ಉಡುಪಿಯ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ ಆಚರಿಸಲಾಯಿತು. ಶ್ರೀನಿವಾಸ್​ ರಾವ್​ ಕೆ., ಇಂದಿರಾ ಬಿ., ಕಿರಣ್​ ಕಾಮತ್​, ಮೀನಾಕ್ಷಿ ನಾಯಕ್​, ಸುಚಿತ್ರಾ ಇದ್ದರು. 
ಉಡುಪಿ

ವಿದ್ಯಾರ್ಥಿಗಳೂ ತೋರಲಿ ಪರಿಸರ ಪ್ರೇಮ

ಪ್ರಶಾಂತ ಜಿ. ಭಾಗ್ವತ

ಶ್ರೀನಿವಾಸ್​ ರಾವ್​ ಕೆ. ಆಶಯ
ಅಂತಾರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚರಣೆ

ಉಡುಪಿ: ಗಾಳಿ, ನೀರು, ಮಣ್ಣಿನ ಮಾಲಿನ್ಯದಿಂದಾಗಿ ಇಂದು ಎಲ್ಲಡೆ ಸಮಸ್ಯೆ ಅನುಭವಿಸುವಂತಾಗಿದೆ. ವಿವಿಧ ನಗರಗಳಲ್ಲಿ ಜನತೆ ಉಸಿರಾಟದ ತೊಂದರೆಯನ್ನೂ ಅನುಭವಿಸುತ್ತಿದ್ದಾರೆ. ಭೋಪಾಲ್​ನಲ್ಲಿ 1984ರಲ್ಲಿ ನಡೆದಿದ್ದ ವಿಷಾನಿಲ ಸೋರಿಕೆ ದುರಂತದಲ್ಲಿ 25 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಇಂದಿಗೂ ಅಲ್ಲಿಯ ಜನರು ದುಷ್ಪರಿಣಾಮ ಎದುರಿಸುತ್ತಿದ್ದು, ಆ ಪ್ರದೇಶದ ಮಕ್ಕಳು ಅಂಗವಿಕಲತೆಯಿಂದ ಬಳಲುತ್ತಿದ್ದಾರೆ ಎಂದು ಸಮಾನ ಮನಸ್ಕ ವೇದಿಕೆಯ ಅಧ್ಯಕ್ಷ ಶ್ರೀನಿವಾಸ್​ ರಾವ್​ ಕೆ. ತಿಳಿಸಿದರು.
ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸಮಾನ ಮನಸ್ಕ ವೇದಿಕೆಯ ವತಿಯಿಂದ ಮಂಗಳವಾರ (ಡಿ.2) ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಸರ ಮಾಲಿನ್ಯ ನಿಯಂತ್ರಣದ ಕುರಿತು ಹಾಗೂ ಪರಿಸರ ಪ್ರೇಮದ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯತೆ ಇಂದು ಹೆಚ್ಚಿದೆ ಎಂದರು.

ಹೆಚ್ಚುತ್ತಿದೆ ಮಾಲಿನ್ಯ

ಉಪನ್ಯಾಸಕ ಕಿರಣ ಕಾಮತ್​ ಮಾತನಾಡಿ, ಕೈಗಾರಿಕೆಗಳಿಂದ ಹೊರಸೂಸುವ ವಿಷಾನಿಲಗಳು ಇಂದು ಪರಿಸರ ಮಾಲಿನ್ಯವನ್ನು ಹೆಚ್ಚಿಸುತ್ತಲಿದೆ. ಅಭಿವೃದ್ಧಿ ನೆಪದಲ್ಲಿ ಪರಿಸರ ಘಾಸಿಗೊಳಿಸಿದರೆ ಅದು ನಮ್ಮ ಜೀವನದ ಅಂತ್ಯಕ್ಕೂ ಕಾರಣವಾಗಬಹುದು ಎಂದರು.
ವಿದ್ಯಾರ್ಥಿಗಳಿಗೆ ಮಾಲಿನ್ಯ ನಿಯಂತ್ರಣದ ಕುರಿತು ಪ್ರಮಾಣ ವಚನ ಬೋಧಿಸಲಾಯಿತು. ವೇದಿಕೆಯ ಸದಸ್ಯರಾದ ಜ್ಯೋತಿ, ಬಿಂದಿಯಾ, ಭಾಗೀರಥಿ, ಸುರೇಶ್​, ಅನುರಾಧಾ ಜಿ.ಎಸ್​. ಲಕ್ಷ್ಮೀ, ರಾಘವೇಂದ್ರ, ವಿಜಯಲಕ್ಷ್ಮೀ, ವಸಂತ, ಮೀನಾಕ್ಷಿ ನಾಯಕ್​, ಸುಚಿತ್ರಾ, ಸಹನಾ, ಸುನೀತಾ ಹಾಗೂ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.