ಉಪ್ಪಿನಂಗಡಿ ಸರ್ಕಾರಿ ಶಾಲೆಯಲ್ಲಿ ವೈದ್ಯಕೀಯ ಉಚಿತ ಶಿಬಿರವನ್ನು ಎಂಎಲ್‌ಸಿ ಕಿಶೋರ್ ಕುಮಾರ್ ಉದ್ಘಾಟಿಸಿದರು. ಡಾ.ರಾಜಾರಾಂ ಕೆ.ಬಿ, ಚಿತ್ತರಂಜನ್ ಬೋಳಾರ್, ಡಾ.ಆಶಿತ್ ಇತರರಿದ್ದರು.  
ಉಡುಪಿ

ಜನಪರ ಕಾರ್ಯದೊಂದಿಗೆ ಆತ್ಮಶಕ್ತಿ ಮಾದರಿಯಾಗಲಿ

ಉಪ್ಪಿನಂಗಡಿ: ಕನಿಷ್ಠ ಅವಧಿಯಲ್ಲಿ ಗರಿಷ್ಠ ಸಾಧನೆಗೈದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂವು ಜನಪರ ಕಾರ್ಯಕ್ರಮಗಳೊಂದಿಗೆ ರಾಜ್ಯದಲ್ಲಿಯೇ ವಾದರಿ ಸಹಕಾರಿ ಸಂಸ್ಥೆಯಾಗಿ ಮೂಡಿಬರಲಿ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುವಾರ್ ಅಭಿಪ್ರಾಯಪಟ್ಟರು.
ಜಿಲ್ಲಾ ಸಹಕಾರ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಆಶ್ರಯದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂದ ನೇತೃತ್ವದೊಂದಿಗೆ ಉಪ್ಪಿನಂಗಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೈದ್ಯಕೀಯ, ನೇತ್ರ ತಪಾಸಣೆ ಹಾಗೂ ದಂತ ಚಿಕಿತ್ಸೆ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರೋಟರಿ ಕ್ಲಬ್ ಜೋನ್ 4ರ ಅಸಿಸ್ಟೆಂಟ್ ಗವರ್ನರ್ ಡಾ.ರಾಜಾರಾಂ ಕೆ.ಬಿ. ಮಾತನಾಡಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಡಾ.ಆಶಿತ್, ಸುನೀಲ್ ಕುವಾರ್ ದಡ್ಡು, ಅಜಿತ್ ಕುವಾರ್ ಪಾಲೇರಿ, ಎಸ್.ವಿ.ಹಿರೇಮಠ, ಅಶೋಕ್ ಕುವಾರ್ ಪಡ್ಪು, ಮನೋಜ್ ಎನ್.ಸಾಲ್ಯಾನ್, ವರದರಾಜ್ ಎಂ., ಜಯವಿಕ್ರಮ್, ಕೇಶವ ಪಿ.ಎಂ., ಅವನೀಶ್ ಭಟ್, ಹನುಮಂತಯ್ಯ, ಅಬ್ದುಲ್ ಮಜೀದ್, ಚಂದ್ರಾವತಿ, ಡಾ.ಸೌಮ್ಯಾ ಉಪಸ್ಥಿತರಿದ್ದರು.
ರಮೇಶ್ ಸ್ವಾಗತಿಸಿದರು. ಸೌಮ್ಯಾ ವಿಜಯ್ ವಂದಿಸಿದರು. ಧನಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಯುವವಾಹಿನಿ ಉಪ್ಪಿನಂಗಡಿ ಟಕ, ರೋಟರಿ ಕ್ಲಬ್ ಉಪ್ಪಿನಂಗಡಿ, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು, ಜೆಸಿಐ ಉಪ್ಪಿನಂಗಡಿ, ಅತ್ತಾವರ ಕೆಎಂಸಿ ಆಸ್ಪತ್ರೆ, ಮಣಿಪಾಲ್ ದಂತ ವೈದ್ಯಕೀಯ ಕಾಲೇಜು ಸಹಕರಿಸಿದವು.