತಂತ್ರೃವನ್ನು ಉಳಿಸಿಕೊಳ್ಳಲು ಬಾಲ್ಯದಿಂದಲೇ ರಾಷ್ಟ್ರೀಯತೆ, ದೇಶಪ್ರೇಮವನ್ನು ಮಕ್ಕಳಲ್ಲಿ ಬೆಳೆಸಬೇಕಾಗಿದೆ.
— ದಯಾನಂದ ಪೈ, ಸುಮುಖ ಭಜನಾ ಮಂಡಳಿ ಗೌರವಾಧ್ಯಕ್ಷ