ಅದಮಾರು ಪೂರ್ಣಪ್ರಜ್ಞ ಕನ್ನಡ ಮಾದ್ಯಮ ಶಾಲೆಯಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮವನ್ನು ಶ್ರೀಕಾಂತ ರಾವ್ ಉದ್ಘಾಟಿಸಿದರು. ಸಾನಿಧ್ಯ, ಧನ್ವಿತ್ ಇದ್ದರು. 
ಉಡುಪಿ

ಸವಾಲು ಸ್ವೀಕರಿಸಲು ವಿದ್ಯಾರ್ಥಿಗಳು ಸನ್ನದ್ಧರಾಗಲಿ

ಇಂದಿರಾ ಎನ್ ಕೆ
ಪಡುಬಿದ್ರಿ: ವಿದ್ಯಾರ್ಥಿಗಳು ಸವಾಲುಗಳನ್ನು ಸ್ವೀಕರಿಸಲು ಸನ್ನದ್ಧರಾಗಬೇಕು ಹಾಗೂ ಆ ಬಗ್ಗೆ ಕಾರ್ಯಪ್ರವೃತ್ತರಾಗಿ ಶ್ರೇಷ್ಠ ಶಿಷ್ಯರೆನಿಸಿಕೊಳ್ಳಬೇಕು ಎಂದು ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ ಶಿಕ್ಷಕಿ ನವ್ಯ ಬಿ.ಎಸ್. ಹೇಳಿದರು.
ಅದಮಾರು ಪೂರ್ಣಪ್ರಜ್ಞ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕ ಶ್ರೀಕಾಂತ್ ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಸಂಸತ್‌ನ ಪ್ರತಿಪಕ್ಷದ ನಾಯಕಿ ಸಾನಿಧ್ಯ, ಗುರುಪೂರ್ಣಿಮೆಯ ಮಹತ್ವ ವಿವರಿಸಿದರು. ಎಸ್.ವಿಘ್ನೇಶ್ ಗುರುಪೂರ್ಣಿಮೆ ಪ್ರತಿಜ್ಞೆ ಬೋಧಿಸಿದರು. ವಿದ್ಯಾರ್ಥಿಗಳು ಗುರುಗಳಿಗೆ ಗೌರವ ವಂದನೆ ಸಲ್ಲಿಸಿದರು. ವಿದ್ಯಾರ್ಥಿ ನಾಯಕ ಧನ್ವಿತ್ ಸ್ವಾಗತಿಸಿದರು. ಸಿಂಚನ ವಂದಿಸಿದರು.